ಮುಂಬೈ: ಒಂದು ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 80 ವೃದ್ಧರೊಬ್ಬರು ಬರೋಬ್ಬರಿ 9 ಕೋಟಿ ರೂ. ಹಣ ಕಳೆದುಕೊಂಡಿರುವ ಘಟನೆ ಮುಂಬೈನಲ್ಲಿ (Mumbai) ನಡೆದಿದೆ.
ಹೌದು, ಮುಂಬೈನ ವೃದ್ಧರೊಬ್ಬರು ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬಳ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ 734 ಬಾರಿ ಹಣ ವರ್ಗಾವಣೆ ಮಾಡಿ, 9 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಮೋದಿ ಮತಗಳ್ಳತನ ಮಾಡಿ ಪ್ರಧಾನಿಯಾಗಿದ್ದಾರೆ: ರಾಹುಲ್ ಗಾಂಧಿ ವಾಗ್ದಾಳಿ
ಏಪ್ರಿಲ್ 2023ರಲ್ಲಿ, ವೃದ್ಧ ಶಾರ್ವಿ ಎಂಬ ಮಹಿಳೆಗೆ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದ. ಅವರಿಬ್ಬರಿಗೂ ಪರಿಚಯವಿರದಿದ್ದ ಕಾರಣ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಲಿಲ್ಲ. ಆದರೆ ಕೆಲ ದಿನಗಳ ಬಳಿಕ ಶಾರ್ವಿ ಎಂಬ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಆ ರಿಕ್ವೆಸ್ಟ್ ಅನ್ನು ವೃದ್ಧ ಸ್ವೀಕರಿಸಿದ್ದರು. ಇದನ್ನೂ ಓದಿ: ಧರ್ಮಸ್ಥಳವನ್ನು ಕಬಳಿಸಲು ಸರ್ಕಾರ ಈಗ ಸಾಕ್ಷಿ ಹುಡುಕುತ್ತಿದೆ: ಪ್ರತಾಪ್ ಸಿಂಹ
ಬಳಿಕ ಇಬ್ಬರು ಚಾಟ್ ಮಾಡಲು ಪ್ರಾರಂಭಿಸಿ, ಫೋನ್ ನಂಬರ್ ಅನ್ನು ಸಹ ವಿನಿಮಯ ಮಾಡಿಕೊಂಡಿದ್ದರು. ನಂತರ ವಾಟ್ಸಾಪ್ ಮೂಲಕವೇ ಇಬ್ಬರು ಚಾಟ್ ಮಾಡುತ್ತಿದ್ದರು. ಈ ವೇಳೆ ಮಹಿಳೆಯು ವೃದ್ಧನ ಬಳಿ ತನ್ನ ಪತಿಯಿಂದ ಬೇರ್ಪಟ್ಟು, ತನ್ನ ಮಕ್ಕಳೊಂದಿಗೆ ವಾಸಿಸುತ್ತಿದ್ದೇನೆ ಎಂದು ಹೇಳಿದ್ದಳು. ಮಕ್ಕಳಿಗೆ ಹುಷಾರಿಲ್ಲ ಎಂದು ಹೇಳಿ ವೃದ್ಧನ ಬಳಿ ಹಣ ಕೇಳಲು ಪ್ರಾರಂಭಿಸಿದ್ದಳು. ಇದನ್ನೂ ಓದಿ: ರಾಹುಲ್ ಆರೋಪದಲ್ಲಿ ಯಾವುದೇ ಹುರುಳಿಲ್ಲ, ದಾಖಲೆ ಇದ್ದರೆ ಕೋರ್ಟ್‌ಗೆ ಹೋಗಿ: ಶೆಟ್ಟರ್
ಕೆಲ ದಿನಗಳ ನಂತರ, ವೃದ್ಧನ ವಾಟ್ಸಾಪ್‌ಗೆ ಕವಿತಾ ಎಂಬ ಮಹಿಳೆ ಮೆಸೇಜ್ ಮಾಡಿ, ನಾನು ಶಾರ್ವಿಯ ಪರಿಚಯಸ್ಥೆ ಎಂದು ಹೇಳಿಕೊಂಡು ಸ್ನೇಹ ಬೆಳೆಸಿದ್ದಳು. ಆಕೆ ವೃದ್ಧನಿಗೆ ಅಶ್ಲೀಲ ಸಂದೇಶ ಕಳುಹಿಸಿ ಹಣ ಕೇಳುತ್ತಿದ್ದಳು. ಮತ್ತೆ ಡಿಸೆಂಬರ್‌ನಲ್ಲಿ, ಶಾರ್ವಿಯ ಸಹೋದರಿ ಎಂದು ಹೇಳಿಕೊಂಡು ದಿನಾಜ್ ಎಂಬ ಮತ್ತೊಬ್ಬ ಮಹಿಳೆ ಮೆಸೇಜ್ ಮಾಡಲು ಆರಂಭಿಸಿದ್ದಳು.
