ಮಳೆಗಾಲದ ಅಧಿವೇಶನ – ಸರ್ಕಾರಕ್ಕೆ ಮೊದಲ ದಿನವೇ ದೋಸ್ತಿಗಳಿಂದ ಪ್ರತಿಭಟನೆ ಬಿಸಿ

Public TV
1 Min Read

ಬೆಂಗಳೂರು: ಮಳೆಗಾಲ ಅಧಿವೇಶನದ ಮೊದಲ ದಿನವೇ ಮೈತ್ರಿ ಪಕ್ಷಗಳು ಸರ್ಕಾರಕ್ಕೆ ಹೋರಾಟ ಮೂಲಕ ಬಿಸಿ ಮುಟ್ಟಿಸಿದೆ. ಕಾಲ್ತುಳಿತ ದುರಂತದ ಹೊಣೆಯನ್ನು ಸರ್ಕಾರವೇ ಹೊರಬೇಕೆಂದು ಆಗ್ರಹಿಸಿ ಇಂದು (ಆ.11) ಬೆಳಿಗ್ಗೆ ಸದನ ಆರಂಭಕ್ಕೂ ಮುನ್ನ ಬಿಜೆಪಿ-ಜೆಡಿಎಸ್ ಶಾಸಕರು, ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಿದರು.ಇದನ್ನೂ ಓದಿ: ಚಾ.ನಗರ| ಫೋಟೊ ತೆಗೆಯಲು ಹೋದವನ ಮೇಲೆ ಕಾಡಾನೆ ದಾಳಿ

ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿ ವಿಪಕ್ಷ ನಾಯಕರು ಘೋಷಣೆ ಕೂಗಿದರು. ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸರ ಮೇಲೆ ತಪ್ಪು ಹೊರಿಸಿ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಂಡಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ದಲಿತರ ಹಣ ದುರ್ಬಳಕೆ ಮಾಡಿದೆ, ರಸಗೊಬ್ಬರ ಅಭಾವ ಎದುರಾಗಿದೆ, ಕೊಲೆ, ಅತ್ಯಾಚಾರ ಚಟುವಟಿಕೆ ಹೆಚ್ಚಾಗಿದೆ, ಇದು ರೈತ ವಿರೋಧಿ, ಅಭಿವೃದ್ಧಿ ವಿರೋಧಿ ಸರ್ಕಾರ ಎಂದು ವಿಪಕ್ಷ ನಾಯಕರು ವಾಗ್ದಾಳಿ ನಡೆಸಿದರು.

ಸದನದಲ್ಲಿ ಸರ್ಕಾರದ ವೈಫಲ್ಯಗಳನ್ನು ಪ್ರಸ್ತಾಪಿಸಿ ಪರಿಣಾಮಕಾರಿ ಹೋರಾಟ ಮಾಡೋದಾಗಿ ವಿಪಕ್ಷ ನಾಯಕರು ಗುಡುಗಿದರು.ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಕೆಎನ್‌ ರಾಜಣ್ಣ ರಾಜೀನಾಮೆ?

 

Share This Article