ಕಲಬುರಗಿ: ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಜೂಜಾಡುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಸಹ ಸೇರಿದ್ದಾರೆ.
ಕಾಂಗ್ರೆಸ್ ಮುಖಂಡ ಶಿವರುದ್ರಪ್ಪ, ಜಗನಗೌಡ, ಬಿಜೆಪಿ ಮುಖಂಡ ಶರಣಗೌಡ, ಸೋಮಶೇಖರ್ ಸೇರಿದಂತೆ ಏಳು ಜನ ಬಂಧಿಸಲಾಗಿದೆ. ಬಂಧಿತರಿಂದ 59,220 ರೂ ಹಣ ಸೇರಿದಂತೆ ಇತರ ವಸ್ತುಗಳ ಜಪ್ತಿ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: 20 ರೂಪಾಯಿಗಾಗಿ ತಾಯಿಯನ್ನೇ ಕೊಂದ ಪಾಪಿ ಮಗ
ಪಟ್ಟಣದ ಕಲ್ಯಾಣ ಮಂಟಪದ ಹಿಂಬದಿಯಲ್ಲಿ ಬಂಧಿತರು ಜೂಜಾಡುತ್ತಿದ್ದರು. ಈ ವೇಳೆ, ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಈ ಸಂಬಂಧ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾರವಾರ | ಹಳ್ಳಕ್ಕೆ ಬಿದ್ದ ಖಾಸಗಿ ಬಸ್ – ಓರ್ವ ಸಾವು, ಐವರು ಗಂಭೀರ