`ಮಿಂತಾ ದೇವಿ’ ಟಿ ಶರ್ಟ್ ಹಾಕಿ ಪ್ರತಿಭಟನೆ – 124 ವರ್ಷದ ವೋಟರ್ ಪ್ರತ್ಯಕ್ಷ; ರಾಹುಲ್‌, ಪ್ರಿಯಾಂಕಾಗೆ ತರಾಟೆ

Public TV
3 Min Read

ನವದೆಹಲಿ: ಬಿಹಾರದಲ್ಲಿ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ವಿರೋಧಿಸಿ ಸಂಸತ್ ಭವನದ ಸಂಕೀರ್ಣದಲ್ಲಿ ಇಂಡಿ ಒಕ್ಕೂಟದ ಸಂಸದರು ‘ಟಿ-ಶರ್ಟ್ ಪ್ರತಿಭಟನೆ’ (T Shirt Protest) ನಡೆಸಿದರು. ಪ್ರತಿಭಟನೆ ವೇಳೆ ಟೀ ಶರ್ಟ್‌ ಮೇಲೆ ಮುದ್ರಿಸಿದ್ದ 124 ವರ್ಷದ ಮತದಾರರು ಎನ್ನಲಾದ ಮಹಿಳೆ ಪ್ರತ್ಯಕ್ಷವಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಆಕೆ ತನ್ನ ನಿಜ ವಯಸ್ಸನ್ನ ಬಹಿರಂಗಪಡಿಸಿದ್ದಾರೆ. ಜೊತೆಗೆ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿಗೆ (Priyanka Gandhi) ತರಾಟೆ ತೆಗೆದುಕೊಂಡಿದ್ದಾರೆ.

ವಿಪಕ್ಷಗಳ ಆಕ್ರೋಶ ಏನು?
ಬಿಹಾರದಲ್ಲಿ ಚುನಾವಣಾ ಆಯೋಗದ ಮತದಾರರ ಪಟ್ಟಿಯ (Voter List) ಪರಿಷ್ಕರಣೆ ವಿರುದ್ಧ ‘ಇಂಡಿಯಾ’ ಮೈತ್ರಿಕೂಟದ ಹಲವು ಸಂಸದರು ಸಂಸತ್ ಭವನದ ಸಂಕೀರ್ಣದಲ್ಲಿ ಮಕರದ್ವಾರದ ಎದುರು ʻಟೀ ಶರ್ಟ್‌ʼ ಪ್ರತಿಭಟನೆ ನಡೆಸಿದರು. ಬಿಹಾರದ ಮತದಾರರ ಪಟ್ಟಿಯಲ್ಲಿ ಕಂಡು ಬಂದಿದೆ ಎನ್ನಲಾದ 124 ವರ್ಷದ ಮತದಾರೆಯ ಹೆಸರನ್ನು ಬರೆದ ಬಿಳಿ ʻಟಿ ಶರ್ಟ್ʼ ಧರಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ಟಿಎಂಸಿಯ ಡೆರಿಕ್ ಒಬ್ರಿಯಾನ್, ಡಿಎಂಕೆಯ ಟಿ.ಆರ್ ಬಾಲು, ಎನ್‌ಸಿಪಿ (SP)ಯ ಸುಪ್ರಿಯಾ ಸುಳೆ ಸೇರಿದಂತೆ ಇಂಡಿ ಒಕ್ಕೂಟದ ಅನೇಕ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ರಹಸ್ಯ – 13ನೇ ಸ್ಥಳದಲ್ಲಿ ಮೂಳೆ ಸಿಗದೇ ಇದ್ರೆ ತನಿಖೆ ಸ್ಥಗಿತ?

ಪ್ರಿಯಾಂಕಾ ಗಾಂಧಿ ಸೇರಿದಂತೆ ಹಲವು ಸಂಸದರು ‘ಮಿಂತಾ ದೇವಿ’ ಎಂದು ಬರೆದಿದ್ದ ಹಾಗೂ ಅವರ ಭಾವಚಿತ್ರವಿದ್ದ ಟಿ-ಶರ್ಟ್ ಧರಿಸಿದ್ದರು. ಈ ಟಿ ಶರ್ಟ್‌ ನ ಹಿಂಬದಿ ‘124 ನಾಟೌಟ್‌’ ಎಂದು ಬರೆಯಲಾಗಿತ್ತು. ಇಂಡಿ ಒಕ್ಕೂಟದ ಪ್ರತಿಭಟನೆ ಬೆನ್ನಲ್ಲೇ ಮಾಧ್ಯಮಗಳು ಟೀ ಶರ್ಟ್‌ ಮೇಲೆ ಭಾವಚಿತ್ರವಿದ್ದ ಮಹಿಳೆಗಾಗಿ ಹುಡುಕಾಟ ನಡೆಸಿದ್ದವು. ಕೊನೆಗೂ ಆ ಮಹಿಳೆ ಪ್ರತ್ಯಕ್ಷವಾಗಿದ್ದು, ಮಾಧ್ಯಮ ಹೇಳಿಕೆ ನೀಡಿದ್ದಾರೆ. ಇದರಿಂದ ಇಂಡಿ ಒಕ್ಕೂಟಕ್ಕೆ ಮುಖಭಂಗ ಆದಂತಾಗಿದೆ.

