ಆ.17ಕ್ಕೆ ಬಿಜೆಪಿಯಿಂದ ಧರ್ಮಸ್ಥಳ ಚಲೋ

Public TV
1 Min Read

ಬೆಂಗಳೂರು: ಧರ್ಮಸ್ಥಳ ಅಸ್ಥಿ ವಿವಾದ (Dharmasthala Mass Burial Case) ಜೋರಾಗುತ್ತಿರುವಾಗಲೇ ಬಿಜೆಪಿಗರು ಧರ್ಮಸ್ಥಳ ಚಲೋಗೆ (Dharmasthala Chalo) ಮುಂದಾಗಿದ್ದಾರೆ.

ಇದೇ ಭಾನುವಾರ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ನೇತೃತ್ವದಲ್ಲಿ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು ಶಾಸಕರು ಧರ್ಮಸ್ಥಳಕ್ಕೆ ಭೇಟಿ ನೀಡಿ ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ರಾಜ್ಯಕ್ಕೆ ಕಮ್ಯುನಿಷ್ಟರ ಮಧ್ಯ ಪ್ರವೇಶ ಆಗಿದೆ. ಎಸ್‌ಐಟಿ ತನಿಖೆ ಹಾದಿ ತಪ್ಪುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದ್ದಾರೆ.

ಯೂಟ್ಯೂಬ್, ವೆಬ್‌ಸೈಟ್‌ಗಳಲ್ಲಿ ಧರ್ಮಸ್ಥಳ ದೇಗುಲಕ್ಕೆ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದುಗಳ ಶ್ರದ್ಧಾಕೇಂದ್ರದ ಬಗ್ಗೆ ಕ್ರಮ ಕೈಗೊಳ್ಳಿ. ಪ್ರಕರಣವನ್ನು ಎನ್‌ಐಎಗೆ ಒಪ್ಪಿಸಬೇಕು. ಈ ಹುನ್ನಾರದ ಹಿಂದೆ ಎಸ್‌ಡಿಪಿಐ, ಪಿಎಫ್‌ಐ ಕೂಡ ಇದೆ ಎಂದು ಪ್ರಧಾನಿ ಮೋದಿಗೆ ಬೆಂಗಳೂರಿನ ನಿವಾಸಿ ವಸಂತ ಬಗೇರ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ನಿಗೂಢ ಶವ ಕೇಸಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ

 

ಮಂತ್ರಾಲಯ ಶ್ರೀ ಮಾತಾಡಿ, ಸನಾತನ ಧರ್ಮದ ಮೇಲೆ ಪರದೇಶವರು ದೌರ್ಜನ್ಯ ಎಸಗುತ್ತಿದ್ದಾರೆ. ಅಂತಹ ದುಷ್ಟ ಶಕ್ತಿಗಳನ್ನು ದಮನಗೊಳಿಸಬೇಕು. ರಾಯರ ಬೃಂದಾವನದಲ್ಲಿ ಮೂಳೆಗಳಿವೆ, ಬುರುಡೆಗಳಿವೆ ಎಂದು ಬುರುಡೆ ಬಿಡುತ್ತಿದ್ದಾರೆ ಎಂದಿದ್ದಾರೆ. ಶಿರಸಿಯ ಸೋಂದಾ ಜನಮಠದ ಜಗದ್ಗುರು ಭಟ್ಟಾರಕ ಪಟ್ಟಾಚಾರ್ಯ ಶ್ರೀಗಗಳು ಧ್ವನಿ ಎತ್ತಿದ್ದಾರೆ.

ಈ ಮಧ್ಯೆ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಆಗುತ್ತಿದೆ ಎಂದು ಹಾಸನ, ಚಿತ್ರದುರ್ಗ, ಬೀದರ್‌ನಲ್ಲಿ ಹಿಂದೂಪರ ಸಂಘಟನೆಗಳು, ಭಕ್ತರು ಪ್ರತಿಭಟನೆ ನಡೆಸಿದ್ದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

Share This Article