ಮೋದಿ ಹಾಸ್ಯಕ್ಕೆ ಸಿದ್ದು, ಡಿಕೆಶಿಗೆ ನಗುವೋ ನಗು!

Public TV
1 Min Read

ಬೆಂಗಳೂರು: ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಡಿಕೆಶಿವಕುಮಾರ್‌ ಜೊತೆಯಾಗಿ ಪ್ರಯಾಣಿಸಿದರು.

ಮೆಜೆಸ್ಟಿಕ್‌ನಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಲ್ಲಿ ಮೂರು ವಂದೇ ಭಾರತ್‌ ರೈಲಿಗೆ ಮೋದಿ ಚಾಲನೆ ನೀಡಿದ ಬಳಿಕ ಮೆಟ್ರೋ ಉದ್ಘಾಟನೆ ಮಾಡಲು ರಾಗಿಗುಡ್ಡಕ್ಕೆ ಬಂದರು.


ಹಳದಿ ಮಾರ್ಗದಲ್ಲಿ ಸಂಚರಿಸುವ ರೈಲಿಗೆ ಮೋದಿ ಚಾಲನೆ ನೀಡಿದ ಬಳಿಕ ಪ್ರಧಾನಿ, ಸಿಎಂ, ಡಿಸಿಎಂ ಮೆಟ್ರೋ ರೈಲಿನಲ್ಲಿ ಜೊತೆಯಾಗಿ ಕುಳಿತು ಎಲೆಕ್ಟ್ರಾನಿಕ್‌ ಸಿಟಿಯತ್ತ ಪ್ರಯಾಣಿಸಿದರು. ಈ ಪ್ರಯಾಣದ ವೇಳೆ ಎದುರುಗಡೆ ಬಿಜೆಪಿ ಸಂಸದರು ಕುಳಿತಿದ್ದರು. ಇದನ್ನೂ ಓದಿ: ಬೆಂಗಳೂರು-ಬೆಳಗಾವಿ ವಂದೇಭಾರತ್‌ ರೈಲಿಗೆ ಮೋದಿ ಹಸಿರು ನಿಶಾನೆ

ಈ ಸಂದರ್ಭದಲ್ಲಿ ಮೋದಿ ಯಾವುದೇ ವಿಷಯನ್ನು ಪ್ರಸ್ತಾಪಿಸಿದ್ದಾರೆ. ಈ ಮಾತನ್ನು ಕೇಳಿ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್‌ ಬಿದ್ದು ಬಿದ್ದು ನಕ್ಕಿದ್ದಾರೆ.

Share This Article