ಸೆಪ್ಟೆಂಬರ್‌ ಕ್ರಾಂತಿ ಎಂದಿದ್ದ ರಾಜಣ್ಣಗೆ ಆಗಸ್ಟ್‌ನಲ್ಲೇ ಕೇಡುಗಾಲ – ವಜಾಗೆ ಕಾರಣ ಏನು?

Public TV
2 Min Read

ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ನೋಡ್ತಾ ಇರಿ ಎಂದಿದ್ದ ಕೆ.ಎನ್. ರಾಜಣ್ಣಗೆ (KN Rajanna) ಆಗಸ್ಟ್‌ನಲ್ಲೇ ಕೇಡುಗಾಲ ಬಂದುಬಿಟ್ಟಿದೆ. ಹೈಕಮಾಂಡ್ ಕಟ್ಟಪ್ಪಣೆ ಮೇರೆಗೆ ಲೂಸ್‌ಟಾಕ್ ರಾಜಣ್ಣರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಸಂಪುಟದಿಂದ ಸಂಪುಟದಿಂದಲೇ ವಜಾಗೊಳಿಸಿದ್ದಾರೆ.

ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ (Rahul Gandhi) ನೀಡಿದ್ದ ಹೇಳಿಕೆಗೆ ರಾಜಣ್ಣ ವ್ಯಂಗ್ಯಭರಿತ ಹೇಳಿಕೆ ಕೊಟ್ಟಿದ್ದರು. ನಮ್ಮ ಕಾಲದಲ್ಲೇ ಅಲ್ವಾ ವೋಟರ್ ಲಿಸ್ಟ್ ಆಗಿದ್ದು, ಈಗ ದೂರಿದ್ರೆ ಏನರ್ಥ ಎಂಬ ದಾಟಿಯಲ್ಲಿ ರಾಜಣ್ಣ ಹೇಳಿಕೆ ಕೊಟ್ಟಿದ್ದರು. ಇದು ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿತ್ತು. ಇದನ್ನೂ ಓದಿರಾಜಣ್ಣ ರಾಜೀನಾಮೆ ಅಲ್ಲ, ಸಂಪುಟದಿಂದಲೇ ಕಿಕ್‌ಔಟ್‌

ರಾಜಣ್ಣ ಲೂಸ್‌ ಟಾಕ್‌ ನೀಡುವುದು ಹೊಸದೆನಲ್ಲ. ಈ ಹಿಂದೆಯೂ ಹಲವು ಬಾರಿ ಸರ್ಕಾರ ಮತ್ತು ಸಚಿವರರು, ಹೈಕಮಾಂಡ್‌ ನಾಯಕರ ವರ್ತನೆಯನ್ನು ಟೀಕಿಸಿದ್ದರು. ಈ ಸಂಬಂಧ ಹೈಕಮಾಂಡ್‌ ಹಂತಕ್ಕೆ ದೂರು ಹೋಗಿತ್ತು. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಕ್ಷಮಿಸದ ಹೈಕಮಾಂಡ್‌ ರಾಜಣ್ಣ ಅವರನ್ನೇ ಸಂಪುಟದಿಂದ ಕಿಕ್‌ಔಟ್‌ ಮಾಡಿಸಿದೆ. ಇದನ್ನೂ ಓದಿ: ರಾಹುಲ್ಖಡಕ್ಸೂಚನೆ ಬೆನ್ನಲ್ಲೇ ರಾಜಣ್ಣ ರಾಜೀನಾಮೆ!

ವಜಾಗೆ ಕಾರಣ ಏನು?
ಶಾಸಕರು, ಸಚಿವರ ಜೊತೆ ಸುರ್ಜೇವಾಲಾ ಸಭೆಗೆ ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಸುರ್ಜೇವಾಲಾ ರಾಜ್ಯದ ಮಂತ್ರಿಗಳ ಜೊತೆ ಸಭೆ ನಡೆಸುತ್ತಿದ್ದಾಗ ರಾಜಣ್ಣ ಯುರೋಪ್‌ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ದಿನಾಂಕ ಮೊದಲೇ ನಿಗದಿಯಾಗಿದೆ. ಸುರ್ಜೇವಾಲಾ ಜೊತೆಗಿನ ಸಭೆ ಇತ್ತೀಚಿಗೆ ಫಿಕ್ಸ್ ಆಗಿದೆ. ಹೀಗಾಗಿ ನಾನು ವಿದೇಶ ಪ್ರವಾಸದಿಂದ ವಾಪಸ್‌ ಬಂದ ಮೇಲೆ ಸುರ್ಜೇವಾಲಾರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತೇನೆ ಎಂದಿದ್ದರು.

