– 1995 ರಿಂದ 2014ರ ವರೆಗಿನ ಪ್ರಕರಣಗಳ ತನಿಖೆಗೆ ಮುಂದಾದ ಎಸ್ಐಟಿ
– 19 ವರ್ಷಗಳ ಹಿಂದಿನ ವೈದ್ಯರ ಲಿಸ್ಟ್ ತಯಾರು
ಮಂಗಳೂರು: ಧರ್ಮಸ್ಥಳ (Dharmasthala) ಗ್ರಾಮದಲ್ಲಿ ಒಂದು ಕಡೆ ಹೂತಿಟ್ಟ ಶವಗಳ ಶೋಧ ನಡೆಯುತ್ತಿದೆ. ಇನ್ನೊಂದು ಕಡೆ, ಎಸ್ಐಟಿ ವಿಚಾರಣೆ ಮಾಡುತ್ತಿದೆ. ಇದರ ಮಧ್ಯೆ, ತನಿಖೆಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, 38 ವರ್ಷಗಳ ಹಿಂದೆ ಅಸಹಜ ಸಾವನ್ನಪ್ಪಿದ್ದ ಪದ್ಮಲತಾ ಕುಟುಂಬ ಎಸ್ಐಟಿಐನ್ನ (SIT) ಭೇಟಿಯಾಗಿದ್ದು, ಮರು ತನಿಖೆಗೆ ಮನವಿ ಮಾಡಿದೆ.
ಧರ್ಮಸ್ಥಳದ ಬೋಳಿಯಾರ್ ನಿವಾಸಿ ಪದ್ಮಲತಾ (Padmalatha), ಕಾಲೇಜಿಗೆ ಹೋಗುವಾಗ ನಿಗೂಢವಾಗಿ ಸಾವನ್ನಪ್ಪಿದ್ದು, 57 ದಿನಗಳ ಬಳಿಕ ಶವ ಪತ್ತೆಯಾಗಿತ್ತು. ಈ ಹಿಂದೆ ಸಿಐಡಿ ಕೂಡ ಇದರ ತನಿಖೆ ನಡೆಸಿತ್ತು. ಈಗ ಎಸ್ಐಟಿ ತನಿಖೆ ನಡೆಸಬೇಕೆಂದು ಪದ್ಮಲತಾ ಸಹೋದರಿ ಇಂದ್ರಾವತಿ ದೂರು ಸಲ್ಲಿಸಿದ್ದಾರೆ. ಆದ್ರೆ ಸಿಪಿಎಂ (I) ಮುಖಂಡ ಬಿ.ಎಂ ಭಟ್, ಇದೊಂದು ಮರ್ಯಾದೆ ಹತ್ಯೆ ಅಲ್ಲ, ಅಸಹಜ ಸಾವು ಅಂತ ಹೇಳಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್; ಇಂದು ಪಾಯಿಂಟ್ 17ರಲ್ಲಿ ಉತ್ಖನನ – ಸಿಗುತ್ತಾ ಬುರುಡೆ, ಮೂಳೆ ಕುರುಹು?
ಸತ್ಯಾಸತ್ಯತೆ ಹೊರಬರಲಿ ಅಂದಿದ್ದಾರೆ.
