2 ವರ್ಷದ ಹಿಂದೆ ಹುಡುಗಿಯನ್ನು ಚುಡಾಯಿಸಿದಕ್ಕೆ ಧಮ್ಕಿ ಹಾಕಿದ್ದವನ ಕೊಲೆ ಕೇಸ್ – ಐವರು ಅರೆಸ್ಟ್

Public TV
1 Min Read

ಕೋಲಾರ: 2 ವರ್ಷದ ಹಿಂದೆ ಹುಡುಗಿಯನ್ನು ಚುಡಾಯಿಸಿದಕ್ಕೆ ಧಮ್ಕಿ ಹಾಕಿದ್ದವನ ಯುವಕನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಕೋಲಾರದ ಮಾಸ್ತಿ ಪೊಲೀಸರು (Masti Police) ಯಶಸ್ವಿಯಾಗಿದ್ದಾರೆ.

ಮೃತ ರಾಕೇಶ್‌

ಗೋವಿಂದರಾಜು ಹಾಗೂ ಆತನ ನಾಲ್ವರು ಸಹಚರರು ಬಂಧಿತ ಆರೋಪಿಗಳು. ಮಾಲೂರು (Maluru) ತಾಲೂಕು ಕೊಮ್ಮನಹಳ್ಳಿಯ ಬಾರ್ ಬಳಿ ಆ. 7ರಂದು ರಾತ್ರಿ ಕಬಾಬ್ ವಿಚಾರವಾಗಿ ಆರೋಪಿಗಳು ಟೇಕಲ್ ಮೂಲದ ರಾಕೇಶ್ ಹಾಗೂ ಕಾರ್ತಿಕ್ ಜೊತೆ ಗಲಾಟೆ ಮಾಡಿದ್ದರು. ಕುಡಿದ ಮತ್ತಿನಲ್ಲಿ ಗಲಾಟೆ ತೆಗೆದಿದ್ದ ಆರೋಪಿಗಳು ರಾಕೇಶ್‌ನನ್ನು ಕೊಲೆ ಮಾಡಿ, ಕಾರ್ತಿಕ್ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಇದನ್ನೂ ಓದಿ: ಏನ್‌ ಮಾಡ್ತಿದ್ದೀರಿ… ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದ ವ್ಯಕ್ತಿಯನ್ನ ಗದರಿಸಿ ದೂರ ತಳ್ಳಿದ ಜಯಾ ಬಚ್ಚನ್‌

ಇದೀಗ ಹಳೆ ವೈಷಮ್ಯದ ಹಿನ್ನೆಲೆ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಮಾಸ್ತಿ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನೂ ರಾಕೇಶ್ ಹಾಗೂ ಕಾರ್ತಿಕ್ ನನ್ನ ಅಟ್ಟಾಡಿಸಿ ಕೊಲೆ ಮಾಡುವ ದೃಶ್ಯಗಳು ಹೊಟೇಲ್‌ನ ಸಿಸಿಟಿವಿ ಕ್ಯಾಮೆರಾಯಲ್ಲಿ ಸೆರೆಯಾಗಿತ್ತು.

Share This Article