– ನಾಗೇಂದ್ರ, ರಾಜಣ್ಣ ಆಯ್ತು, ನೆಕ್ಸ್ಟ್ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲ್ಯಾನ್- ಮಾಜಿ ಸಚಿವ
ಯಾದಗಿರಿ: ಕೆ.ಎನ್.ರಾಜಣ್ಣ (K.N.Rajanna) ಅವರು ಪ್ರಭಾವಿ ನಾಯಕ. ಅವರ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ ಎಂದು ಮಾಜಿ ಸಚಿವ ರಾಜುಗೌಡ (Rajugowda) ಹೊಸ ಬಾಂಬ್ ಸಿಡಿಸಿದ್ದಾರೆ.
ಸುರಪುರದಲ್ಲಿ ಮಾತನಾಡಿದ ಅವರು, ರಾಜಣ್ಣನ ಬಳಿಕ ಸತೀಶ್ ಜಾರಕಿಹೊಳಿ ಮುಗಿಸಲು ಪ್ಲಾನ್ ಇದೆ. ನಾಗೇಂದ್ರ, ರಾಜಣ್ಣ ಆಯ್ತು ನೆಕ್ಸ್ಟ್ ಸತೀಶ್ ಜಾರಕಿಹೊಳಿ ಸರದಿ. ಓಪನ್ ಆಗಿಯೇ ಹೇಳ್ತೀನಿ. ನಮ್ಮ ಕಮ್ಯುನಿಟಿಯಲ್ಲಿ ನಾವು ಹುಟ್ಟತ್ತಲೇ ನಾಯಕರು. ನಮ್ಮಲ್ಲಿ ಒಬ್ಬರೇ ನಾಯಕರಾಗಬೇಕು ಅಂತೇನಿಲ್ಲ. ರಾಜಣ್ಣ ಮಂತ್ರಿ ಸ್ಥಾನದಿಂದ ಇಳಿದರು ಅಂದ್ರೆ ನಮ್ಮಲ್ಲೇ ಒಬ್ಬರಿಗೆ ಸಿಗುತ್ತೆ ಅಂತ ಪ್ಲ್ಯಾನ್ ಹಾಕ್ತೀವಿ. ಮಂತ್ರಿ ಸ್ಥಾನ ಕೊಡುವ ಆಸೆಯನ್ನ ಮೇಲಿನವರು ತೋರಿಸಿ ಬಿಡ್ತಾರೆ. ನಾನ್ ಮಂತ್ರಿ ಆಗ್ತೀನಿ, ಯಾಕ್ ಇದನ್ನ ಮಾಡೋಣ ಅಂತೀವಿ. ನಮ್ಮಲ್ಲಿ ಒಗ್ಗಟ್ಟು ಇಲ್ಲದೇ ಇರೋದಕ್ಕೆ ರಮೇಶ್ ಜಾರಕಿಹೊಳಿ ಮೇಲೂ ಆ ಕೆಲಸ ಆಯ್ತು. ನಾಗೇಂದ್ರನ ಮೇಲೂ ಆಯ್ತು.. ಇವತ್ತು ರಾಜಣ್ಣಂದು ಇದೆ. ನೆಕ್ಸ್ಟ್ ಸತೀಶ್ ಅಣ್ಣಂದೂ ಇದೆ. ಬೇಕಾದರೇ ನಾಳೆ ಸತೀಶ್ ಅಣ್ಣಂಗೂ ಈ ರೀತಿ ಆದಾಗ ಪ್ಲೇ ಮಾಡಿ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸ್ತಾರೆ ಎಚ್ಚರಿಕೆಯಿಂದ ಇರಬೇಕು: ಸತೀಶ್ ಜಾರಕಿಹೊಳಿ
ಕಾಂಗ್ರೆಸ್‌ನಲ್ಲಿರುವ 15 ಜನ ವಾಲ್ಮೀಕಿ ಶಾಸಕರು ರಾಜಣ್ಣನ ಪರ ಹೇಳಿಕೆ ಕೊಡ್ರಿ. ಅವಾಗ ಕಾಂಗ್ರೆಸ್ ಹೈಕಮಾಂಡ್ ಬಂದು ಯಥಾಸ್ಥಿತಿ ರಾಜಣ್ಣನಿಗೆ ಸಚಿವ ಸ್ಥಾನ ಕೊಡ್ತಾರೆ. ವಾಲ್ಮೀಕಿ ನಾಯಕರಿಗೆ ನೆಕ್ಸ್ಟ್ ನೀನೆ ಸಿಎಂ ಅಂತ ಕಿವಿಯಲ್ಲಿ ಹೋವಿಟ್ಟು ಹೇಳ್ತಾರೆ. ಆ ಆಸೆಗೆ ಬಿದ್ದು ಇವತ್ತು ಸಮಾಜವೇ ರಾಜಣ್ಣನ ಬಲಿ ಕೊಡುವ ಕೆಲಸ ಆಗ್ತಿದೆ. ರಾಜಣ್ಣನ ದೆಹಲಿಗೆ ಕರೆದುಕೊಂಡು ಹೋಗ್ತಾರೆ, ಸ್ವಲ್ಪ ದಿನ ಹೋಗಲಿ ಅಂತ ರಾಜಣ್ಣನ ಸಮಾಧಾನ ಮಾಡ್ತಾರೆ. ಅದಕ್ಕೇನಾದ್ರೂ ರಾಜಣ್ಣ ಸಮಾಧಾನವಾದರೆ, ಅವರ ರಾಜಕೀಯ ಭವಿಷ್ಯ ಮುಗಿದ ಅಧ್ಯಾಯ. ಸತೀಶಣ್ಣನ ನೇತೃತ್ವದಲ್ಲಿ ವಾಲ್ಮೀಕಿ ಸಮುದಾಯದ ಶಾಸಕರು ರಾಜಣ್ಣ ಪರ ಪ್ರತಿಭಟಿಸಬೇಕು. ಹಾಗೇನಾದರೂ ಮಾಡಿದರೆ ನಾವು ಮುಂದೆ ರಾಜ್ಯದಲ್ಲಿ ರಾಜಕೀಯ ಮಾಡಬಹುದು. ಇಲ್ಲದಿದ್ದರೆ ಈ ಸಮಾಜದವರಲ್ಲಿ ಒಗ್ಗಟ್ಟಿಲ್ಲ, ಇವರಲ್ಲಿ ಹೊಂದಾಣಿಕೆ ಇಲ್ಲ. ಇವರನ್ನ ಹೇಗೆ ಬೇಕಾದರೂ ಬಲಿ ಕಾ ಬಕ್ರಾ ಮಾಡಬಹುದು ಅಂತ ತೆಗೆದುಕೊಂಡು ಹೋಗ್ತಾರೆ ಎಂದು ಎಚ್ಚರಿಸಿದ್ದಾರೆ.
