ಬೆಂಗಳೂರಿಗೆ ಮತ್ತೊಂದು ಟನಲ್‌ ರೋಡ್‌ ಘೋಷಿಸಿದ ಡಿಕೆಶಿ

Public TV
1 Min Read

ಬೆಂಗಳೂರು: ಮತ್ತೊಂದು ಹೊಸ ಸುರಂಗ ರಸ್ತೆ(Tunnel Road) ಘೋಷಣೆಯಾಗಿದೆ. ಹೆಬ್ಬಾಳದ ಎಸ್ಟೀಮ್ ಮಾಲ್‌ನಿಂದ (Hebbal Esteem Mall) ಗಾಂಧಿ ಕೃಷಿ ವಿಜ್ಞಾನ ಕೇಂದ್ರದವರೆಗೆ (GKVK) 1.5 ಕಿ.ಲೋ ಮೀಟರ್ ಉದ್ದದ  ಹೊಸ ಟನಲ್ ರಸ್ತೆ ನಿರ್ಮಾಣವಾಗಲಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಘೋಷಣೆ ಮಾಡಿದ್ದಾರೆ.

ಮುಂದಿನ ಕ್ಯಾಬಿನೆಟ್‌ನಲ್ಲಿ (Cabinet) ಯೋಜನೆಗೆ ಅನುಮತಿ ಪಡೆದು, 2 ವರ್ಷದಲ್ಲಿ ಕಾಮಗಾರಿ ಮುಗಿಸುತ್ತೇವೆ. ವಿಶೇಷ ಹೊಸ ತಂತ್ರಜ್ಞಾನದ ಮೂಲಕ ಈ ಸುರಂಗ ಮಾರ್ಗ ನಿರ್ಮಿಸಲಾಗುವುದು ಎಂದಿದ್ದಾರೆ.

 

ಈ ಮೊದಲು ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಹೆಬ್ಬಾಳದವರೆಗೆ ಸುರಂಗ ಮಾರ್ಗ ಘೋಷಣೆಯಾಗಿತ್ತು. 16.75 ಕಿಲೋಮೀಟರ್ ಉದ್ದದ ಸುರಂಗ ರಸ್ತೆಯನ್ನು ನಿರ್ಮಿಸಲು ದೇಶದ ಹತ್ತು ಪ್ರಮುಖ ಕಂಪನಿಗಳು ಆಸಕ್ತಿಯನ್ನು ತೋರಿಸಿವೆ.

ಸುಮಾರು 17,698 ಕೋಟಿ ರೂ. ವೆಚ್ಚದ ಈ ಯೋಜನೆಯ ಗುತ್ತಿಗೆ ಪಡೆಯುವ ಕಂಪನಿಗಳು ನಿರ್ಮಾಣ ವೆಚ್ಚದ 60 % ರಷ್ಟು(10,619 ಕೋಟಿ ರೂ.) ಹೂಡಿಕೆ ಮಾಡಬೇಕಾಗುತ್ತದೆ ಎನ್ನುವ ಷರತ್ತು ವಿಧಿಸಲಾಗಿದೆ. ಬಿಡ್‌ಗಳನ್ನು ಸಲ್ಲಿಸುವ ಸಮಯದಲ್ಲಿ 44 ಕೋಟಿ ಠೇವಣಿ ರೂ. ಠೇವಣಿ ಇಡಬೇಕು. ಪ್ರತಿಯಾಗಿ ಸರ್ಕಾರವು 30 ವರ್ಷಗಳವರೆಗೆ ಟೋಲ್ ಸಂಗ್ರಹಿಸಲು ಹಕ್ಕು ನೀಡಲಿದೆ.

 

Share This Article