ಮತಗಳ್ಳತನದ ಬಗ್ಗೆ ದಾಖಲಾತಿ ಇವೆ, ರಾಹುಲ್ ಗಾಂಧಿ ಬಿಡುಗಡೆ ಮಾಡ್ತಾರೆ – ಪ್ರಿಯಾಂಕ್ ಖರ್ಗೆ

Public TV
1 Min Read

ಬೆಂಗಳೂರು: ಮತಗಳ್ಳತನದ ಬಗ್ಗೆ ದಾಖಲಾತಿಗಳು ಇವೆ. ನಾಳೆ ರಾಹುಲ್ ಗಾಂಧಿ (Rahul Gandhi) ಅದನ್ನು ಬಿಡುಗಡೆ ಮಾಡುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.

ಮಂಗಳವಾರ ರಾಹುಲ್ ಗಾಂಧಿ ಪ್ರತಿಭಟನೆ ಮಾಡುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿ ಮತಗಳವು ಬಗ್ಗೆ ಹೇಳಿದ್ದರು. ಅದರ ಬಗ್ಗೆ ಇಂದು ಸುದ್ದಿಗೋಷ್ಠಿ ಮಾಡಬೇಕಿತ್ತು. ಆದರೆ ಜಾರ್ಖಂಡ್ ಸಿಎಂ ಶಿಬು ಸೊರೇನ್ ಅವರು ತೀರಿಕೊಂಡಿದ್ದಾರೆ. ಹಾಗಾಗಿ ಸುದ್ದಿಗೋಷ್ಠಿ ಮುಂದೂಡಿಕೆಯಾಗಿರಬಹುದು. ಇಲ್ಲದಿದ್ದರೆ ದಾಖಲೆ ಬಿಡುಗಡೆ ಮಾಡುತ್ತಿದ್ದರು ಎಂದು ತಿಳಿಸಿದರು.ಇದನ್ನೂ ಓದಿ: ಡಿಗ್ರಿ ಬಳಿಕ ಮುಂದೇನು ಅನ್ನೋ ಚಿಂತೆ ಕಾಡ್ತಿದೆಯೇ? – ʻಪಬ್ಲಿಕ್‌ ಟಿವಿʼ ವಿದ್ಯಾಮಂದಿರಕ್ಕೆ ಬನ್ನಿ

ರಾಹುಲ್ ಗಾಂಧಿ ಪ್ರತಿಭಟನೆ ಮಾಡ್ತಾರೆ. ನಿಮಗೆ ಏನು ದಾಖಲೆ ಬೇಕು ಕೊಡ್ತಾರೆ. ನಿಮ್ಮ ಮುಂದೆ ಬರುವಾಗ ದಾಖಲಾತಿ ಇಟ್ಟುಕೊಂಡು ಬರೋದು. ಮತಗಳುವು ಹೇಗೆ ಆಗಿದೆ ಎಂದು ಸಾಕ್ಷ್ಯಗಳಿವೆ. ಲೀಗಲ್ ಆಗಿಯೇ ನಾವು ಪ್ರೂವ್ ಮಾಡ್ತೇವೆ. ಸುಮ್ಮನೆ ಸುದ್ದಿಗೋಷ್ಠಿ ಮಾಡಿದ್ರೆ ಪ್ರಯೋಜನವೇನು? ದಾಖಲೆ ಇರೋದ್ರಿಂದಲೇ ಮಾಡ್ತಿರೋದು ಎಂದು ಸ್ಪಷ್ಟಪಡಿಸಿದರು.

ನಾನು ಎಲೆಕ್ಷನ್ ಕಮೀಷನ್‌ಗೆ ದೂರು ಕೊಟ್ಟಿದ್ದೇನೆ. ಅದಕ್ಕೆ ಇನ್ನೂ ಆಯೋಗ ಉತ್ತರ ಕೊಟ್ಟಿಲ್ಲ. ಜಗತ್ತಿನಲ್ಲಿ ತಾಂತ್ರಿಕತೆಯಲ್ಲಿ 4ನೇ ಸ್ಥಾನ ನಮ್ಮದು. ಯಾಕೆ ಆಯೋಗ ನಮ್ಮ ಪ್ರಶ್ನೆಗೆ ಉತ್ತರ ಕೊಡ್ತಿಲ್ಲ. ಇವಿಎಂ ಬಗ್ಗೆ ಈಗಲೂ ನಮ್ಮ ಅಭಿಪ್ರಾಯ ಒಂದೇ. ಬಿಜೆಪಿ ಅವರ ಚಿಲುಮೆ ಟ್ರಸ್ಟ್ ಪ್ರಕರಣ ನೆನಪಿದ್ಯಾ? ಬೇರೆ ಬೇರೆ ಪ್ರಕರಣ ಇಲ್ಲವೇ. ನೋಡೋಣ ಎಲ್ಲವೂ ಹೊರಗೆ ಬರಲಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.ಇದನ್ನೂ ಓದಿ: ಕಾಳಸಂತೆ ಸೇರುತ್ತಿದೆ ಅನ್ನಭಾಗ್ಯ ಅಕ್ಕಿ – ಪಾಲಿಶ್‌ ನೀಡಿ ಹೆಚ್ಚಿನ ಬೆಲೆಗೆ ಮಾರಾಟ?

Share This Article