ಶಿವಮೊಗ್ಗ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇವೆ (Dharmasthala Case) ಎಂದು ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳಲು ಹೊರಟಿದ್ದಾರೆ. ಇದರಿಂದ ಇಡೀ ದೇಶದ ಹಿಂದೂಗಳಿಗೆ ನೋವಾಗಿದೆ. ಆ ಅನಾಮಿಕನನ್ನು ಬಂಧಿಸಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (K.S Eshwarappa) ಆಗ್ರಹಿಸಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಈ ವೇಳೆ, ಹಿಂದೂ ಸಮಾಜವನ್ನ ಅಪಮಾನ ಮಾಡಲು ಹೊರಟಿದ್ದಾರೆ. ಧರ್ಮಸ್ಥಳದಂತ ಪುಣ್ಯಕ್ಷೇತ್ರದ ಬಗ್ಗೆ ಜನರಲ್ಲಿ ಅನುಮಾನ ಸೃಷ್ಟಿಸಲು ಪ್ರಯತ್ನಿಸುತ್ತಿರುವವರು ಯಾರು? ಇದನ್ನು ರಾಜ್ಯ ಸರ್ಕಾರ ತಕ್ಷಣ ಕಂಡು ಹಿಡಿಯಲಿ. 13 ಕಡೆ ನೂರಾರು ಹೆಣ ಹೂತು ಹಾಕಿದ್ದೇನೆ ಎಂದು ಒಬ್ಬ ವ್ಯಕ್ತಿ ಹೇಳಿದ್ದಾನೆ. ಅವನ ಹಿಂದೆ ಯಾರು ಇದ್ದಾರೆ? ಅವನೊಬ್ಬನೇ ನೂರಾರು ಹೆಣ ಹೂಳಲು ಸಾಧ್ಯವೇ? ಅವನ ಹಿಂದೆ ಯಾವ ರಾಷ್ಟ್ರದ್ರೋಹಿ ಹಾಗೂ ಧರ್ಮ ದ್ರೋಹಿ ಗುಂಪಿದೆ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಸಮಾಧಿ ಶೋಧ ಮ್ಯಾರಥಾನ್ – ಐದು ಅಡಿ ಅಗೆದರೂ ಸಿಕ್ಕಿದ್ದು ಬರೀ ಮಣ್ಣು
ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವ ಕುತಂತ್ರ ನಡೆದಿದೆ. ಅನಾಮಿಕ ವ್ಯಕ್ತಿ ಸ್ಥಳ ತೋರಿಸಲು ವಿಫಲವಾಗಿದ್ದಾನೆ. ಸರ್ಕಾರ ಮೊದಲು ಅನಾಮಿಕನನ್ನು ಅರೆಸ್ಟ್ ಮಾಡಲಿ. ಮೊದಲು ಅವನಿಂದ ಪೂರ್ಣ ವಿಚಾರ ತಿಳಿದುಕೊಳ್ಳಲಿ. ರಾಜ್ಯ ಸರ್ಕಾರ ಈ ನಡುವೆ ಹೊಸ ಆದೇಶ ಹೊರಡಿಸಿದೆ.
ಈ ವಿಚಾರಕ್ಕೆ ಯಾರನ್ನ ಬೇಕಾದರೂ ವಿಚಾರಣೆ, ಅರೆಸ್ಟ್ ಮಾಡಬಹುದು. ಅವನನ್ನು ಅರೆಸ್ಟ್ ಮಾಡಿ, ಸತ್ಯವನ್ನು ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಯಾರು ಕೂಡ ಹಿಂದೂ ಧರ್ಮ ಹಾಗೂ ಧರ್ಮಸ್ಥಳವನ್ನು ಹಾಳು ಮಾಡಲು ಸಾಧ್ಯವಿಲ್ಲ. ಈ ಕುತಂತ್ರದ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: Dharmasthala Case | ಅಸ್ಥಿ ರಹಸ್ಯ ಭೇದಿಸಲು ಹೊರಟ ಎಸ್‌ಐಟಿ – 13ರ ಬದಲು 15ನೇ ಪಾಯಿಂಟ್‌ನಲ್ಲಿ ಶೋಧ