ಪಂಚಾಂಗ
ರಾಹುಕಾಲ: 12:28 ರಿಂದ 2:02
ಗುಳಿಕಕಾಲ: 10:54 ರಿಂದ 12:28
ಯಮಗಂಡಕಾಲ: 7:46 ರಿಂದ 9:20
ವಾರ: ಬುಧವಾರ, ತಿಥಿ: ಚತುರ್ಥಿ
ನಕ್ಷತ್ರ: ಉತ್ತರಭಾದ್ರ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ವರ್ಷ ಋತು
ಶ್ರಾವಣ ಮಾಸ, ಕೃಷ್ಣ ಪಕ್ಷ
ಮೇಷ: ವ್ಯಾಪಾರ ವ್ಯವಹಾರದಲ್ಲಿ ಮೋಸ, ಮಾತಿನಿಂದ ಕಲಹ, ಅನಿರೀಕ್ಷಿತ ಲಾಭ, ಅನಾವಶ್ಯಕ ಖರ್ಚಿಗೆ ನೂರಾರು ದಾರಿ.
ವೃಷಭ: ಮಾತಾಪಿತರಲ್ಲಿ ಪ್ರೀತಿ, ಕಾರ್ಯಸಿದ್ಧಿ, ಶರೀರದಲ್ಲಿ ತಳಮಳ, ವಿವಾಹ ಯೋಗ, ಸಾಧಾರಣ ಫಲ.
ಮಿಥುನ: ದುಃಖದಾಯಕ ಪ್ರಸಂಗ, ಇಲ್ಲಸಲ್ಲದ ನಿಂದನೆ ಅಪವಾದ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಅನಾರೋಗ್ಯ.
ಕಟಕ: ಸಕಲರೊಡನೆ ಪ್ರೀತಿ, ಧೈರ್ಯವಾಗಿ ಮುನ್ನುಗ್ಗುವಿರಿ, ಸುಖ ಭೋಜನ, ಪರರ ಕೆಲಸಗಳಲ್ಲಿ ಭಾಗಿಯಾಗುವಿರಿ.
ಸಿಂಹ: ಕಠೋರವಾಗಿ ಮಾತನಾಡುವಿರಿ, ಉದ್ಯೋಗದಲ್ಲಿ ಪ್ರಗತಿ, ಸ್ಥಿರಾಸ್ತಿ ಸಂಪಾದನೆ, ಕುಟುಂಬ ಸೌಖ್ಯ.
ಕನ್ಯಾ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ, ವಿಪರೀತ ಕೋಪ, ದಾಂಪತ್ಯದಲ್ಲಿ ಪ್ರೀತಿ.
ತುಲಾ: ಮಿತ್ರರ ಬೆಂಬಲ, ಪರರ ತಪ್ಪಿನಿಂದ ಅಪವಾದ, ಶತ್ರು ಭಾದೆ, ಸ್ತ್ರೀಯರು ತಾಳ್ಮೆಯಿಂದ ಇರಿ.
ವೃಶ್ಚಿಕ: ಅಧಿಕ ತಿರುಗಾಟ, ಮಾನಸಿಕ ವ್ಯಥೆ, ಶ್ರಮಕ್ಕೆ ತಕ್ಕ ಫಲ, ಚರ್ಮ ವ್ಯಾಧಿ, ಪರರಿಗೆ ವಂಚನೆ.
ಧನಸ್ಸು: ಮಾಡುವ ಕೆಲಸದಲ್ಲಿ ಎಚ್ಚರ, ಮಾನಹಾನಿ, ಸರ್ಕಾರಿ ಕೆಲಸಗಳಲ್ಲಿ ವಿಘ್ನ, ಬಂಧುಗಳಲ್ಲಿ ವೈರತ್ವ, ಆರೋಗ್ಯ ಸಮಸ್ಯೆ.
ಮಕರ: ಯತ್ನ ಕಾರ್ಯಸಿದ್ಧಿ, ಕೆಲಸಕ್ಕಾಗಿ ತಿರುಗಾಟ, ವಾಹನದಿಂದ ತೊಂದರೆ, ನಿರೀಕ್ಷಿತ ಆದಾಯ.
ಕುಂಭ: ಸ್ವಂತ ಪರಿಶ್ರಮದಿಂದ ಅನುಕೂಲ, ಕೋಪ ಜಾಸ್ತಿ, ಆಲಸ್ಯ ಮನೋಭಾವ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಮಾತಿನಲ್ಲಿ ಹಿಡಿದವಿರಲಿ.
ಮೀನ: ಆಕಸ್ಮಿಕ ಧನ ಲಾಭ, ಕೀರ್ತಿ ಲಭ, ಸತ್ಕಾರ್ಯ ಶಕ್ತಿ, ಯತ್ನ ಕಾರ್ಯಾನುಕೂಲ, ದಾಯಾದಿ ಕಲಹ, ತಾಳ್ಮೆ ಅತ್ಯಗತ್ಯ.