ಅಜಿತ್ ಸಿನಿ ಪಯಣಕ್ಕೆ 33 ವರ್ಷ: ಫ್ಯಾನ್ಸ್ ಸಂಭ್ರಮ

Public TV
1 Min Read

ಕಾಲಿವುಡ್‌ನ ನಟ ತಲಾ ಅಜಿತ್ (Ajit Kumar) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 33 ವರ್ಷಗಳು ತುಂಬಿವೆ. ಈ 33 ವರ್ಷಗಳ ಸುದೀರ್ಘ ಪಯಣದಲ್ಲಿ ಅಜಿತ್‌ಕುಮಾರ್ 63 ಸಿನಿಮಾಗಳನ್ನ ಮಾಡಿದ್ದಾರೆ. ಅವರ ಮುಂಬರುವ ಸಿನಿಮಾ 64ನೇ ಸಿನಿಮಾಗೆ ಸದ್ದಿಲ್ಲದೇ ತಯಾರಿ ಕೂಡಾ ನಡೆಯುತ್ತಿದೆ. 1993ರಲ್ಲಿ ತೆರೆಕಂಡ ಅಮರಾವತಿ ಸಿನಿಮಾ ಮೂಲಕ ತಮಿಳು ಚಿತ್ರರಂಗಕ್ಕೆ ಸ್ಪುರದ್ರೂಪಿ ನಾಯಕನಟನಾಗಿ ಎಂಟ್ರಿಕೊಟ್ಟಿದ್ದಾರೆ ನಟ ಅಜಿತ್.

`ಅಮರಾವತಿ’ ಸಿನಿಮಾಗಿಂತಲೂ ಮೊದಲೇ ಬಾಲ ಕಲಾವಿದರಾಗಿ `ಎನ್ ವೀಡು ಎನ್ ಕನವರ್’ ಸಿನಿಮಾದಲ್ಲಿ ನಟಿಸಿದ್ದ ಅಜಿತ್ ಕುಮಾರ್ ಶಾಲಾ ವಿದ್ಯಾರ್ಥಿ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಅದಾದ ಮೂರುವರ್ಷಗಳ ಬಳಿಕ `ಅಮರಾವತಿ’ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿ, ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನ ನೀಡಿದವರು. ನಾಯಕ ನಟರಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಅಜಿತ್ ಅವರಿಗೆ 33ನೇ ವರ್ಷದ ಸಂಭ್ರಮ. ಈ ಕ್ಷಣವನ್ನ ಅವರ ಅಭಿಮಾನಿಗಳು ಹ್ಯಾಶ್‌ಟ್ಯಾಗ್ ಬಳಸಿ `#33 ಇಯರ್ಸ್‌ ಆಫ್ ಅಜಿತಿಸಂ’ ಅಂತಾ ಸಂಭ್ರಮ ಪಡುತ್ತಿದ್ದಾರೆ. ಇದನ್ನೂ ಓದಿ: ಶ್ರೀದೇವಿಗೆ ಪ್ರಪೋಸ್ ಮಾಡಬೇಕಿದ್ದ ರಜನಿಕಾಂತ್ – ತಡೆದಿದ್ದು ಯಾವ ಪವರ್?

ಇದೇ ವರ್ಷ ತೆರೆಕಂಡ `ಗುಡ್ ಬ್ಯಾಡ್ ಅಗ್ಲಿ’ ಸಿನಿಮಾದ ನಿರ್ದೇಶಕ ಅಧಿಕ್ ರವಿಚಂದ್ರನ್ ಜೊತೆ ಮತ್ತೆ ಸಿನಿಮಾ ಮಾಡಲು ಎಲ್ಲಾ ತಯಾರಿ ನಡೆಯುತ್ತಿದೆ. ಈ ಸಿನಿಮಾಗೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಎಕೆ64 ಅನ್ನೋ ವರ್ಕಿಂಗ್ ಟೈಟಲ್‌ನಲ್ಲಿ ಅಜಿತ್ ಮುಂದಿನ ಸಿನಿಮಾ ಅನೌನ್ಸ್ ಮಾಡಲಾಗಿದೆ. ಅಜಿತ್ ಇತ್ತೀಚೆಗೆ ಸಿನಿಮಾಗಿಂತ ಕಾರ್ ರೇಸ್‌ನಲ್ಲೇ ಜಾಸ್ತಿ ಸಮಯ ಕಳೆಯುತ್ತಿದ್ದಾರೆ. ಕಾರ್ ರೇಸ್ ಜೊತೆಗೆ ಸಿನಿಮಾಗೂ ಟೈಮ್ ಕೊಡಲಿದ್ದಾರೆ ಅಜಿತ್.

Share This Article