ಆಕೆ ವೃದ್ಧನ ಬಳಿ ಶಾರ್ವಿ ಮೃತಪಟ್ಟಿದ್ದಾಳೆ. ಆಕೆಯ ಆಸ್ಪತ್ರೆಯ ಬಿಲ್ ಪಾವತಿಸಲು ಹಣ ಕಳುಹಿಸಿ ಎಂದು ಕೇಳಿದ್ದಳು. ದಿನ ಕಳೆದಂತೆ ದಿನಾಜ್ ಎಂಬ ಮಹಿಳೆಯು, ಶಾರ್ವಿ ಮತ್ತು ವೃದ್ಧನ ವಾಟ್ಸಾಪ್ ಮೆಸೇಜ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಕಳುಹಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಇದಕ್ಕೆ ಹೆದರಿ ಆಕೆಗೆ ವೃದ್ಧ ಹಣ ಕಳುಹಿಸಿದ್ದ. ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಂಬಂಧಿಯ ಹತ್ಯೆ
ಬಳಿಕ ವೃದ್ಧ ತಾನು ನೀಡಿದ ಹಣವನ್ನು ವಾಪಾಸ್ ಕೇಳಿದಾಗ ದಿನಾಜ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಇದು ಇಲ್ಲಿಗೆ ಮುಗಿಯದೇ ಸ್ವಲ್ಪ ಸಮಯದ ನಂತರ, ಜಾಸ್ಮಿನ್ ಎಂಬ ಮಹಿಳೆ ವೃದ್ಧನಿಗೆ ಮೆಸೇಜ್ ಮಾಡಲು ಪ್ರಾರಂಭಿಸಿದ್ದಳು. ಆಕೆ ದಿನಾಜ್‌ನ ಸ್ನೇಹಿತೆ ಎಂದು ಹೇಳಿಕೊಂಡು ಸಹಾಯಕ್ಕಾಗಿ ಬೇಡಿಕೊಂಡಳು. ವೃದ್ಧ ಆಕೆಗೂ ಹಣವನ್ನು ಕಳುಹಿಸಿದ್ದ.
ಏಪ್ರಿಲ್ 2023ರಿಂದ ಜನವರಿ 2025ರವರೆಗೆ, ವೃದ್ಧ ಒಟ್ಟು 734 ಬಾರಿ ಹಣ ವರ್ಗಾಯಿಸಿ, 8.7 ಕೋಟಿ ರೂ.ಗಳನ್ನು ನೀಡಿದ್ದರು. ತನ್ನ ಎಲ್ಲಾ ಹಣ ಖಾಲಿಯಾದ ನಂತರ ಮಹಿಳೆಗೆ ಹಣ ನೀಡಲು ವೃದ್ಧ ತನ್ನ ಸೊಸೆಯಿಂದ 2 ಲಕ್ಷ ರೂ. ಸಾಲ ಪಡೆದಿದ್ದ. ಇಷ್ಟು ಹಣ ನೀಡಿದರೂ ಸುಮ್ಮನಿರದ ಮಹಿಳೆ ಮತ್ತಷ್ಟು ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ನಂತರ ವೃದ್ಧ ತನ್ನ ಮಗನ ಬಳಿ 5 ಲಕ್ಷ ರೂ. ಹಣ ಕೇಳಿದ್ದ.
ಅನುಮಾನಗೊಂಡ ಮಗ ನಿಮಗೆ ಯಾಕೆ ಅಷ್ಟು ಹಣ ಎಂದು ಕೇಳಿದ್ದ. ಈ ವೇಳೆ ವೃದ್ಧನಿಗೆ ತಾನೂ ಸೈಬರ್ ವಂಚನೆಗೆ ಒಳಗಾಗಿದ್ದೇನೆ ಎಂಬ ಅರಿವಾಗಿದೆ. ಇದರಿಂದ ಶಾಕ್‌ಗೆ ಒಳಗಾದ ವೃದ್ಧ ಆಸ್ಪತ್ರೆಗೆ ದಾಖಲಾಗಿದ್ದ. ಈ ವೇಳೆ ವೈದ್ಯರು ವೃದ್ಧನಿಗೆ ಬುದ್ಧಿಮಾಂದ್ಯತೆ ಇರುವುದಾಗಿ ತಿಳಿಸಿದ್ದಾರೆ.
ಕಳೆದ ಜುಲೈ 22ರಂದು ಮಹಿಳೆಯರ ವಿರುದ್ಧ ಸೈಬರ್ ಅಪರಾಧ ಪ್ರಕರಣ ದಾಖಲಾಗಿದೆ. ಪೊಲೀಸರು ಈಗ ತನಿಖೆ ನಡೆಸುತ್ತಿದ್ದು, ನಾಲ್ವರು ಮಹಿಳೆಯ ಹೆಸರಿನಲ್ಲಿ ಒಬ್ಬನೇ ವ್ಯಕ್ತಿ ವಂಚಿಸಿರಬಹುದು ಎಂದು ಶಂಕಿಸಿದ್ದಾರೆ.