ರಾಜಣ್ಣ ವಜಾ ಹಿಂದೆ ಮಹಾನಾಯಕನ ಪಾತ್ರ ಇದೆ. ಹಿಂದೆ ಪ್ಲ್ಯಾನ್ ಮಾಡಿ ರಮೇಶ್ ಜಾರಕಿಹೊಳಿ ಅವರನ್ನ ಕೇಳಗೆ ಇಳಿಸಿದ್ರು. ಈಗ ರಾಜಣ್ಣ ಅವರಿಗೆ ಪ್ಲ್ಯಾನ್ ಮಾಡಿದ್ರು, ಆದ್ರೆ ಅವರು ಹನಿಟ್ರ್ಯಾಪ್ ನಿಂದ ಬಚಾವ್ ಆದ್ರು. ಅವರನ್ನ ಹೇಗೆ ಮುಗಿಸಬೇಕು ಅಂತ ಪ್ಲಾö್ಯನ್ ಮಾಡಿದ್ರು. ಯಾಕೆಂದರೆ ರಾಜಣ್ಣ ಅವರ ಕ್ಷೇತ್ರದಲ್ಲಿ ಪ್ರಭಾವಿ ನಾಯಕ. ಅವರ ಮಗನನ್ನ ಪರಿಷತ್ ಸದಸ್ಯನಾಗಿ ಆಯ್ಕೆ ಮಾಡಿಸಿದ್ರು. ಮಹಾನಾಯಕನಿಗೆ ಯಾರು ಎದುರು ಆಗ್ತಾರೆ, ಎಲ್ಲರನ್ನೂ ಮುಗಿಸ್ತಾರೆ. ರಾಹುಲ್ ಗಾಂಧಿಗೆ ಕನ್ನಡ ಬರಲ್ಲ.. ಹೀಗಾಗಿ, ಅವರ ಸ್ಟೇಟ್ಮೆಂಟ್ ತಿರುಚಿ ಅವರಿಗೆ ಹೇಳಿದ್ದಾರೆ. ರಾಜಣ್ಣ ಅವರಿಗೆ ಯಾವ ಪಕ್ಷವೂ ಸಹ ಬೇಡ ಅಂತ ಹೇಳಲ್ಲ. ಮೂರ್ನಾಲ್ಕು ಕ್ಷೇತ್ರದಲ್ಲಿ ಅವರದ್ದು ಪ್ರಭಾವವಿದೆ. ರಾಜಣ್ಣ ಅವರು ಸಾಮಾನ್ಯ ನಾಯಕ ಅಲ್ಲ, ಪ್ರಭಾವಿ ನಾಯಕ. ಕೆಲವರು ಪಕ್ಷದಿಂದ ಮಹಾನಾಯಕ ಆಗಿದ್ದಾರೆ, ಆದ್ರೆ ರಾಜಣ್ಣ ಜನರಿಂದ ಮಹಾನಾಯಕರಾಗಿದ್ದಾರೆ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಕೆ.ಎನ್.ರಾಜಣ್ಣರನ್ನ ಸಂಪುಟದಿಂದ ತೆಗೆದದ್ದು ದುರದೃಷ್ಟಕರ, ಹೀಗೆ ಆಗಬಾರದಿತ್ತು: ಬಿ.ಕೆ.ಹರಿಪ್ರಸಾದ್
ರಾಜಣ್ಣಗೆ ಪಕ್ಷ ಅವಶ್ಯಕತೆ ಇಲ್ಲ, ಪಕ್ಷಕ್ಕೆ ಅವರ ಅವಶ್ಯಕತೆಯಿದೆ. ರಾಜಣ್ಣ ಈ ಅನ್ಯಾಯದ ವಿರುದ್ಧ ಪ್ರತಿಭಟಿಸಿಲ್ಲ ಅಂದ್ರೆ ಅವರದ್ದು ಅಷ್ಟೇ ಅಲ್ಲ ಅವರ ಮಗನ ರಾಜಕೀಯ ಕೂಡ ಮುಗಿದು ಹೋಗುತ್ತದೆ. ಗಟ್ಟಿಯಾಗಿ ಹುಲಿ ತರಹ ಹೊರಗೆ ಬಂದು ಪ್ರತಿಭಟಿಸಿದ್ರು ಹೀರೊ ಆಗ್ತೀರಾ ಎಂದು ಮಾತನಾಡಿದ್ದಾರೆ.