ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ

Public TV
2 Min Read

ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ನಟ ಡಾ. ವಿಷ್ಣುವರ್ಧನ್ (Dr Vishnuvardhan) ಅವರ ಸಮಾಧಿಯನ್ನು ಅಭಿಮಾನಿಗಳ ವಿರೋಧದ ನಡುವೆಯೇ ಗುರುವಾರ ರಾತ್ರೋರಾತ್ರಿ ತೆರವು ಮಾಡಲಾಗಿತ್ತು. ಈ ಕುರಿತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ಧ್ (Anirudh) ಪ್ರತಿಕ್ರಿಯೆ ನೀಡಿ, ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಸಮಾಧಿ ನಿರ್ಮಾಣ ಮಾಡಲಾದ ಜಾಗ ವಿವಾದಾತ್ಮಕ ಸ್ಥಳ ಇತ್ತು ಎಂಬುದು ನಮಗೆ ಗೊತ್ತಿರಲಿಲ್ಲ. ನಾವು ಅಲ್ಲೇ ಹೋಗಿ ಸಂಸ್ಕಾರ ಮಾಡಬೇಕು ಅಂದುಕೊಂಡಿದ್ದೆವು. ಕುಮಾರಸ್ವಾಮಿ ಅವರು ಹೇಳಿದ್ರು ದೇವೇಗೌಡರು ಹೇಳಿದ್ದಾರೆ. ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಗೌರವ ಇದೆ. ಹಾಗಾಗಿ ಅಭಿಮಾನ್ ಸ್ಟುಡಿಯೋದಲ್ಲಿ ಗೌರವಯುತವಾಗಿ ಮಾಡಿ ಎಂದಿದ್ರು. ಹಾಗಾಗಿ ನಾವು ಒಪ್ಪಿಕೊಂಡಿದ್ದೆವು ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾತ್ರೋರಾತ್ರಿ ವಿಷ್ಣು ಸಮಾಧಿ ನೆಲಸಮ – ಅಭಿಮಾನಿಗಳಿಂದ ತೀವ್ರ ಆಕ್ರೋಶ

ದಯವಿಟ್ಟು ಅಭಿಮಾನಿಗಳು ದೂರ ಆಗಬೇಡಿ. ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತಾನಾಡಬೇಡಿ. ಏನೇ ಇದ್ದರೂ ನನ್ನನ್ನೇ ನೇರವಾಗಿ ಸಂಪರ್ಕ ಮಾಡಿ. ಅಭಿಮಾನಿಗಳ ಪ್ರಯತ್ನದಿಂದ ಬೆಂಗಳೂರಿನಲ್ಲೇ ಸ್ಮಾರಕ ಆದರೆ ತುಂಬಾ ಒಳ್ಳೆಯದು. ಬೇಕಿದ್ದರೆ ಸರ್ಕಾರದ ಬಳಿ ಮಾತನಾಡಲು ನಾವು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 3.15 ಕೋಟಿ ವಂಚನೆ ಆರೋಪ; ನಟ ಧ್ರುವ ಸರ್ಜಾ ವಿರುದ್ಧ ಎಫ್‌ಐಆರ್

ನಾನು ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಕೊಡಿ ಎಂದು ಕೇಳಿದ್ದೇನೆ. ಕೇವಲ ಅಪ್ಪಾವ್ರಿಗೆ ಮಾತ್ರ ಅಲ್ಲ. ಎಲ್ಲಾ ಕಲಾವಿದರಿಗೂ ಕೊಟ್ಟು ಗೌರವಿಸಿ ಎಂದು ಕೇಳಿದ್ದೇನೆ. ಚಿತ್ರರಂಗದ ಪರವಾಗಿ ನಾನೇ ಧ್ವನಿ ಎತ್ತಿದ್ದೇನೆ. ಅಲ್ಲದೇ ಈ ಬಗ್ಗೆ ಲೇಖನ ಕೂಡ ಬರೆದಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ: ಪರಭಾಷೆಯಲ್ಲಿ ಸಿನಿಮಾ ಮಾಡಲ್ಲ ಅಂದಿದ್ದಕ್ಕೆ ನೋಟಿಸ್ ಕಳುಹಿಸಿದ್ದಾರೆ – ಧ್ರುವ ಮ್ಯಾನೇಜರ್ ಸ್ಪಷ್ಟನೆ

ಬೆಂಗಳೂರಲ್ಲೇ ಅಪ್ಪಾವ್ರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ 2 ಕೋಟಿ ರೂ. ಹಣ ಕೊಟ್ಟಿತ್ತು. ಆದರೆ ಆ ಜಾಗ ಕೋರ್ಟ್ನಲ್ಲಿದ್ದಿದ್ದರಿಂದ ಸರ್ಕಾರಕ್ಕೆ ಜಾಗ ಕೊಂಡುಕೊಳ್ಳಲು ಆಗಲಿಲ್ಲ. ಕೇವಲ 2 ಎಕ್ರೆ ಜಾಗ ಕೊಡಿ ಎಂದು ಕೇಳಿದ್ದೆವು. ಅಭಿಮಾನ್ ಸ್ಟುಡಿಯೋ ಜಾಗವನ್ನ ಮನಸ್ಸು ಮಾಡಿದ್ರೆ ಸರ್ಕಾರವೇ ವಶ ಪಡಿಸಿಕೊಳ್ಳಬಹುದಾಗಿತ್ತು. ಆದರೆ ಸರ್ಕಾರ ಆ ಕೆಲಸ ಮಾಡಲಿಲ್ಲ. ಹೀಗಾಗಿ ನಾವು ಮೈಸೂರಿಗೆ ಹೋದೆವು ಎಂದು ಹೇಳಿದ್ದಾರೆ.

ಭಾರತೀ ಅಮ್ಮ ಈ ಬಗ್ಗೆ ತಿಳಿದು ತುಂಬಾ ನೊಂದುಕೊಂಡಿದ್ದಾರೆ. ಯಾರೇ ಈ ರೀತಿ ನಡೆದುಕೊಂಡಿದ್ದರೂ ಶಿಕ್ಷೆ ಆಗಲಿ ಎಂದಿದ್ದಾರೆ. ಅದು ಖಾಸಗಿ ಜಾಗ ಆಗಿದ್ದರೂ ಭಾವನಾತ್ಮಕವಾಗಿ ಸಮಾಧಿ ಇದ್ದ ಜಾಗ, ಅದು ಕನ್ನಡಿಗರ ಜಾಗವಾಗಿತ್ತು. ಬಾಲಣ್ಣ ಅವರ ಮೇಲೆ ನಮಗೆ ತುಂಬಾ ಗೌರವ ಇದೆ ಎಂದಿದ್ದಾರೆ.

Share This Article