ಮುರುಘಾಶ್ರೀ ಕೇಸ್ ವಿಚಾರಣೆ ಆ.1ಕ್ಕೆ ಮುಂದೂಡಿಕೆ

Public TV
1 Min Read

ಚಿತ್ರದುರ್ಗ: ಚಿತ್ರದುರ್ಗದ ಮುರುಘಾಶ್ರೀ (Murugha Shree) ವಿರುದ್ಧ ಪೋಕ್ಸೋ ಪ್ರಕರಣದ (POCSO Case) ವಿಚಾರಣೆಯನ್ನು ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆಗಸ್ಟ್ 1ಕ್ಕೆ ಮುಂದೂಡಿದೆ.

ಮುರುಘಾ ಮಠದ ಮಾಜಿ ಆಡಳಿತಾಧಿಕಾರಿ ಹಾಗೂ ಮಾಜಿ ಶಾಸಕ ಬಸವರಾಜನ್ ವಿರುದ್ಧ ಎ1 ಮುರುಘಾಶ್ರೀ ಕೋರ್ಟ್ ಎದುರು ಹೇಳಿಕೆ ದಾಖಲಿಸುವಾಗ ಷಡ್ಯಂತ್ರ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಬಸವರಾಜನ್ ಹೇಳಿಕೆ ದಾಖಲಿಸಲು ಸರ್ಕಾರಿ ವಕೀಲ ಜಗದೀಶ್ ಕೋರಿದ್ದ ಮನವಿ ತಿರಸ್ಕಾರಗೊಂಡಿದೆ. ಇದನ್ನೂ ಓದಿ: ತಲಾ ಆದಾಯ ಶೇ.93.6ರಷ್ಟು ಹೆಚ್ಚಳ – ದೇಶದಲ್ಲೇ ಅಗ್ರ ಸ್ಥಾನಕ್ಕೇರಿದ ಕರ್ನಾಟಕ

ಹೀಗಾಗಿ ಸರ್ಕಾರಿ ವಕೀಲ ಜಗದೀಶ್ ಅವರು ಮೇಲ್ಮನವಿ ಸಲ್ಲಿಸಲು ಅವಕಾಶ ಕೋರಿದ್ದು, ಮುರುಘಾಶ್ರೀ ಕೇಸ್ ವಿಚಾರಣೆಯನ್ನು ಆ.1ಕ್ಕೆ ನ್ಯಾಯಾಲಯ ಮುಂದೂಡಿದೆ ಎಂದು ವಕೀಲ ಜಗದೀಶ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಕೇಸ್ – ಬುಧವಾರ SITಯಿಂದ ತನಿಖೆ ಆರಂಭ

Share This Article