– ಮೈಸೂರಿಗೆ 45 ನಿಮಿಷ ತಡವಾಗಿ ತೆರಳಿದ ರೈಲು
ಶಿವಮೊಗ್ಗ: ಅನ್‌ಕಪ್ಲಿಂಗ್ ಆಗಿ ತಾಳಗುಪ್ಪ – ಮೈಸೂರು ರೈಲಿನ (Talaguppa-Mysuru Train) ಬೋಗಿ ಕಳಚಿ (Coach Derail) ದೊಡ್ಡ ಅನಾಹುತವೊಂದು ತಪ್ಪಿದ ಘಟನೆ ಶಿವಮೊಗ್ಗ (Shivamogga) ರೈಲು ನಿಲ್ದಾಣದ ಬಳಿ ನಡೆದಿದೆ.
16 ಬೋಗಿಗಳಿದ್ದ ರೈಲು ತಾಳಗುಪ್ಪದಿಂದ ಮೈಸೂರಿಗೆ ಹೊರಟಿತ್ತು. ಈ ವೇಳೆ ಅನ್‌ಕಪ್ಲಿಂಗ್ ಆಗಿ ರೈಲಿನ ಆರು ಬೋಗಿಗಳು ಕಳಚಿದ್ದು, ರೈಲು ತುಂಗಾ ಸೇತುವೆ ಮೇಲೆ ನಿಂತಿದೆ. 45 ನಿಮಿಷಗಳ ನಂತರ ರೈಲ್ವೆ ಸಿಬ್ಬಂದಿ ಅನ್‌ಕಪ್ಲಿಂಗ್ ಸರಿ ಮಾಡಿದ್ದಾರೆ. ಇದನ್ನೂ ಓದಿ: ಕೈಗಾ ಅಣುಸ್ಥಾವರದ ವಿಕಿರಣದಿಂದ ಜನರಲ್ಲಿ ಕ್ಯಾನ್ಸರ್ ಪತ್ತೆಯಾಗಿಲ್ಲ: ಅಣು ವಿದ್ಯುತ್ ಸ್ಥಾವರದ ನಿರ್ದೇಶಕ ಸ್ಪಷ್ಟನೆ
ರೈಲು ಬೋಗಿ ಕಳಚಿದ ಪರಿಣಾಮ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ಬಳಿಕ 45 ನಿಮಿಷ ತಡವಾಗಿ ರೈಲು ಮೈಸೂರಿಗೆ ತೆರಳಿದೆ. ಇದನ್ನೂ ಓದಿ: ಯೂಟ್ಯೂಬರ್‌ಗಳಿಗೆ ಥಳಿತ, ಅಪಪ್ರಚಾರಿಗಳನ್ನು ಬಂಧಿಸಿ – ಸಿಡಿದ ಧರ್ಮಸ್ಥಳದ ಭಕ್ತರು