ಎಸ್‌ಐಟಿ ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಎಲ್ಲರೂ ಕಾಪಾಡಬೇಕು: ಯು.ಟಿ. ಖಾದರ್

Public TV
1 Min Read

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ (Dharmasthala Mass Burials) ಎಸ್‌ಐಟಿ (SIT) ತನಿಖೆ ನಡೆಯುತ್ತಿದೆ. ತನಿಖೆ ಮುಗಿಯೋವರೆಗೂ ಧಾರ್ಮಿಕ ಸ್ಥಳದ ಪಾವಿತ್ರತೆ ಎಲ್ಲರೂ ಕಾಪಾಡಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ (UT Khader) ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣದ ಬಗ್ಗೆ ವಿಧಾನಸೌಧಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳ ಕೇಸ್ ಬಗ್ಗೆ ಈಗಾಗಲೇ ನಾನು ಪ್ರತಿಕ್ರಿಯೆ ನೀಡಿದ್ದೇನೆ. ಮಂಗಳವಾರ ವಿಪಕ್ಷಗಳು ಚರ್ಚೆಗೆ ಅವಕಾಶ ಕೇಳಿತ್ತು. ಶೂನ್ಯವೇಳೆಯಲ್ಲಿ ಅವಕಾಶ ಕೊಟ್ಟಿದ್ದೆ. ಸರ್ಕಾರವೂ ಅದಕ್ಕೆ ಉತ್ತರ ಕೊಟ್ಟಿದೆ. ಮತ್ತಷ್ಟು ಚರ್ಚೆಗೆ ಅವಕಾಶ ಬೇಕು ಅಂತ ಕೇಳಿದ್ದಾರೆ. ನಾನು ಚರ್ಚೆಗೆ ಅವಕಾಶ ಮಾಡಿಕೊಡುತ್ತೇನೆ ಎಂದರು. ಇದನ್ನೂ ಓದಿ: Delhi | ಈಜು ತರಗತಿಗೆ ಹೋಗಿದ್ದ ವೇಳೆ ಇಬ್ಬರು ಬಾಲಕಿಯರ ಮೇಲೆ ಗ್ಯಾಂಗ್ ರೇಪ್

ಧರ್ಮಸ್ಥಳ ಕೇಸ್‌ನಲ್ಲಿ ಎಸ್‌ಐಟಿ ತನಿಖೆ ಮಾಡುತ್ತಿದೆ. ಎಸ್‌ಐಟಿ ತನಿಖೆ ಮಾಡೋದಕ್ಕೆ ಬಿಡಬೇಕು. ತನಿಖೆ ಮುಗಿಯೋ ಮುನ್ನವೇ ನಾವೇ ತೀರ್ಪು ಕೊಡೋದು ಸರಿಯಲ್ಲ. ಧಾರ್ಮಿಕ ಸ್ಥಳದ ಪಾವಿತ್ರತೆಯನ್ನ ಕಾಪಾಡೋದು ನಮ್ಮ ಕರ್ತವ್ಯ. ಈ ವಿಚಾರದಲ್ಲಿ ಯಾರೂ ಸ್ವಯಂ ಅಭಿಪ್ರಾಯ ಕೊಡಬಾರದು ಎಂದು ತಿಳಿಸಿದರು. ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನ – ಮನೆಯ ಮೇಲೆ ಧ್ವಜಾರೋಹಣ ಮಾಡಿದ ಅಮಿತ್ ಶಾ

ಎಸ್‌ಐಟಿ ತನಿಖೆ ಆಗೋವರೆಗೂ ಎಲ್ಲರೂ ಸಮಾಧಾನವಾಗಿ ಇರಬೇಕು. ನಾವು ಸಮಾನತೆ, ಸೋದರ ಭಾವನೆಯಲ್ಲಿ ಇರೋರು. ಹೀಗಾಗಿ ತನಿಖೆ ಆಗೋ ಮುನ್ನ ಯಾರೂ ಮಾತಾಡೋದು ಬೇಡ. ಸದನದಲ್ಲಿ ಧರ್ಮಸ್ಥಳದ ವಿಚಾರವಾಗಿ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: Karwar | ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆ ಮೇಲೆ ಇ.ಡಿ ದಾಳಿ

Share This Article