ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಿಗೂಢ ಶವಗಳ ರಹಸ್ಯ ಭೇದಿಸಲು ವಿಶೇಷ ತನಿಖಾ ತಂಡ (Dharmasthala SIT) ಹೊರಟಿದೆ. ದಿನಕಳೆದಂತೆ ಶವ ಶೋಧ ಕಾರ್ಯಾಚರಣೆಗೆ ತಿರುವ ಪಡೆದುಕೊಳ್ತಿದೆ. ಮುಸುಕುಧಾರಿಯ ಜೊತೆ ಕಳೆದ 10 ದಿನಗಳಿಂದ ತಲೆಬುರುಡೆ ರಹಸ್ಯದ ಜಾಡು ಹಿಡಿದು ಹೊರಟ ಎಸ್‌ಐಟಿ, 13 ಪಾಯಿಂಟ್ ಪೈಕಿ 12 ಪಾಯಿಂಟ್ ಮುಗಿಸಿದೆ. ನಿನ್ನೆ 13ನೇ ಪಾಯಿಂಟ್ ಶೋಧಿಸಬೇಕಿತ್ತು. ಆದ್ರೆ ದೂರುದಾರನ ವಿಚಾರಣೆ ನಡೆಸಿ ಮತ್ತಷ್ಟು ಮಾಹಿತಿ ಕಲೆ ಹಾಕಿತ್ತು.
ಇವತ್ತು ಕೂಡ 13ನೇ ಪಾಯಿಂಟ್ ಶೋಧಿಸಬೇಕಿತ್ತು. ಆದ್ರೆ ಎಸ್‌ಐಟಿ ಕಾರ್ಯಾಚರಣೆ ನಿಗೂಢವಾಗಿ ಸಾಗ್ತಿದೆ. 13ನೇ ಪಾಯಿಂಟ್ ಬದಲು ಹೊಸ ಸ್ಥಳ ಗುರುತು ಮಾಡಿದೆ. ಎಸ್‌ಐಟಿ ಟೀಂ ನೇರವಾಗಿ 15ನೇ ಪಾಯಿಂಟ್ ಗುರುತು ಮಾಡಿದೆ. 13ನೇ ಪಾಯಿಂಟ್‌ನಲ್ಲಿ ಶೋಧ ನಡೆಸದೇ ನೇರವಾಗಿ 15ನೇ ಪಾಯಿಂಟ್‌ಗೆ ಎಸ್‌ಐಟಿ ತಂಡ ತೆರಳಿದೆ. ತಾಂತ್ರಿಕವಾಗಿ ಬಹಳ ಸಮಸ್ಯೆ ಇರುವುದರಿಂದ ಹೊಸ ಪಾಯಿಂಟ್‌ಅನ್ನು ಗುರುತಿಸಿ ಮಹಜರು ಮಾಡುವ ಪ್ರಕ್ರಿಯೆಗೆ ತನಿಖಾಧಿಕಾರಿ ಜಿತೇಂದ್ರ ದಯಾಮ ಮುಂದಾಗಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್ | ಮಾನಹಾನಿಕರ ವರದಿ ಪ್ರಸಾರ ತಡೆ ಕೋರಿ ಅರ್ಜಿ – ರಾಜ್ಯದ ವಿಚಾರಣಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ
ಬೋಳಿಯಾರ್ ಬಳಿ 15ನೇ ಸ್ಪಾಟ್ ಗುರುತು
ಮುಸುಕುಧಾರಿ ಕೊಟ್ಟ ಮಾಹಿತಿ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದೆ. ಬೊಳಿಯಾರ್ ಸಮೀಪದ ಗೋಂಕ್ರತಾರ್ ಎಂಬಲ್ಲಿ ದೂರುದಾರ 15ನೇ ಸ್ಪಾಟ್ ಗುರುತು ಮಾಡಿದ್ದು, 15 ಪಾಯಿಂಟ್ ಗುರುತಿಸುವ ಮಹಜರು ನಡೆದಿದೆ. ಇದನ್ನೂ ಓದಿ: ಹೇಗಿತ್ತು.. ಹೇಗಾಯ್ತು!?- ಉತ್ತರಾಖಂಡದಲ್ಲಿ ಭೀಕರ ಪ್ರವಾಹದ ಸ್ಯಾಟಲೈಟ್ ದೃಶ್ಯ ಹಂಚಿಕೊಂಡ ಇಸ್ರೋ
ಅನಾಮಿಕ ವ್ಯಕ್ತಿ ಧರ್ಮಸ್ಥಳದ ಅರಣ್ಯ ಭಾಗದಲ್ಲಿ ಹೂತಿದ್ದ ತಲೆ ಬರುಡೆಯನ್ನೇ ಪೊಲೀಸ್ ಠಾಣೆಗೆ ತಂದು ದೂರು ಕೊಟ್ಟಿದ್ದ ಎನ್ನಲಾಗ್ತಿರುವ ವಿಚಾರ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಕಳೆದ ಜುಲೈ ತಿಂಗಳಲ್ಲಿ ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಿದ್ದ ಬುರುಡೆ ಜಾಗದಲ್ಲಿ ಶೋಧಕ್ಕೆ ಎಸ್‌ಐಟಿ ಮುಂದಾಗಿದೆ. ಕಲ್ಲೇರಿ ದಾಟಿ ಬೊಳಿಯಾರ್ ಸಮೀಪದ ಗೋಂಕ್ರತಾರ್ ಎಂಬಲ್ಲಿ ಮಳೆ ನಡುವೆಯೂ ಪರಿಶೀಲನೆ ನಡೆಯುತ್ತಿದೆ. ದಟ್ಟ ಕಾಡಿನ ಒಳಗೆ 40 ಅಧಿಕಾರಿಗಳ ತಂಡ ಎಲ್ಲ ಪರಿಕರಗಳ ಜೊತೆ ಹೋಗಿ ಶೋಧ ನಡೆಸ್ತಿದೆ. ಇದನ್ನೂ ಓದಿ: ಸಂವಿಧಾನ, ಮತದಾನದ ಹಕ್ಕು ರಕ್ಷಣೆಗಾಗಿ ರಾಹುಲ್ ಗಾಂಧಿ ಹೋರಾಟಕ್ಕೆ ಸಂಪೂರ್ಣ ಬೆಂಬಲ: ಡಿಕೆಶಿ