ಕಾಮಗಾರಿ ಪರಿಶೀಲನೆ ವೇಳೆ ರಸ್ತೆ ಕುಸಿದು ಉರುಳಿ ಬಿತ್ತು ಟ್ರಕ್‌ – ಓಡಿ ಪಾರಾದ ಜನ

By
1 Min Read

ಮುಂಬೈ: ಕಾಮಗಾರಿ ಪರಿಶೀಲನೆಗೆ ಬಂದ ಸಮಯದಲ್ಲೇ ಇದ್ದಕ್ಕಿದ್ದಂತೆ ರಸ್ತೆ (Road) ಕುಸಿದು ಟ್ರಕ್‌ (Truck) ಉರುಳಿದ ಘಟನೆ ಮಹಾರಾಷ್ಟ್ರದ ಬೀಡ್‌ (Beed) ಜಿಲ್ಲೆಯಲ್ಲಿ ನಡೆದಿದೆ.

ಬೀಡ್‌ನ ವಡ್ವಾನಿ ತಾಲೂಕಿನ ಖಡ್ಕಿ ಗ್ರಾಮದಲ್ಲಿ ಎಂಜಿನಿಯರ್ ಮತ್ತು ಅವರ ತಂಡವು ಭೇಟಿ ನೀಡಿ ರಸ್ತೆ ಕಾಮಗಾರಿಯ ಪರಿಶೀಲನೆ ನಡೆಸುತ್ತಿತ್ತು. ಈ ಸಮಯದಲ್ಲೇ ಸರಕು ತುಂಬಿದ್ದ ಟ್ರಕ್‌ ಮಣ್ಣಿನ ರಸ್ತೆಯಲ್ಲಿ ಬಂದಿದೆ. ಇದನ್ನೂ ಓದಿ: ರೀಲ್ಸ್‌ ಹುಚ್ಚಿನಿಂದ ಎಡವಟ್ಟು, ಸ್ಟಂಟ್‌ ಮಾಡ್ತಿದ್ದಾಗಲೇ 300 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು ಎದೆ ಝಲ್ ಎನಿಸುವ ದೃಶ್ಯ ಸೆರೆ!

ಟ್ರಕ್‌ ಸಂಚರಿಸುತ್ತಿದ್ದಂತೆ ರಸ್ತೆ ದಿಢೀರ್‌ ಕುಸಿದು ಉರುಳಿ ಬಿದ್ದಿದೆ. ಉರುಳಿ ಬೀಳುವುದನ್ನು ನೋಡಿ ಅಲ್ಲಿದ್ದ ಜನರು ಓಡಿ ಹೋಗಿದ್ದಾರೆ. ಒಂದು ವೇಳೆ ನಿಂತಿದ್ದ ಜಾಗದಲ್ಲೇ ನಿಂತಿದ್ದರೆ ಭಾರೀ ಸಾವು ನೋವು ಸಂಭವಿಸುವ ಸಾಧ್ಯತೆ ಇತ್ತು.  ಇದನ್ನೂ ಓದಿ: ಗಾರೆ ಕೆಲಸದವನ ಜೊತೆ ಕಂಟ್ರ್ಯಾಕ್ಟರ್ ಮಗಳ ಲವ್ – ಮದ್ವೆಯಾದ 15 ದಿನಕ್ಕೆ ಓಡಿಬಂದ ಗೃಹಿಣಿ!

ಸೇತುವೆ ನಿರ್ಮಾಣದಿಂದಾಗಿ ಸಂಚರಿಸಲು ಪರ್ಯಾಯವಾಗಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ರಸ್ತೆಯ ಅಪಾಯಕಾರಿ ಸ್ಥಿತಿಯ ಬಗ್ಗೆ ಸ್ಥಳೀಯ ವಿದ್ಯಾರ್ಥಿಗಳ ದೂರು ನೀಡಿದ್ದ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಎಂಜಿನಿಯರ್ ಸ್ಥಳಕ್ಕೆ ಭೇಟಿ ನೀದ್ದರು. ಟ್ರಕ್‌ ಉರುಳಿ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Share This Article