ಈ ಬಗ್ಗೆ ʻಪಬ್ಲಿಕ್ ಟಿವಿʼ (Public TV) ಜೊತೆಗೆ ಮಾತನಾಡಿರುವ ಸಿಪಿಎಂ ಬೆಳ್ತಂಗಡಿ ಕಾರ್ಯದರ್ಶಿ ಬಿ.ಎಮ್ ಭಟ್, ಪದ್ಮಲತಾ ಅವರದ್ದು ಮರ್ಯಾದಾ ಹತ್ಯೆ ಅಲ್ಲ. ಅಸಹಜ ಸಾವು ಎಂದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ | ಬಾಹುಬಲಿ ಬೆಟ್ಟದಲ್ಲಿ ಶೋಧ – 20 ಅಡಿ ಅಗಲ, 10 ಅಡಿ ಆಳಕ್ಕೆ ಭೂಮಿ ಬಗೆದರೂ ಸಿಗದ ಕಳೇಬರ
ಇದು ಕಮ್ಯೂನಿಷ್ಟರ ಟಾರ್ಗೆಟ್ ಎಂದು ಆರೋಪಿಸಲಾಗುತ್ತಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿಯ ಗೌರವ ಉಳಿಯಬೇಕು. ವೇದವಲ್ಲಿ, ಪದ್ಮಲತಾ -ಆನೆಮಾವುತ ಪ್ರಕರಣದ ಹೋರಾಟ ನಡೆಸುತ್ತಿದ್ದೇವೆ. ಶಾಸಕ ಹರೀಶ್ ಪೂಂಜಾ ಅವರ ನಡೆ ನನಗೆ ಅರ್ಥ ಆಗುತ್ತಿಲ್ಲ. ಪದ್ಮಲತಾ ಅವರದ್ದು ಮರ್ಯಾದ ಹತ್ಯೆ ಅಲ್ಲಂ, ವಸಂತ ಕುಲಾಲ್ ಎಂಬವರನ್ನು ಅರೆಸ್ಟ್ ಮಾಡಿದ್ದರು, ಆ ಬಳಿಕ ಪದ್ಮಲತಾ ತಂದೆ ದೇವಾನಂದ್ ಅವರ ಮೇಲೆ ಆರೋಪ ಮಾಡಲಾಯಿತು. ಎಲ್ಲವೂ ಕೂಡ ಕೃತಕ ಕಥೆ ಸೃಷ್ಟಿ ಮಾಡಲಾಗಿದೆ. ವೇದವಲ್ಲಿ ಪ್ರಕರಣದಲ್ಲಿ ಗಂಡ, ಸೌಜನ್ಯ ಪ್ರಕರಣದಲ್ಲಿ ಸಂತೋಷ್ ಅವರನ್ನ ಆರೋಪಿಗಳನ್ನಾಗಿ ಮಾಡಲಾಗಿದೆ. ಈಗ ಎಸ್ಐಟಿಯಲ್ಲಿ ಪ್ರಾಮಾಣಿಕ ಹಿರಿಯ ದಕ್ಷ ಅಧಿಕಾರಿಗಳಿದ್ದಾರೆ. ನಮಗೆ ಯಾವುದೇ ಅಜೆಂಡಾ ಇಲ್ಲ ನ್ಯಾಯ ಸಿಗಬೇಕು ಅಷ್ಟೇ ಅಂತ ಒತ್ತಾಯಿಸಿದ್ದಾರೆ.
19 ವರ್ಷಗಳ ಹಿಂದಿನ ವೈದ್ಯರ ಲಿಸ್ಟ್ ತಯಾರು
ಇನ್ನೂ, 1995 ರಿಂದ 2014ರ ವರೆಗಿನ ಕೇಸ್ಗಳ ತನಿಖೆಯನ್ನೂ ಎಸ್ಐಟಿ ಆರಂಭಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅತ್ಯಾಚಾರ, ಕೊಲೆ, ಅನಾಥ ಶವ ಪತ್ತೆ ಪ್ರಕರಣಗಳ ತನಿಖೆ ಆರಂಭಿಸಲಾಗಿದ್ದು, ಎಲ್ಲಾ ಕೇಸ್ಗಳ ಮರಣೋತ್ತರ ಪರೀಕ್ಷೆ ವರದಿಗಳ ಆಳವಾದ ತನಿಖೆಗೆ ಎಸ್ಐಟಿ ಮುಂದಾಗಿದೆ. 19 ವರ್ಷಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರ ಲಿಸ್ಟ್ ಸಿದ್ಧವಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರ ದಾಖಲೆಯನ್ನು ಎಸ್ಐಟಿ ಪರಿಶೀಲಿಸುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಫೊರೆನ್ಸಿಕ್ ವೈದ್ಯರ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಿದೆ. ಪೋಸ್ಟ್ ಮಾರ್ಟಂ ವರದಿಗಳಲ್ಲಿ ಅನುಮಾನ ಅಥವಾ ಗೊಂದಲ ಇದ್ದರೆ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಮಸೀದಿ, ಚರ್ಚ್ನಲ್ಲಿ ಶವ ಹೂತಿಡಲಿಲ್ವಾ.. ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ: ಜನಾರ್ದನ ಪೂಜಾರಿ ಪ್ರಶ್ನೆ