ಕಾಂಗ್ರೆಸ್ ಯಾವತ್ತು ಹಿಟ್ ಅಂಡ್ ರನ್ ಮಾಡಲ್ಲ; ಕರ್ನಾಟಕದ ಮತಗಳ್ಳತನಕ್ಕೆ ಸಾಕ್ಷಿ ಇದೆ – ಪ್ರಿಯಾಂಕ್ ಖರ್ಗೆ

Public TV
1 Min Read

ಬೆಂಗಳೂರು: ಕಾಂಗ್ರೆಸ್ (Congress) ಯಾವತ್ತು ಹಿಟ್ ಅಂಡ್ ರನ್ ಮಾಡೋದಿಲ್ಲ. ಕರ್ನಾಟಕದಲ್ಲಿ ಮತಗಳ್ಳತನದ ಬಗ್ಗೆ ದಾಖಲಾತಿ ಇದೆ. ರಾಹುಲ್ ಗಾಂಧಿ ಬಿಡುಗಡೆ ಮಾಡ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ರಾಹುಲ್ ಗಾಂಧಿಯಿಂದ (Rahul Gandhi) ಚುನಾವಣೆ ಆಯೋಗದ ವಿರುದ್ಧ ಪ್ರತಿಭಟನೆ ಮಾಡ್ತಿರೋ ವಿಚಾರವಾಗಿ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಇಂದು ದೆಹಲಿಯಲ್ಲಿ (Delhi) ಸುದ್ದಿಗೋಷ್ಠಿ ಮಾಡ್ತಾರೆ. ದೆಹಲಿಯಲ್ಲಿ ಮತಗಳ್ಳತನ ದಾಖಲೆ ಬಿಡುಗಡೆ ಆಗುತ್ತದೆ. ಅದಾದ ಮೇಲೆ ಚುನಾವಣೆ ಆಯೋಗ ಯಾರ ನಿಯಂತ್ರಣದಲ್ಲಿ ಕೆಲಸ ಮಾಡ್ತಿದೆ ಎಂದು ನೀವೇ ತೀರ್ಮಾನ ತೆಗೆದುಕೊಳ್ಳಿ. ಇವತ್ತು ದಾಖಲೆ ಬಿಡುಗಡೆ ಮಾಡ್ತಾರೆ. ಆ. 8ರಂದು ಕರ್ನಾಟಕದಲ್ಲಿ ದಾಖಲಾತಿ ಬಿಡುಗಡೆ ಮಾಡ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌ಲ್ಲಿ ಜನರು ಕಾನೂನು ಕೈಗೆತ್ತಿಕೊಳ್ಳಬಾರದು – ಪ್ರಿಯಾಂಕ್ ಖರ್ಗೆ

ಪ್ರತಿಭಟನೆಗೆ ಬಿಜೆಪಿ (BJP) ವಿರೋಧ ವಿಚಾರವಾಗಿ ಮಾತನಾಡಿದ ಅವರು, ನಾವು ಆರೋಪನೇ ಮಾಡಿಲ್ಲ. ಮತಗಳ್ಳತನ ಆಗಿದೆ ಸಾಕ್ಷಿ ಕೊಡುತ್ತೇವೆ ಎಂದು ಹೇಳ್ತಾ ಇದ್ದೇವೆ. ಬಿಜೆಪಿ ಅವರು ಯಾಕೆ ಚುನಾವಣೆ ಆಯೋಗದ ವಕ್ತಾರರ ರೀತಿ ಮಾತಾಡ್ತಾರೆ. ಇಡಿ, ಐಟಿ, ಎಲ್ಲಾ ಸಂಸ್ಥೆಗಳಿಗೂ ಬಿಜೆಪಿ ಅವರು ವಕ್ತಾರರಂತೆ ಆಗಿದ್ದಾರೆ. ಆಯಾ ಸಂಸ್ಥೆಗಳಿಗೆ ವಕ್ತಾರರು ಇದ್ದಾರೆ ಅವರು ಮಾತಾಡಲಿ. ಬಿಜೆಪಿ ಅವರು ಯಾಕೆ ಮಾತಾಡಬೇಕು. ಕಾಂಗ್ರೆಸ್ ಯಾವತ್ತು ಹಿಟ್ ಅಂಡ್ ರನ್ ಮಾಡಲ್ಲ. ಎಲ್ಲಾ ದಾಖಲಾತಿ ಇವೆ. ದಾಖಲಾತಿ ನಿಮ್ಮ ಮುಂದೆ ಇಡುತ್ತೇವೆ. ಅದರ ಬಗ್ಗೆ ನೀವೇ ನಿರ್ಧಾರ ಮಾಡಿ ಎಂದಿದ್ದಾರೆ.

Share This Article