ಗದಗ | ವಿಚಿತ್ರ ಲವ್‌ಜಿಹಾದ್ ಪ್ರಕರಣ – ಬಲವಂತವಾಗಿ ಹಿಂದೂ ಯುವಕನ ಮತಾಂತರ ಮಾಡಿಸಿರೋ ಆರೋಪ

By
2 Min Read

ಗದಗ: ಪ್ರೀತಿಸಿ ಮದುವೆಯಾದ ವಿವಾಹಿತೆ ಹಿಂದೂ ಯುವಕನನ್ನು ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿರೋ ಆರೋಪ ಗದಗ (Gadag) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಗದಗ ನಗರದ ಗಾಂಧಿನಗರ ನಿವಾಸಿ ವಿಶಾಲಕುಮಾರ್ ಗೋಕಾವಿ ಹಾಗೂ ವಿವಾಹಿತೆ ತಹಸೀನಾ 3 ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಅಲ್ಲದೇ ಈ ಜೋಡಿಯು 2024ರ ನವೆಂಬರ್ 24ರಲ್ಲಿ ಗದಗ ರಿಜಿಸ್ಟರ್ ಕಚೇರಿನಲ್ಲಿ ಮದುವೆಯಾಗಿದ್ದರು. ರಿಜಿಸ್ಟರ್ ಮ್ಯಾರೇಜ್ ಬಳಿಕ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳಲು ತಹಸೀನಾ ಒತ್ತಾಯಿಸಿದ್ದಳು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಆನ್‌ಲೈನ್‌ ಜೂಜಿಗೆ ದಾಸನಾಗಿದ್ದ ಹೆಡ್ ಕಾನ್‌ಸ್ಟೆಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

ವಿಶಾಲಕುಮಾರ್, ಎರಡೂ ಕುಟುಂಬವು ಒಟ್ಟಿಗೆ ಚೆನ್ನಾಗಿರುವ ಉದ್ದೇಶದಿಂದ ಮದುವೆಗೆ ಒಪ್ಪಿ ಮುಸ್ಲಿಂ ಸಂಪ್ರದಾಯದಂತೆಯೂ ಮದುವೆವಾಗಿದ್ದ. ಈ ವೇಳೆ ಯುವತಿ ಮನೆಯವರು ನೀನು ಹಿಂದೂ ಧರ್ಮ ಬಿಟ್ಟು, ಮುಸ್ಲಿಂ ಧರ್ಮ ಸ್ವೀಕರಿಸು ಎಂದು ವಿಶಾಲಕುಮಾರ್‌ಗೆ ಒತ್ತಾಯ ಮಾಡಿದ್ದರು. 2025 ಏಪ್ರಿಲ್ 25ರಂದು ಜಮಾತ್‌ನಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮತ್ತೆ ಮದುವೆ ಮಾಡಿದ್ದರು. ಅಲ್ಲದೇ ಮದುವೆಯಲ್ಲಿ ವಿಶಾಲಕುಮಾರ್‌ಗೆ ಅರಿವಿಲ್ಲದಂತೆ ಆತನ ಹೆಸರು ಬದಲಾವಣೆ ಮಾಡಿದ್ದರು ಎನ್ನಲಾಗಿದೆ. ಇದನ್ನೂ ಓದಿ: 50% ಒಟ್ಟಾರೆ ಮೀಸಲಾತಿ ಮಿತಿ ತೆಗೆದು, 75%ಗೆ ಹೆಚ್ಚಿಸಬೇಕು: ಸಿದ್ದರಾಮಯ್ಯ ಪ್ರಸ್ತಾಪ

ಬಳಿಕ ತಹಸೀನ್ ಹಾಗೂ ಆಕೆ ತಾಯಿ ಬೇಗಂ ಬಾನು ಜಮಾತ್‌ಗೆ ಹೋಗುವಂತೆ ಬಲವಂತ ಮಾಡಿದ್ದರು. ಟೋಪಿ, ಜುಬ್ಬಾ ಧರಿಸು, ಹಣೆ ಮೇಲಿನ ಕುಂಕುಮ ಅಳಿಸು, ಕಿವಿ ಹಾಕಿರುವ ರಿಂಗ್ ತೆಗೆ, ಗಡ್ಡ ಬಿಡು, ನಿತ್ಯ ನಮಾಜ್ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಈ ಮಧ್ಯ ವಿಶಾಲಕುಮಾರ್, ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಚಾರ ತಿಳಿದ ಯುವಕನ ಕುಟುಂಬದಿಂದ ಹಿಂದೂ ಸಂಪ್ರದಾಯದಂತೆ ಮದುವೆಗೆ ಸಿದ್ಧತೆ ನಡೆಸಿದ್ದರು. ಜೂನ್ 5ರಂದು ಮದುವೆ ನಿಗದಿಯಾಗಿತ್ತು. ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ದರ್ಶನ್ ಫೋಟೋ ರಿವೀಲ್

ಆರಂಭದಲ್ಲಿ ಮುದುವೆಗೆ ಒಪ್ಪಿಗೆ ನೀಡಿದ್ದ ತಹಸೀನಾ, ಬಳಿಕ ಕುಟುಂಬಸ್ಥರ ಹಾಗೂ ಮುಸ್ಲಿಂ ಮುಖಂಡರ ಒತ್ತಾಯಕ್ಕೆ ಮಣಿದು ನಿರಾಕರಣೆ ಮಾಡಿದ್ದಾಳೆ. ಈಗ ವರಸೆ ಬದಲಿಸಿದ ಯುವತಿ ಕುಟುಂಬಸ್ಥರು, ಮುಸ್ಲಿಂ ಧರ್ಮಕ್ಕೆ ಮತಾಂತರ ಆಗದಿದ್ದರೆ, ಮುಂದೆ ಪರಿಣಾಮ ಬೇರೆಯಾಗುತ್ತೆ. ಅಲ್ಲದೇ ರೇಪ್ ಕೇಸ್ ಹಾಕ್ತೇನೆ. ಕೊಲೆ ಮಾಡಿಸ್ತಿನಿ ಎಂದು ಧಮ್ಕಿ ಹಾಕುತ್ತಿದ್ದಾರೆ ಎಂದು ವಿಶಾಲಕುಮಾರ್ ಆರೋಪಿಸಿದ್ದಾನೆ.

ಈ ಯುವಕನ ಹೋರಾಟಕ್ಕೆ ಶ್ರೀರಾಮ ಸೇನೆ ಸಾಥ್ ನೀಡಿದ್ದು, ಇದು ಲವ್ ಜಿಹಾದ್ (Love Jihad). ಹೀಗಾಗಿ ಯುವತಿ ಹಾಗೂ ಅವರ ಕುಟುಂಬದ ಮೇಲೆ ಕ್ರಮ ಜರುಗಿಸುವಂತೆ ಒತ್ತಾಸಿದ್ದಾರೆ.

Share This Article