ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ

By
1 Min Read

* ಬೆಂಗಳೂರು, ಕೋಲಾರದಲ್ಲಿ ಎನ್‌ಐಎ ಬೇಟೆ
* 2023ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೇಡ್‌ ಪತ್ತೆ ಪ್ರಕರಣದಲ್ಲಿ ನಡೆದಿತ್ತು ಶೋಧ

- Advertisement -

ಬೆಂಗಳೂರು: ಎಲ್‌ಇಟಿ ಭಯೋತ್ಪಾದಕ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಕೋಲಾರದಲ್ಲಿ ಕಾರ್ಯಾಚರಣೆ ನಡೆಸಿದ ಎನ್‌ಐಎ, ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರನ್ನು ಬಂಧಿಸಿದೆ.

- Advertisement -

ಬೆಂಗಳೂರಿನ ಪರಪ್ಪನ ಅಗ್ರಹಾರದ ಮನೋವೈದ್ಯ ಡಾ. ನಾಗರಾಜ್, ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಚಾನ್ ಪಾಷಾ ಮತ್ತು ತಲೆಮರೆಸಿಕೊಂಡಿರುವ ಆರೋಪಿಯ ತಾಯಿ ಅನೀಸ್ ಫಾತಿಮಾರನ್ನು ಬಂಧಿಸಲಾಗಿದೆ. ಶೋಧನಾ ಸಮಯದಲ್ಲಿ, ಬಂಧಿತ ಆರೋಪಿಗಳು ಮತ್ತು ಇತರ ಶಂಕಿತರ ಮನೆಗಳಿಂದ ವಿವಿಧ ಡಿಜಿಟಲ್ ಸಾಧನಗಳು, ನಗದು, ಚಿನ್ನ ಮತ್ತು ಅಪರಾಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

2023 ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೈಡ್‌ಗಳು ಪತ್ತೆಯಾಗಿದ್ದವು. ಜೀವಂತ ಗ್ರೆನೇಡನ್ನು ತರಲು ಟಿ.ನಾಸೀರ್ ಸೂಚಿಸಿದ್ದ. ಜುನೈದ್ ಮೂಲಕ ಇದನ್ನು ತರಿಸಿದ್ದ. ಬಳಿಕ ನಾಸೀರ್‌ನನ್ನು ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸಿತ್ತು. ಈಗಾಗಲೇ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನಾಸೀರ್‌ ಜೈಲಿನಲ್ಲಿದ್ದಾನೆ.

- Advertisement -

ಕೋರ್ಟ್‌ಗಳಲ್ಲಿ ಹಣ ಎಕ್ಸ್‌ಚೇಂಜ್ ಮಾಡಲು‌ ಎಎಸ್‌ಐ ಚಾನ್‌ ಪಾಷಾ ಸಹಾಯ ಮಾಡಿದ್ದ. ನಾಸೀರ್ ವೈದ್ಯರಿಂದ ಮೊಬೈಲ್‌ ಪಡೆಯುತ್ತಿದ್ದ. ಜೀವಂತ ಗ್ರೆನೇಡ್‌ ಕೇಸ್‌ನಲ್ಲಿ ಜುನೈದ್‌ ಎಸ್ಕೇಪ್‌ ಆಗಿದ್ದಾನೆ.

Share This Article