ಲೋಕಸಭಾ ಚುನಾವಣೆಯ ಸಮಯದಲ್ಲಿ 5 ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು. ಆಗ ಹಲವು ಜಾತಿಗಳು ನಮ್ಮ ಪಕ್ಷಕ್ಕೆ ಮತ ಹಾಕಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

 

ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು. ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯವಿದೆ. ಹೀಗಾಗಿ ಉಪ ಮುಖ್ಯಮಂತ್ರಿ ಮತ್ತು ಡಿಸಿಎಂ ಎರಡೂ ಹುದ್ದೆಯನ್ನು ಒಬ್ಬರೇ ನಿರ್ವಹಿಸುವುದು ಸರಿಯಲ್ಲ ಎಂದಿದ್ದರು. ಇದನ್ನೂ ಓದಿ: ರಾಜಣ್ಣ ವಜಾ ಬೆನ್ನಲ್ಲೇ ಹೊಸ ಬಾಂಬ್ಸಿಡಿಸಿದ ಕುಣಿಗಲ್ರಂಗನಾಥ್

ಡಿಸಿಎಂ ಡಿಕೆ ಶಿವಕುಮಾರ್‌ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾಗ ದಲಿತ ಸಚಿವರು ಸಭೆ ನಡೆಸಿದ್ದರು. ಈ ಡಿನ್ನರ್‌ ಪಾಲಿಟಿಕ್ಸ್ ಅನ್ನು ರಾಜಣ್ಣ ಸಮರ್ಥಿಸಿಕೊಂಡಿದ್ದರು. ವಿವಾದ ಜೋರಾಗುತ್ತಿದ್ದಂತೆ ರಾಜಣ್ಣ ನಾವು ಶೋಷಿತರ ಸಭೆ ನಡೆಸಲು ಚರ್ಚೆ ನಡೆಸಿದ್ದವರು ಎಂದು ಹೇಳಿಕೆ ನೀಡಿದ್ದರು.

ರಾಜಣ್ಣ ಹೇಳಿಕೆಯ ಪೈಕಿ ಅತಿ ಹೆಚ್ಚು ಚರ್ಚೆಯಾಗಿದ್ದು ಸೆಪ್ಟೆಂಬರ್‌ ಕ್ರಾಂತಿ ಹೇಳಿಕೆ. ಹೇಳಿಕೆ ನೀಡಿದ್ದು ಮಾತ್ರವಲ್ಲ ಅದನ್ನು ಸಮರ್ಥನೆ ಸಹ ಮಾಡಿಕೊಂಡಿದ್ದರು. ಸೆಪ್ಟೆಂಬರ್‌ ತಿಂಗಳಲ್ಲಿ ಕ್ರಾಂತಿಯಾಗಲಿದೆ ಎಂದು ಹಿಂದೆಯೂ ಹೇಳಿದ್ದೆ, ಈಗಲೂ ಅದನ್ನು ಪುನರುಚ್ಚರಿಸುತ್ತಿದ್ದೇನೆ. ನನ್ನ ಹೇಳಿಕೆಗೆ ಬದ್ಧನಾಗಿದ್ದು, ಅದರಿಂದ ಹಿಂದೆ ಸರಿಯುವುದಿಲ್ಲ. ಆದರೆ, ಯಾವ ರೀತಿಯ ಕ್ರಾಂತಿ ಎಂಬುದನ್ನು ಈಗಲೇ ಹೇಳಿದರೆ ಅದರ ಬಗ್ಗೆ ಆಸಕ್ತಿ ಇರುವುದಿಲ್ಲ. ಇದನ್ನು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ. ಆದರೆ ಕೆಲವರು ಏನೇನು ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದನ್ನು ತಮ್ಮೊಳಗೆ ಇಟ್ಟುಕೊಂಡಿದ್ದಾರೆ ಎಂದಿದ್ದರು.

Share This Article