ದರ್ಶನ್ (Darshan) ಅಭಿನಯದ ಬಹುನಿರೀಕ್ಷಿತ ಚಿತ್ರ ಡೆವಿಲ್ (The Devil) ಸಿನಿಮಾ ತಂಡದಿಂದ ಮಹಾ ಅಪ್ಡೇಟ್ ಹೊರಬಿದ್ದಿದೆ.
ಸಿನಿಮಾ ರಿಲೀಸ್ ಡೇಟ್ ಘೋಷಣೆಯ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಎಕ್ಸೈಟಿಂಗ್ ನ್ಯೂಸ್ ಕೊಟ್ಟಿದೆ ಸಿನಿಮಾ ಟೀಮ್. ಚಿತ್ರದ ಮೊದಲ ಹಾಡನ್ನ ರಿಲೀಸ್ ಮಾಡುವ ದಿನಾಂಕ ಘೋಷಿಸಿದೆ ‘ಡೆವಿಲ್’ ಚಿತ್ರತಂಡ. ಇದನ್ನೂ ಓದಿ: ಧ್ರುವ ಸರ್ಜಾ ಮಕ್ಕಳ ರಕ್ಷಾಬಂಧನ ಆಚರಣೆ
ಸ್ವಾತಂತ್ರೋತ್ಸವದ ಆ.15 ಕ್ಕೆ ಡೆವಿಲ್ ಸಿನಿಮಾದ ಫಸ್ಟ್ ಸಿಂಗಲ್ ರಿಲೀಸ್ ಆಗಲಿದ್ದು, ಅಭಿಮಾನಿಗಳು ಹಬ್ಬ ಮಾಡುವ ಕ್ಯಾಚಿ ಲಿರಿಕ್ಸನ್ನು ಈ ಹಾಡು ಒಳಗೊಂಡಿದೆ ಎಂಬ ಮಾಹಿತಿ ಇದೆ. ‘ಇದ್ರೇ ನೆಮ್ದಿಯಾಗ್ ಇರ್ಬೇಕ್’ ಎಂಬ ಲಿರಿಕ್ಸ್ ಕುತೂಹಲ ಹುಟ್ಟಿಸಿದೆ. ಪ್ರಕಾಶ್ ನಿರ್ದೇಶಿಸಿ ನಿರ್ಮಿಸಿರುವ ಡೆವಿಲ್ ಸದ್ಯಕ್ಕೆ ದರ್ಶನ್ ಸಿನಿಮಾ ಕರಿಯರ್ನಲ್ಲೇ ಭಾರೀ ನಿರೀಕ್ಷಿತ ಚಿತ್ರವಾಗಿದೆ.