ಪ್ರತ್ಯಕ್ಷವಾದ ಮಿಂತಾ ದೇವಿ ಹೇಳಿದ್ದೇನು?
ಸಿವಾನ್‌ನ ದರೌಂಡಾ ವಿಧಾನಸಭಾ ಕ್ಷೇತ್ರದಲ್ಲಿ ಮತದಾರಿಯಾಗಿ ನೋಂದಾಯಿಸಲ್ಪಟ್ಟ 35 ವರ್ಷದ ಮಿಂತಾದೇವಿ (Minta Devi) ಪ್ರಸ್ತುತ ಛಪ್ರಾದ ಪ್ರಭುನಾಥ್ ನಗರದಲ್ಲಿ ನೆಲೆಸಿದ್ದು, ಪ್ರತಿಭಟನೆ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ. ಇದನ್ನೂ ಓದಿ: ಎಟಿಎಂ ಕಳ್ಳತನ ಮಾಡುವಾಗಲೇ ಎಎಸ್ಐಯಿಂದ ಕಳ್ಳ ಅರೆಸ್ಟ್‌ – ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ನಾನೊಬ್ಬಳು ಗೃಹಿಣಿ, ನನಗೀಗ 35 ವರ್ಷ. ನನ್ನನ್ನ ರಾಜಕೀಯವಾಗಿ ಬಳಸಿಕೊಂಡಿರೋದು ಬೇಸರ ತಂದಿದೆ. ನನ್ನ ಕುಟುಂಬಕ್ಕೂ ಇದು ಮಾನಸಿಕ ಹಿಂಸೆಯಾಗಿದೆ. ನನ್ನ ಫೋಟೋವನ್ನ ಟೀ ಶರ್ಟ್‌ ಮೇಲೆ ಮುದ್ರಿಸಲು ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಯಾರು? ನನ್ನ ಚಿತ್ರವಿರುವ ಟೀ ಶರ್ಟ್ ಧರಿಸುವ ಹಕ್ಕನ್ನ ಅವರಿಗೆ ಯಾರು ಕೊಟ್ಟರು? ಬೆಳಗ್ಗೆಯಿಂದಲೂ ತುಂಬಾ ಜನ ನನಗೆ ಕರೆ ಮಾಡ್ತಿದ್ದಾರೆ. ಮಾಧ್ಯಮಗಳು ನನ್ನ ಬೆನ್ನುಬಿದ್ದಿವೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ: ಅಭಿಮಾನಿಗಳಿಗೆ ರಾಜಣ್ಣ ಭಾವುಕ ಪತ್ರ

ಮತದಾರರ ಪಟ್ಟಿಯಲ್ಲಿ ದೋಷವಿದ್ದರೆ, ಅದನ್ನ ಸರಿಪಡಿಸುವುದನ್ನ ಬಿಟ್ಟು ಯಾಕೆ ದೂಷಿಸಬೇಕು? ಯಾರಾದ್ರೂ ಕಣ್ಮುಚ್ಚಿಕೊಂಡು ಹಾಗೆ ಮಾಡ್ತಾರಾ? ಸರ್ಕಾರದ ದೃಷ್ಟಿಯಲ್ಲಿ ನನಗೆ 124 ವರ್ಷ ವಯಸ್ಸಾಗಿದ್ದರೆ, ವೃದ್ಧಾಪ್ಯ ಪಿಂಚಣಿ ಏಕೆ ಕೊಡ್ತಿಲ್ಲ? ನನ್ನ ಆಧಾರ್‌ನಲ್ಲಿ ಜನ್ಮ ದಿನಾಂಕ 1990 ಇದೆ. ಆದ್ರೆ ವೋಟರ್‌ ಐಡಿನಲ್ಲಿ 1900 ಅಂತ ದಾಖಲಿಸಲಾಗಿದೆ. ಇದರಿಂದ ನನ್ನನ್ನ 124 ವರ್ಷದ ಮತದಾರರೆಂದು ಪಟ್ಟಿ ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ನನಗೆ ಇದರ ಬಗ್ಗೆ ತಿಳಿಯಿತು. ಇದನ್ನ ಸರಿಪಡಿಸಬೇಕೆಂದು ಆಯೋಗಕ್ಕೆ ಮನವಿ ಮಾಡಿಕೊಳ್ತೇನೆ ಎಂದು ಅಲವತ್ತುಕೊಂಡಿದ್ದಾರೆ.

ಚುನಾವಣಾ ಆಯೋಗ ಹೇಳಿದ್ದೇನು?
ಪ್ರತಿಭಟನೆ ಬೆನ್ನಲ್ಲೇ ಮಿಂತಾದೇವಿಯ ಹುಟ್ಟಿದ ದಿನಾಂಕ ವೋಟರ್ ಐಡಿಯಲ್ಲಿ 15.07.1900 ಅಂತಿದೆ. ಆದರೆ, ಆಕೆಗೆ 124 ವರ್ಷ ಅಲ್ಲ, 35 ವರ್ಷ ಅಂತ ಚುನಾವಣಾ ಆಯೋಗದ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: ಸಿಂಧೂ ಜಲ ಒಪ್ಪಂದ ಸ್ಥಗಿತ ಮುಂದುವರಿಸಿದ್ರೆ ಯುದ್ಧದಿಂದ ಹಿಂದೆ ಸರಿಯಲ್ಲ, ಇದು ಮೋದಿ ಸರ್ಕಾರಕ್ಕೆ ಸಂದೇಶ: ಬಿಲಾವಲ್‌ ಭುಟ್ಟೋ

Share This Article