ಬಳ್ಳಾರಿ | ತಂಗಿ ಜೊತೆಗಿದ್ದ ಫೋಟೋ ಶೇರ್ ಮಾಡಿದ್ದಕ್ಕೆ ಬ್ಯಾಟ್‍ನಿಂದ ಅಮಾನುಷ ಹಲ್ಲೆ – ವಿಡಿಯೋ ವೈರಲ್‌

Public TV
1 Min Read

ಬಳ್ಳಾರಿ: ತಂಗಿಯ ಜೊತೆಗಿದ್ದ ಫೋಟೋವನ್ನು ಇನ್ಸ್ಟಾದಲ್ಲಿ ಶೇರ್ ಮಾಡಿದ್ದಕ್ಕೆ ಗುಂಪು ಕಟ್ಟಿಕೊಂಡು ಬಂದು ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬಳ್ಳಾರಿಯಲ್ಲಿ (Ballari) ನಡೆದಿದೆ.

ದೊಡ್ಡಬಸವ (19) ಹಲ್ಲೆಗೊಳಗಾದ ಯುವಕ. ಶಶಿಕುಮಾರ್, ಸಾಯಿಕುಮಾರ್ ಸೇರಿ ಒಟ್ಟು 10 ಜನರಿಂದ ಹಲ್ಲೆ ನಡೆದಿದೆ. ಹಲ್ಲೆ ನಡೆಸಿದ ಯುವಕನೊಬ್ಬನ ತಂಗಿಯ ಜೊತೆ ಕಾರ್ಯಕ್ರಮ ಒಂದರಲ್ಲಿ ದೊಡ್ಡಬಸವ ಫೋಟೋ ತೆಗಿಸಿದ್ದ. ಅದನ್ನು ಇನ್ಸ್ಟಾದಲ್ಲಿ ಸ್ಟೇಟಸ್ ಹಾಕಿದ್ದ. ಇದೇ ಕಾರಣಕ್ಕೆ ಬೈಕ್‍ನಲ್ಲಿ ಐಟಿಐ ಕಾಲೇಜು ಮೈದಾನಕ್ಕೆ ಕರೆದೊಯ್ದು ಕ್ರಿಕೆಟ್ ಬ್ಯಾಟ್ ಹಾಗೂ ಬೆಲ್ಟ್‌ನಿಂದ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಲ್ಲೆ ನಡೆಸಿದವರೆಲ್ಲ ಕಾಲೇಜು ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದರ್ಶನ್‌ಗೆ ಕೊಟ್ಟಂತೆ ನನಗೂ ಬೇಲ್ ಕೊಡಿ – ನೇಹಾ ಕೊಲೆ ಆರೋಪಿಯಿಂದ ಕೋರ್ಟ್‌ಗೆ ಮನವಿ

ಕಾಲಿಗೆ ಬೀಳ್ತೀನಿ, ಕೈ ಮುಗಿತೀನಿ ಎಂದು ಯುವಕ ಅಂಗಾಲಾಚಿದ್ರೂ ಕರುಣೆ ತೋರದೇ ಮನಬಂದಂತೆ ಪುಂಡರು ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾಗಿರುವ ಯುವಕನ ತುಟಿ, ದವಡೆ, ಬೆನ್ನು, ಎದೆ, ಪಕ್ಕೆಲುಬು ಹಾಗೂ ಸೊಂಟಕ್ಕೆ ಗಾಯಗಳಾಗಿವೆ. ಈ ಸಂಬಂಧ ಬಳ್ಳಾರಿಯ ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಧಾರಾಕಾರ ಮಳೆ ನಡುವೆ ನಂ.10 ರಲ್ಲಿ ಶೋಧ – ದೂರುದಾರ ವ್ಯಕ್ತಿಗೆ ಮತ್ತೆ ನಿರಾಸೆ

Share This Article