ನವದೆಹಲಿ: ಲೋಕಸಭಾ ಚುನಾವಣೆ ವೇಳೆ ಮತಗಳ್ಳತನ ನಡೆದಿದೆ ಎಂಬ ರಾಹುಲ್ ಗಾಂಧಿ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ (Jagadish Shetter) ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ (Dehli) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ರಾಹುಲ್ ಗಾಂಧಿಯವರ ಮತಗಳ್ಳತನ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈಗ ಆರೋಪ ಮಾಡ್ತಿದ್ದಾರೆ, ಒಂದು ವರ್ಷದ ಹಿಂದೆ ಯಾಕೆ ಮಾಡಿಲ್ಲ. ನಿಮ್ಮ ಬೆಂಗಳೂರು ಸೆಂಟ್ರಲ್‌ನ ಕಾಂಗ್ರೆಸ್ ಅಭ್ಯರ್ಥಿ ಈ ಬಗ್ಗೆ ಯಾಕೆ ಪ್ರಶ್ನೆ ಮಾಡಿಲ್ಲ. ಇದುವರೆಗೂ ಯಾಕೆ ದೂರು ನೀಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಹಾವೇರಿ| ಶೀಲ ಶಂಕಿಸಿ ಪತ್ನಿ ಬರ್ಬರ ಹತ್ಯೆ – ಕೆರೆಗೆ ಹಾರಿ ಪತಿ ಆತ್ಮಹತ್ಯೆ
ರಾಹುಲ್ ಗಾಂಧಿಯವರೇ ನಿಮ್ಮ ಬಳಿ ದಾಖಲೆಗಳು ಇದ್ದರೆ ಕೋರ್ಟ್‌ಗೆ ಹೋಗಿ, ಚುನಾವಣೆ ಆಯೋಗಕ್ಕೆ ದಾಖಲೆ ಸಲ್ಲಿಸಿ ದೂರು ನೀಡಿ. ಅದನ್ನು ಹೊರತುಪಡಿಸಿ ಚುನಾವಣಾ ಆಯೋಗದ ಮೇಲೆ ಆರೋಪ ಮಾಡೋದು ಸರಿಯಲ್ಲ. ಎನ್‌ಡಿಎ ಒಕ್ಕೂಟದಡಿ ಪ್ರಧಾನಿ ಆಗಿದ್ದಾರೆ. ಸರ್ಕಾರ ಬಂದಾಗಿದೆ, ಈಗ ಆರೋಪ ಮಾಡಿದ್ರೆ ಹೇಗೆ? ಪ್ರಧಾನಿ ಮೋದಿಯವರನ್ನು ಟೀಕೆ ಮಾಡೋದು, ಸದಾ ಅಮೆರಿಕಾ, ಟ್ರಂಪ್, ಚೀನಾ ಪರ ಮಾತಾಡುವುದೇ ರಾಹುಲ್ ಗಾಂಧಿ ಕೆಲಸವಾಗಿಬಿಟ್ಟಿದೆ. ಚುನಾವಣೆಯಲ್ಲಿ ಅಕ್ರಮ ಆಗಿದ್ದರೆ ಮೊದಲು ನೀವು ಕೋರ್ಟ್‌ಗೆ ಹೋಗಿ ಅಥವಾ ಚುನಾವಣೆ ಆಯೋಗಕ್ಕೆ ದೂರು ನೀಡಿ. ದೇಶದ ಸ್ವಾಯತ್ತ ಸಂಸ್ಥೆ ಮೇಲೆ ಆರೋಪ ಮಾಡುವುದು ತಪ್ಪು ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಧರ್ಮಸ್ಥಳ ವಿಚಾರವಾಗಿ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ಸರ್ಕಾರದ ಎಸ್‌ಐಟಿ ತನಿಖೆ ಮಾಡ್ತಿದೆ. ಮಾಡಲಿ ಯಾವುದೇ ಅಭ್ಯಂತರವಿಲ್ಲ. ಅನಾಮಿಕ ದೂರು ನೀಡಿದ್ದಾನೆ, ಸಾಕ್ಷಿಗಳು ಇದೆಯೋ ಹೇಗೋ ಗೊತ್ತಿಲ್ಲ. ಆದರೂ ಸರ್ಕಾರ ಎಸ್‌ಐಟಿ ತನಿಖೆಗೆ ಆದೇಶ ಮಾಡಿದೆ. ತನಿಖೆ ಮಾಡಲಿ ಆದರೆ ಹಿಂದೂಗಳ ಪವಿತ್ರ ದೇವಾಲಯ ಮಂಜುನಾಥ ಸ್ವಾಮಿ ಕ್ಷೇತ್ರಕ್ಕೆ, ಹಿಂದೂಗಳ ಭಾವನೆಗೆ ಯಾವುದೇ ಧಕ್ಕೆ ಆಗಬಾರದು. ಕ್ಷೇತ್ರಕ್ಕೆ ಯಾವುದೇ ಕೆಟ್ಟ ಹೆಸರು ಬರಬಾರದು, ಧರ್ಮಸ್ಥಳದ ಹೆಸರು ಹಾಳಾಗಬಾರದು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಪಾರ್ಕಿಂಗ್ ವಿಚಾರಕ್ಕೆ ಗಲಾಟೆ; ಬಾಲಿವುಡ್ ನಟಿ ಹುಮಾ ಖುರೇಷಿ ಸೋದರ ಸಂಬಂಧಿಯ ಹತ್ಯೆ