ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾಗೆ (Dasara) ಸಕಲ ಸಿದ್ಧತೆ ನಡೆಯುತ್ತಿದೆ. ದಸರಾ ಗಜಪಡೆಗೆ ಮಂಗಳವಾರದಿಂದಲೇ ತರಬೇತಿ ನೀಡಲಾಗುತ್ತದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಚಿನ್ನದ ಅಂಬಾರಿ ಹೊರಲು ತನ್ನ ಟೀಂ ಜೊತೆ ಕ್ಯಾಪ್ಟನ್ ಅಭಿಮನ್ಯು ಅರಣ್ಯ ಭವನದಿಂದ ಮೈಸೂರು (Mysuru) ಅರಮನೆಗೆ ಭಾನುವಾಋ ಆಗಮಿಸಿದ್ದಾನೆ. ಇಂದು (ಸೋಮವಾರ) ಗಜಪಡೆಯ ಪ್ರತಿಯೊಂದು ಆನೆಯ ಆರೋಗ್ಯ ಮತ್ತು ತೂಕವನ್ನು ಪರೀಕ್ಷಿಸಲಾಯಿತು. ನಗರದ ಧನ್ವಂತ್ರಿ ರಸ್ತೆಯಲ್ಲಿರುವ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ಪ್ರತಿಯೊಂದ ಆನೆಗಳ ತೂಕ ಪರಿಶೀಲನೆ ಮಾಡಲಾಯಿತು. ಇದರಲ್ಲಿ ಅಭಿಮನ್ಯುವೇ 5,360 ಕೆಜಿ ತೂಕ ತೂಗುವುದರ ಮೂಲಕ ಎಲ್ಲರಿಗಿಂತ ಬಲಿಷ್ಠವಾಗಿದ್ದಾನೆ. ಎಲ್ಲಾ 9 ಆನೆಗಳು ದೈಹಿಕವಾಗಿ ಸದೃಢ ವಾಗಿವೆ ಅಂತ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Mysuru Dasara | ಅಂಬಾರಿ ಹೊರುವ ಅಭಿಮನ್ಯುಗಿಂತ ಭೀಮನೇ ಬಲಶಾಲಿ
ಸತತ ಒಂದು ತಿಂಗಳ ಆನೆಗಳಿಗೆ ನಿತ್ಯ ತರಬೇತಿ ನೀಡಲಾಗುತ್ತದೆ. ಬೆಳಗ್ಗೆ ಸಂಜೆ ಎರಡು ಸಮಯ ಅರಮನೆಯಿಂದ ಬನ್ನಿಮಂಟಪದವರೆಗೆ (Bannimantap) ತಾಲೀಮು ನಡೆಸಲಾಗುತ್ತೆ. ಇದರೊಂದಿಗೆ ಪಟಾಕಿ, ಕುಶಾಲತೋಪು ಸಿಡಿಸುವ ತಾಲೀಮು, ಮರದ ಅಂಬಾರಿ ಮೆರವಣಿಗೆ ತಾಲೀಮು ಸಹ ನಡೆಯಲಿವೆ. ಸದ್ದುಗದ್ದಲದಿಂದ ವಿಚಲಿತವಾಗದಂತೆ ನೋಡಿಕೊಳ್ಳಲು ಆನೆಗಳಿಗೆ ಈ ರೀತಿಯ ತರಬೇತಿ ನೀಡಲಾಗುತ್ತೆ. ಇದನ್ನೂ ಓದಿ: ಅರಣ್ಯ ಭವನದಲ್ಲಿ ದಸರಾ ಗಜಪಡೆಗೆ ಪೂಜೆ – ಅರಮನೆಗೆ ಎಂಟ್ರಿ ಕೊಟ್ಟ ಅಭಿಮನ್ಯು ಟೀಂ