ಮಂಗಳೂರು: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ (Dharmasthala Mass Burial) ಆರೋಪ ಪ್ರಕರಣದಲ್ಲಿ ಎಸ್ಐಟಿ ಫೀಲ್ಡಿಗಿಳಿದು ಇಂದಿಗೆ 16 ದಿನ ಕಳೆದಿದೆ. ಸೋಮವಾರ 17ನೇ ಪಾಯಿಂಟ್ನಲ್ಲಿ ಉತ್ಖನನ ನಡೆಯಲಿದ್ದು, ಯಾವುದಾದರು ಕುರುಹು ಸಿಗುತ್ತಾ ಎಂಬ ಕುತೂಹಲ ಮನೆ ಮಾಡಿದೆ.
ಈಗಾಗಲೇ ಗುಂಡಿ ನಂಬರ್ 16ರಲ್ಲಿ ಉತ್ಖನನ ಮುಗಿದಿದೆ. ಆದರೆ, ಸ್ಪಾಟ್ ನಂಬರ್ 13 ಇನ್ನೂ ಕಗ್ಗಂಟಾಗಿದೆ. ಭಾನುವಾರದ ರಜೆಯ ನಂತರ ಇಂದು ಮತ್ತೆ ಶೋಧಕಾರ್ಯ ನಡೆಯಲಿದೆ. ಒಟ್ಟು 30 ಸ್ಪಾಟ್ಗಳಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ತಿಳಿಸಿದ್ದಾನೆ. ಗ್ರಾಮದಲ್ಲಿ ದಿನಕ್ಕೊಂದು ಗುಡ್ಡವನ್ನು ಸುತ್ತಿಸುತ್ತಿದ್ದಾನೆ. ಇದನ್ನೂ ಓದಿ: ಮಸೀದಿ, ಚರ್ಚ್ನಲ್ಲಿ ಶವ ಹೂತಿಡಲಿಲ್ವಾ.. ಕೇವಲ ಧರ್ಮಸ್ಥಳದಲ್ಲಿ ಮಾತ್ರಾನಾ: ಜನಾರ್ದನ ಪೂಜಾರಿ ಪ್ರಶ್ನೆ
ಸಮಾಧಿ ಶೋಧ ಜೊತೆಗೆ ಎಸ್ಐಟಿ ವಿಚಾರಣೆಯೂ ತೀವ್ರಗೊಂಡಿದೆ. ಧರ್ಮಸ್ಥಳ, ಬೆಳ್ತಂಗಡಿಯ ನಿವೃತ್ತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಎಸ್ಐಟಿ ಹಲವಾರು ಮಾಹಿತಿ ಸಂಗ್ರಹಿಸಿದೆ. ಅನಾಮಿಕ ವ್ಯಕ್ತಿಯ ಎಲ್ಲಾ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಧರ್ಮಸ್ಥಳದ ನಿವೃತ್ತ ಠಾಣಾಧಿಕಾರಿಗಳಿಂದಲೂ ಮಾಹಿತಿ ಸಂಗ್ರಹ ಮಾಡಲಾಗಿದೆ. 20 ವರ್ಷ ನೇತ್ರಾವತಿ ಸಮೀಪ ಬಿಡಾರದಲ್ಲಿ ಅನಾಮಿಕ ವಾಸಿಸಿದ್ದ.
ಎಸ್ಐಟಿ ಇದುವರೆಗೂ ನಡೆಸಿದ ಶೋಧದಲ್ಲಿ ಒಂದೇ ಒಂದು ಕುರುಹು ಪತ್ತೆಯಾಗಿಲ್ಲ. ಎಸ್ಐಟಿ ಅಧಿಕಾರಿಗಳಿಗೆ ಮಣ್ಣು ಅಗೆಸುವ ಕೆಲಸ ಇನ್ನು ಎಷ್ಟು ದಿನ ಎಂಬ ಪ್ರಶ್ನೆ ಉದ್ಭವಿಸಿದೆ. ಅನಾಮಿಕ ಹೇಳಿದ ರೀತಿ ಒಂದೇ ಒಂದು ಗುಂಡಿಯಲ್ಲೂ ಆರೋಪದ ಕುರುಹುಗಳು ಪತ್ತೆಯಾಗಿಲ್ಲ. ಇದನ್ನೂ ಓದಿ: ಧರ್ಮಸ್ಥಳ ಗುಂಪು ಘರ್ಷಣೆ – 6 ಆರೋಪಿಗಳು ಅರೆಸ್ಟ್
ಇತ್ತ, ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಕೇಸ್ನಲ್ಲಿ ಹಲವು ವೈದ್ಯರಿಗೆ ನೊಟಿಸ್ ನೀಡುವ ಸಾಧ್ಯತೆ ಇದೆ. ಯುಡಿಆರ್ ಕೇಸ್ಗಳ ಮರಣೋತ್ತರ ವರದಿಗಳ ಬಗ್ಗೆ ಮಾಹಿತಿ ಪಡೆಯಲು ಈ ಕ್ರಮಕ್ಕೆ ಎಸ್ಐಟಿ ಮುಂದಾಗಿದೆ. 1995 ರಿಂದ 2014ರ ವರೆಗಿನ ಯುಡಿಆರ್ ಕೇಸ್ಗಳ ತನಿಖೆಯನ್ನು ಆರಂಭಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದ ಯುಡಿಆರ್, ಕೊಲೆ, ಅನಾಥ ಶವ ಪತ್ತೆ ಪ್ರಕರಣಗಳ ತನಿಖೆ ಆರಂಭಿಸಲಾಗಿದ್ದು, ಎಲ್ಲಾ ಕೇಸ್ಗಳ ಮರಣೋತ್ತರ ಪರೀಕ್ಷೆ ವರದಿಗಳ ಆಳವಾದ ತನಿಖೆಗೆ ಎಸ್ಐಟಿ ಮುಂದಾಗಿದೆ. 19 ವರ್ಷಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರ ಲಿಸ್ಟ್ ಸಿದ್ಧವಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರ ದಾಖಲೆಯನ್ನು ಎಸ್ಐಟಿ ಪರಿಶೀಲಿಸುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಫೊರೆನ್ಸಿಕ್ ವೈದ್ಯರ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಿದೆ. ಪೋಸ್ಟ್ ಮಾರ್ಟಂ ವರದಿಗಳಲ್ಲಿ ಅನುಮಾನ ಅಥವಾ ಗೊಂದಲ ಇದ್ದರೆ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಇಂದು ಜಿಪಿಆರ್ನಿಂದ ಶೋಧ ನಡೆಯುವುದು ಅನುಮಾನ. ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಮಂಗಳೂರು ಭೇಟಿ ರದ್ದುಗೊಳಿಸಿದ್ದಾರೆ. ಜಿಪಿಆರ್ ಬಂದ್ರೆ ಭೇಟಿ ನೀಡುವ ಪ್ಲ್ಯಾನ್ ಇದೆ. ಜಿಪಿಆರ್ ಅಲಭ್ಯ ಹಿನ್ನೆಲೆ ಇಂದು ಮೊಹಂತಿ ಭೇಟಿ ರದ್ದು ಮಾಡಿದ್ದಾರೆ.