ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಹಾಗೂ ಅಟ್ಲಿ ಕಾಂಬಿನೇಷನ್ನ ಇನ್ನು ಶೀರ್ಷಿಕೆ ಇಡದ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ (Mumbai) ಸದ್ದಿಲ್ಲದೇ ಆರಂಭಿಸಿದೆ ಎನ್ನಲಾಗ್ತಿದೆ. ಹೀಗಾಗಿ ನಟ ಅಲ್ಲು ಅರ್ಜುನ್ ತಮ್ಮ ಪತ್ನಿ ಸ್ನೆಹಾ ರೆಡ್ಡಿಯೊಂದಿಗೆ (Sneha Reddy) ಮುಂಬೈಗೆ ಬಂದಿಳಿದಿದ್ದಾರೆ. ಪುಷ್ಪಾ-2 ಸಿನಿಮಾ ಬಳಿಕ ಅಟ್ಲಿ ಜೊತೆ ಸಿನಿಮಾ ಮಾಡ್ತಿರುವ ಐಕಾನ್ ಸ್ಟಾರ್ ಅಲ್ಲು ಅರ್ಜುನ್. ಚಿತ್ರದ ಶೂಟಿಂಗ್ಗಾಗಿ ಗಂಟುಮೂಟೆ ಕಟ್ಟಿಕೊಂಡು ಮುಂಬೈ ತಲುಪಿದ್ದಾರೆ.
ಸೂಪರ್ ಮ್ಯಾನ್ ಕಾನ್ಸೆಪ್ಟ್ನ ಎಎ22*ಎ6 ಸಿನಿಮಾವನ್ನ ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಬಹುಕೋಟಿ ಬಜೆಟ್ನಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ಅಲ್ಲು ಅರ್ಜುನ್ ಕೂಡಾ ಸಾಕಷ್ಟು ತಯಾರಿಯನ್ನ ಮಾಡಿಕೊಂಡಿದ್ದಾರೆ. ಪುಷ್ಪ ಪಾರ್ಟ್-1 ಹಾಗೂ ಪುಷ್ಪ-2 ಸಿನಿಮಾಗಿಂತಲೂ ದೊಡ್ಡ ನಿರೀಕ್ಷೆ ಈ ಸಿನಿಮಾ ಮೇಲಿದೆ. ಹೀಗಾಗಿ ಎಲ್ಲ ರೀತಿಯ ಪೂರ್ವ ತಯಾರಿಯನ್ನ ನಿರ್ದೇಶಕರು ಕೂಡಾ ಮಾಡಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಶಾರುಖ್ ಖಾನ್ಗೆ ಜವಾನ್ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಅಟ್ಲಿ ಮೇಲೂ ಕೂಡಾ ಬೆಟ್ಟದಷ್ಟು ನಿರೀಕ್ಷೆಗಳಿವೆ.
ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್ನ ಸಿನಿಮಾದ ಶೂಟಿಂಗ್ ಮುಂಬೈನಲ್ಲಿ ನಡೆಯಲಿದ್ದು, ಈ ಭಾಗದ ಚಿತ್ರೀಕರಣದಲ್ಲಿ ನಟಿ ದೀಪಿಕಾ ಪಡುಕೋಣೆ, ಮೃಣಾಲ್ ಠಾಕೂರ್ ಹಾಗೂ ಜಾನ್ಹವಿ ಕಪೂರ್ ಕೂಡಾ ಭಾಗಿಯಾಗಲಿದ್ದಾರೆ ಎನ್ನಲಾಗ್ತಿದೆ. ಸದ್ಯ ಮುಂಬೈನ ಶೆಡ್ಯೂಲ್ನ ಚಿತ್ರೀಕರಣಕ್ಕೆ ನಟ ಅಲ್ಲು ಅರ್ಜುನ್ ತಮ್ಮ ಪತ್ನಿ ಜೊತೆ ಬಂದಿದ್ದಾರೆ. ಇನ್ನು ನಟ ಅಲ್ಲು ಅರ್ಜುನ್ ಈ ಸಿನಿಮಾಗಾಗಿ ಭಾರಿ ಮೊತ್ತವನ್ನೇ ಸಂಭಾವನೆಯಾಗಿ ಪಡೆಯುತ್ತಿದ್ದಾರೆ ಎಂದು ಹೇಳಲಾಗ್ತಿದೆ.