ಪಂಚಮಸಾಲಿ ಪೀಠಕ್ಕೆ ಹೊಸ ಶ್ರೀ? ಜಯಮೃತ್ಯುಂಜಯ ಸ್ವಾಮೀಜಿ ಉಚ್ಚಾಟನೆಗೆ ನಿರ್ಧಾರ?

Public TV
1 Min Read

-ದಿಢೀರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸ್ವಾಮೀಜಿ

ಬಾಗಲಕೋಟೆ: ಒಂದು ಕಡೆ ಪೀಠದಿಂದ ಸ್ವಾಮೀಜಿಗಳನ್ನು ಕೆಳಗಿಳಿಸುವ ಕಸರಸ್ತು ನಡೆಯುತ್ತಿದ್ದರೆ, ಇತ್ತ ಅನಾರೋಗ್ಯದಿಂದ ಜಯಮೃತ್ಯುಂಜಯ ಶ್ರೀಗಳು (Jaya Mruthyunjaya Swamiji) ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪಂಚಮಸಾಲಿ (Panchamasali) ಶ್ರೀಗಳಾದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.ಇದನ್ನೂ ಓದಿ: ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನ್ಯಾ.ವಿಭು ಭಕ್ರು ಪ್ರಮಾಣ ವಚನ ಸ್ವೀಕಾರ

ಬಾಗಲಕೋಟೆ ಕರೂಡಿ ಹೃದ್ರೋಗ ಆಸ್ಪತ್ರೆಗೆ ದಾಖಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಸ್ವಾಮೀಜಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಶುಕ್ರವಾರ ರಾತ್ರಿಯಿಂದಲೂ ಶ್ರೀಗಳಿಗೆ ತಲೆನೋವು, ವಾಂತಿ, ಎದೆ ನೋವು ಶುರುವಾಗಿತ್ತು. ಇಂದು ಬೆಳಿಗ್ಗೆ ಎದೆ ನೋವು ಹೆಚ್ಚಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇತ್ತೀಚಿಗೆ ಕೂಡಲಸಂಗಮ ಪೀಠಕ್ಕೆ ಬೀಗ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣದಿಂದ ಶ್ರೀಗಳು ಬಹಳ ನೊಂದುಕೊಂಡಿದ್ದರು. ಇದರ ಬೆನ್ನಲ್ಲೇ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇನ್ನೂ ಇದೇ ಪ್ರಕರಣದಲ್ಲಿ ಕೋರ್ಟ್ ಐವರು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.ಇದನ್ನೂ ಓದಿ: ಕೋಟಿ ಒಡೆಯನಾದ ಮಾದಪ್ಪ – ಒಂದೇ ತಿಂಗಳಲ್ಲಿ ಭಕ್ತರಿಂದ 2.36 ಕೋಟಿ ಕಾಣಿಕೆ

Share This Article