ಬೆಂಗಳೂರು: ಯುವತಿ ಮಾತು ನಂಬಿ ಹೋದ ಯುವಕನನ್ನು ಕಿಡ್ನ್ಯಾಪ್ ಮಾಡಿ ಎರಡುವರೆ ಕೋಟಿ ರೂ.ಗೆ ಬೇಡಿಕೆಯಿಟ್ಟು, 8 ದಿನಗಳ ಕಾಲ ಕೂಡಿ ಹಾಕಿ ಹಲ್ಲೆ ಮಾಡಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಮಹಮ್ಮದ್ ಆಸಿಫ್, ಮಹಮ್ಮದ್ ನವಾಜ್, ಮಹಮ್ಮದ್ ಸುಹೇಲ್, ಸಲ್ಮಾನ್ ಪಾಷ ಬಂಧಿತ ಆರೋಪಿಗಳು. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರು (Bengaluru) ಮೂಲದ ಲಾರೆನ್ಸ್ ಎಂಬ ಯುವಕ, ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ವಾಪಸ್ ಬಂದು ಖಾಸಗಿ ಹೋಟೆಲ್ವೊಂದರಲ್ಲಿ ವಾಸವಿದ್ದ. ಜು. 15ರಂದು ಮುಂಜಾನೆ 3 ಗಂಟೆ ಸುಮಾರಿಗೆ ಮಹಿಮಾ ಎಂಬ ಯುವತಿ, ಲಾರೆನ್ಸ್ಗೆ ಕರೆ ಮಾಡಿ ನಿನ್ನನ್ನ ಮೀಟ್ ಮಾಡಬೇಕು ಎಲ್ಲಿದ್ದೀಯ ಅಂತಾ ಕರೆದಿದ್ದಳು. ಇದನ್ನೂ ಓದಿ: ಚಿಕ್ಕಪ್ಪನಿಂದಲೇ ಅಣ್ಣನ ಮಕ್ಕಳ ಕ್ರೂರ ಹತ್ಯೆ – ಇಬ್ಬರು ಸಾವು, 5 ವರ್ಷದ ಮಗು ಜೀವನ್ಮರಣ ಹೋರಾಟ
ಯುವತಿ ಕರೆದಿದ್ದಕ್ಕೆ ಲಾರೆನ್ಸ್ ಕೂಡ ಖುಷಿಯಿಂದ ಹೋಟೆಲ್ನಿಂದ ಆಕೆ ಹೇಳಿದ್ದ ಜಾಗಕ್ಕೆ ಹೋಗಿದ್ದ. ಈ ವೇಳೆ ಅಲ್ಲೇ ಇದ್ದ ಮೂವರು ಲಾರೆನ್ಸ್ನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದರು. ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳು ಯುವಕನನ್ನು ಸಿಟಿಯಲ್ಲ ಸುತ್ತಾಡಿಸಿ ಇಂದಿರಾನಗರದ ಸರ್ವೀಸ್ ಅಪಾಟ್ಮೆಂಟ್ಗೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದರು. ಇದನ್ನೂ ಓದಿ: Bengaluru | ಪಿಎಸ್ಐ ಹೊಡೆತಕ್ಕೆ ಶಾಶ್ವತ ಕಿವುಡನಾದ ವ್ಯಕ್ತಿ
ಬಳಿಕ ಎರಡುವರೆ ಕೋಟಿ ರೂ. ಹಣ ನೀಡಬೇಕು. ಇಲ್ಲಾಂದ್ರೆ ನಿನ್ನನ್ನು ಜೀವಂತ ಹೊರಗೆ ಬಿಡಲ್ಲ ಎಂದು ಬೆದರಿಕೆ ಹಾಕಿ, ಹಲ್ಲೆ ಮಾಡಿದ್ದರು. ಶಾಕಿಂಗ್ ವಿಚಾರವೆನೆಂದರೆ ಲಾರೆನ್ಸ್ಗೆ ಕರೆ ಮಾಡಿದ್ದ ಯುವತಿ ಸೇರಿದಂತೆ ಎಂಟು ಮಂದಿ ಅಲ್ಲೇ ಇದ್ದರು. ಸತತ 8 ದಿನಗಳ ಕಾಲ ಕೂಡಿ ಹಾಕಿ ಹಲ್ಲೆ ಮಾಡಿ ಹಿಂಸೆ ನೀಡಿದ ಆರೋಪಿಗಳು ಕೊನಗೆ 25 ಲಕ್ಷ ರೂ. ಹಣಕ್ಕೆ ಡೀಲ್ ಮಾಡಿ ಯುವಕನನ್ನು ಹೊರಗೆ ಬಿಟ್ಟಿದ್ದರು. ಹೊರಗೆ ಬಂದ ಯುವಕ ನೇರವಾಗಿ ಆಶೋಕನಗರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದ.
ಪ್ರಕರಣ ದಾಖಲಿಸಿಕೊಂಡ ಅಶೋಕ ನಗರ ಪೊಲೀಸರು (Ashok Nagar Police), ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವತಿ ಸೇರಿ ಇನ್ನುಳಿದ ನಾಲ್ವರಿಗಾಗಿ ಬಲೆಬೀಸಿದ್ದಾರೆ.