`ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

Public TV
1 Min Read

ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರನ್ನ (Upendra) ಹಾಡಿ ಹೊಗಳಿದ್ದಾರೆ. ಮುಕ್ತ ವೇದಿಕೆಯಲ್ಲಿ ತಲೈವಾ ಕನ್ನಡದ ಬುದ್ಧಿವಂಥನ್ನ ಕೊಂಡಾಡಿದ್ದಾರೆ. ಈ ಘಟನೆ ನಡೆದಿದ್ದು ಕೂಲಿ (Coolie Movie) ಸಿನಿಮಾ ಪ್ರಿರಿಲೀಸ್ ಇವೆಂಟ್‌ನಲ್ಲಿ. ಚೆನೈನಲ್ಲಿ ನಡೆದ ಇವೆಂಟ್‌ನಲ್ಲಿ ಅದೇ ನೆಲದಲ್ಲೇ ಕನ್ನಡದ ಓಂ ಸಿನಿಮಾ ಕುರಿತಾಗಿ ಒಳ್ಳೆಯ ಮಾತನಾಡಿದ್ದಾರೆ. ಕಾರಣ ಕೂಲಿ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಿರಿಲೀಸ್ ಇವೆಂಟ್‌ನಲ್ಲಿ ಪಾಲ್ಗೊಂಡ ಉಪೇಂದ್ರ ಕುರಿತು ತಲೈವಾ ಹೊಗಳಿಕೆಯ ಮಾತನ್ನಾಡಿದ್ದಾರೆ.

ನಟನೆ ನಿರ್ದೇಶನದಲ್ಲಿ ಸೈ ಅನ್ನಿಸಿಕೊಂಡ ಉಪೇಂದ್ರ ವಿಶ್ವಾದ್ಯಂತ ಛಾಪು ಮೂಡಿಸಿರುವ ಕನ್ನಡದ ಪ್ರತಿಭೆ. ವಿವಿಧ ಭಾಷೆಯಲ್ಲಿ ಉಪೇಂದ್ರ ನಟಿಸುತ್ತಾ ಬಂದಿದ್ದಾರೆ. ಇದೀಗ ಉಪೇಂದ್ರ ಜೊತೆ ಕೂಲಿ ಚಿತ್ರದಲ್ಲಿ ತೆರೆಹಂಚಿಕೊಂಡಿರುವ ರಜನಿಕಾಂತ್ ಉಪ್ಪಿ ಗುಣಗಾನ ಮಾಡಿರುವ ಮಾತುಗಳು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ತಾವು ನಟಿಸಿದ್ದ `ಭಾಷಾ ಸಿನಿಮಾಗಿಂತ ಉಪೇಂದ್ರ ನಿರ್ದೇಶಿಸಿದ್ದ ಸಿನಿಮಾ ಹತ್ತು ಪಟ್ಟು ಉತ್ತಮ ಸಿನಿಮಾ’ ಎಂದಿರುವ ರಜನಿಕಾಂತ್ ಮಾತು ಗಮನಾರ್ಹ. ಇದನ್ನೂ ಓದಿ: ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ

ಉಪೇಂದ್ರ ಕುರಿತು ರಜನಿಕಾಂತ್ ಮಾತುಗಳೇನು?
ಭಾರತದಲ್ಲಿರುವ ಮೋಸ್ಟ್ ಇಂಟಲೆಕ್ಚುವಲ್ ಡೈರೆಕ್ಟರ್‌ಗಳಿಗೆ ಇನ್ಸಿರೇಷನ್ ಅಂದ್ರೆ ಅದು ಉಪೇಂದ್ರ, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ ಹಿಂದಿ, ತೆಲುಗು ಮಲಯಾಳಂ, ತಮಿಳು ಎಲ್ಲರೂ ಉಪೇಂದ್ರರಿಂದ ಸಾಕಷ್ಟು ಕಲಿತಿದ್ದಾರೆ. ಉಪೇಂದ್ರ ನಟರಾಗಿ ಅಲ್ಲ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದವರು, ಕನ್ನಡದಲ್ಲಿ ಶಿವರಾಜ್‌ಕುಮಾರ್ ಆಕ್ಟ್ ಮಾಡಿದ್ದ ಓಂ ಸಿನಿಮಾವನ್ನ ಅವರೇ ನಿರ್ದೇಶನ ಮಾಡಿದ್ರು , ಈ ಸಿನಿಮಾ ಭಾಷಾ ಚಿತ್ರಕ್ಕಿಂತ ಹತ್ತುಪಟ್ಟು ಬೆಟರ್ ಸಿನಿಮಾ, ನನಗೆ ಆಕ್ಟರ್ ಉಪೇಂದ್ರಗಿಂತ ಡೈರೆಕ್ಟರ್ ಉಪೇಂದ್ರ ಇಷ್ಟ. ಈಗ ಲೋಕೇಶ್ ಕನಕರಾಜ್ ನಾನ್‌ಲೀನಿಯರ್ ಸಿನಿಮಾ ಮಾಡ್ತಿದ್ದಾರೆ, ನಾನ್‌ಲೀನಿಯರ್ ಸಿನಿಮಾಗಳನ್ನ ಆಗಲೇ ಮಾಡುತ್ತಿದ್ದವರು ಡೈರೆಕ್ಟರ್ ಉಪೆಂದ್ರ.

Share This Article