– ಇದೊಂದು ದ್ವೇಷದ ಆರೋಪ ಎಂದ ಬಿಜೆಪಿ
– ಬೆಂಗಳೂರಲ್ಲಿ ಶುಕ್ರವಾರ ಕಾಂಗ್ರೆಸ್ ಪ್ರತಿಭಟನೆ
ನವದೆಹಲಿ: ರಾಹುಲ್ ಗಾಂಧಿ (Rahul Gandhi) ಆರೋಪವನ್ನು ರಾಜ್ಯದ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಅಲ್ಲಗಳೆದಿದ್ದಾರೆ.
ಕಾಲಕಾಲಕ್ಕೆ ಹೊರಡಿಸುವ ಸೂಚನೆಗಳ ಪ್ರಕಾರ ಮತದಾರರ ಪಟ್ಟಿಯನ್ನು ಪಾರದರ್ಶಕ ರೀತಿಯಲ್ಲಿ ತಯಾರಿಸಲಾಗಿದೆ. ಚುನಾವಣೆಗಳ ನಡವಳಿಕೆ, ಫಲಿತಾಂಶಗಳನ್ನು ಹೈಕೋರ್ಟ್ನಲ್ಲಿ ಮಾತ್ರ ಪ್ರಶ್ನಿಸಬಹುದು ಎಂದು ಅನ್ಬುಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಮಹಾದೇವಪುರದಲ್ಲಿ ಮತಗಳ್ಳತನ – ದಾಖಲೆ ಸಮೇತ ಮಾಹಿತಿ ಬಹಿರಂಗಪಡಿಸಿದ ರಾಹುಲ್ ಗಾಂಧಿ
2025ರ ಕರಡು ಮತದಾರರ ಪಟ್ಟಿಯನ್ನು ಕಾಂಗ್ರೆಸ್ಗೆ ಕೊಟ್ಟಿದ್ದೇವೆ. ಎಸ್ಎಸ್ಆರ್ 2025ರ ಅಂತಿಮ ಮತದಾರರ ಪಟ್ಟಿಯನ್ನು ಐಎನ್ಸಿ ಜೊತೆ ಹಂಚಿಕೊಳ್ಳಲಾಗಿದೆ. ಅಂತಿಮ ಪ್ರಕಟಣೆಯ ನಂತರ, ಸಂಬಂಧಪಟ್ಟ ಚುನಾವಣಾಧಿಕಾರಿಗಳಿಗೆ ಕಾಂಗ್ರೆಸ್ ಮೇಲ್ಮನವಿ ಸಲ್ಲಿಸಿಲ್ಲ. ಕರ್ನಾಟಕದ ಸಿಇಒಗೆ ಕಾಂಗ್ರೆಸ್ ಸಲ್ಲಿಸಿದ 2ನೇ ಹಂತದ ಮೇಲ್ಮನವಿಗಳ ಸಂಖ್ಯೆಯೂ ಶೂನ್ಯ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.
ಮಹಾರಾಷ್ಟ್ರ ಚುನಾವಣಾ ಆಯೋಗವೂ ದಾಖಲೆ ಕೊಡುವಂತೆ ರಾಹುಲ್ಗೆ ಹೇಳಿದೆ. ರಾಹುಲ್ ಆರೋಪಕ್ಕೆ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್ ತಿರುಗೇಟು ಕೊಟ್ಟಿದ್ದಾರೆ. ಈ ಮುಂಚೆ ಚುನಾವಣೆ ನಡೆದಾಗಲೇ ಯಾಕೆ ಪ್ರಸ್ತಾಪಿಸಲಿಲ್ಲ? ಇದೊಂದು ಉದ್ದೇಶಪೂರ್ವಕವಾಗಿ ಮಾಡುತ್ತಿರುವ ದ್ವೇಷ ಅಂದಿದ್ದಾರೆ. ಇದನ್ನೂ ಓದಿ: ಅಮಿತ್ ಶಾ ವಿರುದ್ಧದ ಮಾನಹಾನಿ ಕೇಸ್ – ರಾಹುಲ್ ಗಾಂಧಿಗೆ ಜಾಮೀನು ಮಂಜೂರು
ಬಿಜೆಪಿ ನಾಯಕ ಸುನಿಲ್ ಕುಮಾರ್ ಮಾತನಾಡಿ, ಕಾಂಗ್ರೆಸ್ನವ್ರು ಗೆದ್ದಾಗ ಮತದಾರರ ಪಟ್ಟಿ ಸರಿ ಇರುತ್ತೆ. ರಾಹುಲ್ ಬಾಂಬ್ ಶಿವಕಾಶಿ ಪಟಾಕಿ ಫ್ಯಾಕ್ಟಿçಯಲ್ಲಿ ತಯಾರಾಗಿದೆ ಅಂತ ಕಿಡಿಕಾರಿದ್ದಾರೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆಶಿ ಮಾತಾಡಿ, ರಾಹುಲ್ ಗಾಂಧಿ ಅವರು ದೊಡ್ಡ ರಿಸರ್ಚ್ ಮಾಡಿದ್ದಾರೆ ಅಂದಿದ್ದಾರೆ.