‘Sher’ Will Roar | ನಿಮಿಷಕ್ಕೆ 700 ಬುಲೆಟ್‌ ಹಾರಿಸಬಲ್ಲ `AK-203′ ರೈಫಲ್‌ ಸೇನೆಗೆ!

Public TV
2 Min Read

ಲಕ್ನೋ: ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಭಾರತ ರಕ್ಷಣಾ ವಲಯಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅದರ ಹಾದಿಯಾಗಿ ಒಂದಿಲ್ಲೊಂದು ಅಸ್ತ್ರಗಳು ಭಾರತೀ ಸೇನಾ (Indian Army) ಬತ್ತಳಿಕೆ ಸೇರಿಕೊಳ್ಳುತ್ತಿವೆ. ಎರಡುವಾರಗಳ ಹಿಂದೆಯಷ್ಟೇ ಮೋದಿ ಸರ್ಕಾರ 1 ಲಕ್ಷ ಕೋಟಿ ಮೊತ್ತದ ರಕ್ಷಣಾ ಯೋಜನೆಗಳಿಗೆ ಅನುಮತಿ ನೀಡಿತ್ತು. ಇದೀಗ ಸ್ವದೇಶಿ ನಿರ್ಮಿತ ಅತ್ಯಾಧುನಿಕ ಎಕೆ-203 ರೈಫಲ್‌ (AK-203 Assault Rifles) ಅನ್ನು ಭಾರತೀಯ ಸೇನೆಗೆ ಪೂರೈಸಲಾಗುತ್ತಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಹೌದು, ಭಾರತ-ರಷ್ಯಾ ಸಹಯೋಗದ ‘ಇಂಡೋ-ರಷ್ಯನ್‌ ರೈಫಲ್ಸ್‌ ಪ್ರೈವೇಟ್‌ ಲಿಮಿಟೆಡ್‌’ (IRRPL) ಉತ್ತರ ಪ್ರದೇಶದ ಅಮೇಠಿ ಜಿಲ್ಲೆಯ ಕೊರ್ವಾದ ಘಟಕದಲ್ಲಿ 48,000 ಎಕೆ – 203 ರೈಫಲ್‌ಗಳನ್ನು ಉತ್ಪಾದಿಸಿ, ಸೇನೆಗೆ ಪೂರೈಸಿದೆ. ಹೊಸ ಕಂತಿನಲ್ಲಿ 7,000 ರೈಫಲ್‌ಗಳು ಪೂರೈಕೆಯಾಗಲಿವೆ. ಇದನ್ನೂ ಓದಿ: 80,000 ನಗ್ನ ಫೋಟೋಸ್‌, ಸೆಕ್ಸ್‌ ಮಾಡಿ ಬೌದ್ಧ ಬಿಕ್ಕುಗಳ ಟ್ರ್ಯಾಪ್‌ – 100 ಕೋಟಿ ಸುಲಿಗೆ ಮಾಡಿದ್ದ ಹನಿ ಲೇಡಿ ಅರೆಸ್ಟ್‌

ಮುಂದಿನ 2-3 ವಾರಗಳಲ್ಲಿ ಶೇ. 50ರಷ್ಟು ದೇಶೀಯ ನಿರ್ಮಿತ ಸುಮಾರು 7,000 ಸಾವಿರ AK-203 ರೈಫಲ್‌ಗಳು, ಈ ವರ್ಷಾಂತ್ಯದ ವೇಳೇ 75,000 ಹಾಗೂ 2026ರ ವೇಳೆಗೆ ಸರಿಸುಮಾರು 1 ಲಕ್ಷ ರೈಫಲ್‌ಗಳು ಸೇನೆಗೆ ಪೂರೈಕೆಯಾಗಲಿವೆ. ನಂತರದಲ್ಲಿ ಅರೆಸೇನಾ ಪಡೆಗಳು ಹಾಗೂ ಪೊಲೀಸರಿಗೂ ಲಭ್ಯವಾಗಲಿದ್ದು, ಶೀಘ್ರದಲ್ಲೇ ಶೇ. 100ರಷ್ಟು ಸ್ವದೇಶಿ ನಿರ್ಮಿತ ರೈಫಲ್‌ಗಳ ಉತ್ಪಾದನೆ ಶುರುವಾಗಲಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿರುವುದಾಗಿ ವರದಿಯಾಗಿದೆ. ಇದನ್ನೂ ಓದಿ: ನನಗೂ ನನ್ನ ಪತ್ನಿಗೂ ಏನಾದ್ರು ಆದ್ರೆ ಅದಕ್ಕೆ ಪಾಕ್‌ ಸೇನಾ ಮುಖ್ಯಸ್ಥನೇ ಕಾರಣ: ಇಮ್ರಾನ್‌ ಖಾನ್‌ ಹೇಳಿಕೆ

ಸದ್ಯ 50% ರಷ್ಟು ಸ್ವದೇಶಿ ರೈಫಲ್‌ಗಳನ್ನ ಉತ್ಪಾದಿಸಲಾಗುತ್ತಿದ್ದು, 100% ರಷ್ಟು ರೈಫಲ್‌ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ರಕ್ಷಣಾ ಸಚಿವಾಲಯ ಮತ್ತು IRRPL ನಡುವೆ 10 ವರ್ಷಗಳಿಗೆ ಒಪ್ಪಂದವಾಗಿದ್ದು, ಈ ಅವಧಿಯೊಳಗೆ 6,01,427 ಎಕೆ-203 ಅಸಾಲ್ಟ್ ರೈಫಲ್‌ಗಳಿಗೆ ಆರ್ಡರ್‌ ನೀಡಲಾಗಿದೆ. 2025ರ ನಂತರ ವಾರ್ಷಿಕ 70 ಸಾವಿರ ರೈಫಲ್‌ ಉತ್ಪಾದಿಸುವ ನಿರೀಕ್ಷೆಯಿದ್ದು, 2030ರ ಹೊತ್ತಿಗೆ 6 ಲಕ್ಷ ರೈಫಲ್‌ ಪೂರೈಕೆ ಆಗಲಿದೆ ಎಂದು ಐಆರ್‌ಆರ್‌ಪಿಎಲ್‌ನ ಸಿಎಂಡಿ ಮೇಜರ್ ಜನರಲ್ ಎಸ್‌ಕೆ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ರಾಹುಲ್‌ನ ಜೈಲಿಗಟ್ಟುತ್ತೀನಿ, ದೇಶದ ಅನೇಕ ಜೈಲುಗಳು ಗಾಂಧಿ ಕುಟುಂಬಕ್ಕೆ ಕಾಯ್ತಿವೆ: ಅಸ್ಸಾಂ ಸಿಎಂ

ʻಶೇರ್‌ʼ ವಿಶೇಷತೆ ಏನು?
* 3.8 ಕೆ.ಜಿ ತೂಕ ಹೊಂದಿದ್ದು, ಕಾರ್ಯಾಚರಣೆ ಸುಲಭ
* ಹಳೆಯ ರೈಫಲ್‌ಗಳಿಗೆ ಹೋಲಿಸಿದ್ರೆ ಹೆಚ್ಚಿನ ನಿಖರತೆ
* ಪ್ರತಿ ನಿಮಿಷಕ್ಕೆ 700 ಸುತ್ತು ಗುಂಡು ಹಾರಿಸಬಲ್ಲ ತಾಕತ್ತು
* 800 ಮೀಟರ್‌ ರೇಂಜ್‌ ಸಾಮರ್ಥ್ಯ ಹೊಂದಿದೆ.

Share This Article