– ರಾತ್ರಿಯೆಲ್ಲಾ ಕಾರ್ಯಾಚರಣೆಯ ಮಾಹಿತಿ ಸಂಗ್ರಹ
ಮಂಗಳೂರು: ಧರ್ಮಸ್ಥಳದಲ್ಲಿ (Dharmasthala Case) ನೂರಾರು ಶವ ಹೂತಿಟ್ಟ ಆರೋಪ ಪ್ರಕರಣಕ್ಕೆ ಅನಾಮಿಕ ವ್ಯಕ್ತಿಯ ವಿಚಾರಣೆ ನಡೆಯುತ್ತಿದೆ. ಎಸ್ಐಟಿ ಈಗಾಗಲೇ ಅರ್ಧ ತಿಂಗಳು ಕೆಲಸ ಮಾಡಿದೆ. ಜಿಪಿಆರ್ ಮೂಲಕ ಶೋಧಕಾರ್ಯ ನಡೆಯುತ್ತಿರುವಾಗಲೇ ಪ್ರಕರಣಕ್ಕೆ ಮಾನವ ಹಕ್ಕುಗಳ ಆಯೋಗ (Human Rights Commission) ಎಂಟ್ರಿ ಕೊಟ್ಟಿದೆ.
ಎಸ್ಐಟಿ ಅಧಿಕಾರಿಗಳು ಬಹಳ ಮುತುವರ್ಜಿಯಿಂದ ಎಲ್ಲಾ ತನಿಖೆಗಳ ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ. ಪ್ರತ್ಯಕ್ಷ ಸಾಕ್ಷಿಗಳು ಮತ್ತು ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಪಂಚಾಯತ್ ಠಾಣೆ ಎಲ್ಲಾ ದಾಖಲೆಗಳನ್ನು ಸಂಗ್ರಹಿಸಿ ಆ ಕಾಲಮಾನದಲ್ಲಿ ಕೆಲಸ ಮಾಡಿದ ಎಲ್ಲರ ಸಾಕ್ಷಿಗಳ ಸಂಗ್ರಹ ನಡೆಸಲಾಗುತ್ತಿದೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ ಬಗ್ಗೆ ಎಸ್ಐಟಿ ತನಿಖೆ ಮುಗಿಯೋವರೆಗೂ ನಾನು ಮಾತನಾಡಲ್ಲ: ಜಿ.ಪರಮೇಶ್ವರ್
ಕಳೆದ ಎರಡು ವಾರಗಳಿಂದ ಎಸ್ಐಟಿ ಕಾಲಿಗೆ ಚಕ್ರ ಕಟ್ಟಿಕೊಂಡು ಸಮಾಧಿ ಅಗೆದು ಶೋಧ ನಡೆಸಲಾಗುತ್ತಿದೆ. ಅನಾಮಿಕ ಕೊಟ್ಟ ದೂರು ಸತ್ಯನಾ ಸುಳ್ಳಾ ಎಂದು ವಿಚಾರಣೆ ಜೊತೆ ತನಿಖೆ ನಡೆಸುತ್ತಿದೆ. ಈ ನಡುವೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಧರ್ಮಸ್ಥಳಕ್ಕೆ ಧುಮುಕಿದೆ. ಬೆಳ್ತಂಗಡಿ ತಾಲೂಕಿನಲ್ಲಿ ಬೀಡು ಬಿಟ್ಟ ನಾಲ್ವರು ಅಧಿಕಾರಿಗಳ ತಂಡದಲ್ಲಿ ಓರ್ವ ಐಪಿಎಸ್ ಅಧಿಕಾರಿಯಿದ್ದಾರೆ.
ವಿವಿಧ ಆಯಾಮಗಳಲ್ಲಿ ದಾಖಲೆ ಮತ್ತು ಮಾಹಿತಿಗಳ ಸಂಗ್ರಹ ಮಾಡುತ್ತಿದ್ದಾರೆ. ಎಸ್ಐಟಿ, ಪೊಲೀಸ್ ಸ್ಟೇಷನ್, ದೇವಸ್ಥಾನ, ಗ್ರಾಮ ಪಂಚಾಯತ್ನಿಂದ ದಾಖಲೆಗಳನ್ನು ಕೇಳಿದ ಮಾನವ ಹಕ್ಕುಗಳ ಆಯೋಗ, ಸ್ವಚ್ಛತಾ ಕಾರ್ಮಿಕರಿಂದ ಹೇಳಿಕೆಗಳನ್ನು ಸಂಗ್ರಹ ಮಾಡುತ್ತಿದೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | SIT ಭೇಟಿಯಾದ ಪದ್ಮಲತಾ ಕುಟುಂಬ – 38 ವರ್ಷಗಳ ಹಳೆಯ ಕೇಸ್ ತನಿಖೆಗೆ ಒತ್ತಾಯ
ಆಯೋಗ ಗೌಪ್ಯವಾಗಿ ಹಲವರ ಭೇಟಿ ಮಾಡಿ ವಿಚಾರಣೆಗೈದಿದೆ. ಮುಂದಿನ ನಾಲ್ಕೈದು ದಿನ ಧರ್ಮಸ್ಥಳದಲ್ಲಿ ಬೀಡು ಬಿಡಲಿರುವ ಮಾನವ ಹಕ್ಕುಗಳ ಆಯೋಗ ಹಲವಾರು ಆಯಾಮಗಳಲ್ಲಿ ತನಿಖೆ ನಡೆಸಿ ವರದಿ ಸಿದ್ಧಪಡಿಸಲಿದೆ.