ಮಂಗಳೂರು| ಕಿರಿಯ ವಯಸ್ಸಿನಲ್ಲೇ ರೋಲ್ಸ್‌ ರಾಯ್ಸ್‌ನಲ್ಲಿ ಉದ್ಯೋಗ; ವರ್ಷಕ್ಕೆ 72 ಲಕ್ಷ ಸಂಬಳ- ಯುವತಿಗೆ ಸನ್ಮಾನ

By
1 Min Read

ಮಂಗಳೂರು: ವಿಶ್ವದ ಪ್ರತಿಷ್ಠಿತ ರೋಲ್ಸ್-ರಾಯ್ಸ್‌ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡ ಕರ್ನಾಟಕದ ಕಿರಿಯ ವಯಸ್ಸಿನ ಮೊದಲ ಯುವತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಿತುಪರ್ಣ ಅವರನ್ನು ಸನ್ಮಾನಿಸಲಾಯಿತು.

ತುಳುನಾಡಿನ ಮಂಗಳೂರು ಯೆಯ್ಯಾಡಿಯ ವ್ಯಾಸನಗರ ನಿವಾಸಿ ಸುರೇಶ್ ಹಾಗೂ ಗೀತಾ ದಂಪತಿ ಪುತ್ರಿ ರಿತುಪರ್ಣ ಅವರ ಮನೆಗೆ ಶಾಸಕ ಎಸ್.ಎಲ್.ಭೋಜೇಗೌಡ ಅವರು ಭೇಟಿ ನೀಡಿ ಸನ್ಮಾನಿಸಿ ಅಭಿನಂದನೆ ತಿಳಿಸಿದರು. ಮುಂದಿನ ಭವಿಷ್ಯ ಇದೇ ರೀತಿ ಯಶಸ್ಸು ಕಾಣಲಿ ಎಂಬ ಶುಭ ಹಾರೈಸಿದರು.

ದಕ್ಷಿಣ ಕನ್ನಡ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ, ವಿಠಲ ಅಬುರ, ಕಿಟೆಲ್ ಮೆಮೋರಿಯಲ್ ಪಿಯು ಕಾಲೇಜು ಮಂಗಳೂರು ಪ್ರಾಂಶುಪಾಲರು, ಯುವ ಜೆಡಿಎಸ್ ಪಧಾದಿಕಾರಿಗಳಾದ ರತೀಶ್ ಕರ್ಕೇರ, ನಿತೇಶ್ ಪೂಜಾರಿ, ಆದರ್ಶ್ ಸುಧಾಕರ್, ಭಾರತ್ ಹೆಗ್ಡೆ ಮುಂತಾದವರು ಪಾಲ್ಗೊಂಡಿದ್ದರು.

Share This Article