ಮಹಿಳೆಯ ದೇಹ ತುಂಡರಿಸಿ ಎಸೆದಿದ್ದ ಪ್ರಕರಣಕ್ಕೆ ಟ್ವಿಸ್ಟ್ – ಡೆಂಟಿಸ್ಟ್ ಅಳಿಯನಿಂದಲೇ ಅತ್ತೆಯ ಹತ್ಯೆ

Public TV
1 Min Read

– ನಾಲ್ವರು ಆರೋಪಿಗಳು ಅಂದರ್
– ಕೊಲೆ ಬಳಿಕ ಧರ್ಮಸ್ಥಳ ಯಾತ್ರೆಗೆ ತೆರಳಿದ್ದ ಆರೋಪಿಗಳು

ತುಮಕೂರು: ಜಿಲ್ಲೆಯ ಕೊರಟಗೆರೆಯಲ್ಲಿ (Koratagere) ಮಹಿಳೆಯನ್ನು ಕೊಲೆ ಮಾಡಿ ಮೃತ ದೇಹ ತುಂಡರಿಸಿದ್ದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮೃತ ಲಕ್ಷ್ಮೀದೇವಮ್ಮಳ ಅಳಿಯನೇ (Son In Law) ಈ ಕೃತ್ಯ ನಡೆಸಿರೋದು ಬೆಳಕಿಗೆ ಬಂದಿದೆ.

ವೃತ್ತಿಯಲ್ಲಿ ದಂತ ವೈದ್ಯನಾಗಿರುವ (Dentist) ಡಾ. ರಾಮಚಂದ್ರ ತನ್ನ ಸ್ನೇಹಿತ ಸತೀಶ್ ಹಾಗೂ ಕಿರಣನ ಜೊತೆ ಸೇರಿ ಹತ್ಯೆ ಮಾಡಿದ್ದಾನೆ. ಮೃತ ಲಕ್ಷ್ಮೀದೇವಮ್ಮ ತನ್ನ ಮಗಳನ್ನೇ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರಚೋದಿಸುತಿದ್ದಳು ಎಂಬ ಆರೋಪ ಇದೆ. ಇದನ್ನು ಸಹಿಸದ ಅಳಿಯ ಡಾ.ರಾಮಚಂದ್ರ ಅತ್ತೆಯನ್ನೇ ಕೊಲೆ ಮಾಡಿದ್ದಾನೆ. ಕೋಳಾಲದಲ್ಲಿ ಇರುವ ಸ್ನೇಹಿತ ಸತೀಶ್ ಎಂಬಾತನ ಫಾರ್ಮ್ ಹೌಸ್‌ನಲ್ಲಿ ಕೊಲೆ ಮಾಡಿ ದೇಹದ ಭಾಗಗಳನ್ನು ಪೀಸ್ ಪೀಸ್ ಮಾಡಿ ಎಸೆಯಲಾಗಿತ್ತು. ಬಳಿಕ ಆರೋಪಿಗಳು ಧರ್ಮಸ್ಥಳ ಯಾತ್ರೆಗೆ ಹೋಗಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ ಇಂದಿನಿಂದ 5 ದಿನ ಭಾರೀ ಮಳೆ ಮುನ್ಸೂಚನೆ

ಅತ್ತೆಯ ಕೊಲೆ ಆದರೂ ಅಳಿಯ ಸ್ಥಳದಲ್ಲಿ ಇಲ್ಲದಿರುವುದಕ್ಕೆ ಅನುಮಾನಗೊಂಡ ಪೊಲೀಸರು ವಿಚಾರಣೆ ಮಾಡಿದ್ದಾರೆ. ಆಗ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಕೊರಟಗೆರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಪಂಚಾಯತ್ ರಾಜ್ ಇಲಾಖೆಯ ಹಿರಿಯ ಸಹಾಯಕಿಗೆ 45,000 ರೂ. ಸೈಬರ್ ವಂಚನೆ

Share This Article