ಏನ್‌ ಮಾಡ್ತಿದ್ದೀರಿ… ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದ ವ್ಯಕ್ತಿಯನ್ನ ಗದರಿಸಿ ದೂರ ತಳ್ಳಿದ ಜಯಾ ಬಚ್ಚನ್‌

Public TV
1 Min Read

ನವದೆಹಲಿ: ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ (Jaya Bachchan) ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರನ್ನ ಗದರಿಸಿ ದೂರ ತಳ್ಳಿದ ಪ್ರಸಂಗ ದೆಹಲಿಯ ಸಂವಿಧಾನ ಕ್ಲಬ್‌ನ (Constitution Club) ನಡೆದಿದೆ.

ಹಿರಿಯ ನಟಿಯೂ ಆಗಿರುವ ಸಂಸದೆ ಜಯಾ ಬಚ್ಚನ್‌ ಇಂದು ಮಧ್ಯಾಹ್ನ ಸಂವಿಧಾನ ಕ್ಲಬ್‌ನ ಗೇಟ್‌ ಬಳಿ ನಿಂತು ಗಣ್ಯರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಅವರಿಗರಿವಿಲ್ಲದಂತೆ ಸೆಲ್ಫಿ ಕ್ಲಿಕ್ಕಿಕೊಳ್ಳುತ್ತಿದ್ದರು. ಇದನ್ನೂ ಓದಿ: ಸೀತೆಯಿಂದ ಬೇರ್ಪಟ್ಟ ನಂತರ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ತಮಿಳು ಕವಿ ವಿವಾದಾತ್ಮಕ ಹೇಳಿಕೆ

ಇದರಿಂದ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡ ಜಯಾ ಬಚ್ಚನ್‌, ನೀವು ಏನ್‌ ಮಾಡ್ತಾ ಇದ್ದೀರಿ? ಅಂತ ವ್ಯಕ್ತಿಯನ್ನ ಜೋರಾಗಿ ತಳ್ಳಿದರು. ಇದನ್ನೂ ಓದಿ: ಕೆ.ಎನ್.ರಾಜಣ್ಣರನ್ನ ಸಂಪುಟದಿಂದ ತೆಗೆದದ್ದು ದುರದೃಷ್ಟಕರ, ಹೀಗೆ ಆಗಬಾರದಿತ್ತು: ಬಿ.ಕೆ.ಹರಿಪ್ರಸಾದ್‌

ಜಯಾ ಬಚ್ಚನ್‌ ವ್ಯಕ್ತಿಯನ್ನ ಹಿಡಿದು ತಳ್ಳಿದ 32 ಸೆಕೆಂಡುಗಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅನುಮತಿಯಿಲ್ಲದೇ ಏಕೆ ಸೆಲ್ಫಿ ಕ್ಲಿಕ್ಕಿಸಬೇಕು? ಅಂತ ಕೇಳಿದ್ರೆ, ಇನ್ನೂಬ್ಬರು ಇದು ದುರಹಂಕಾರಿ ನಡವಳಿಕೆ ಎಂದಿದ್ದಾರೆ. ಮತ್ತೊಬ್ಬರು ಜನರಿಗಾಗಿ ಹೋರಾಡುತ್ತೇನೆ ಅನ್ನುವವರು ಮತ್ತೊಬ್ಬ ವ್ಯಕ್ತಿಯನ್ನ ಹೀಗೆ ತಳ್ಳೋದು ಸರಿಯೇ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ತಾಂತ್ರಿಕ ದೋಷ ಶಂಕೆ – ಲ್ಯಾಂಡಿಂಗ್‌ ವೇಳೆ ಕಾರ್ಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ

Share This Article