Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕ್ವೀನ್ ಪ್ರಿಮಿಯರ್ ಲೀಗ್‌ಗೆ ರಮ್ಯಾ ಅಂಬಾಸಿಡರ್ : ಲೋಗೋ ಲಾಂಚ್ ಮಾಡಿದ ಸ್ಯಾಂಡಲ್ವುಡ್ ಕ್ವೀನ್
Notification Show More
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Font ResizerAa
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
Cinema

ಕ್ವೀನ್ ಪ್ರಿಮಿಯರ್ ಲೀಗ್‌ಗೆ ರಮ್ಯಾ ಅಂಬಾಸಿಡರ್ : ಲೋಗೋ ಲಾಂಚ್ ಮಾಡಿದ ಸ್ಯಾಂಡಲ್ವುಡ್ ಕ್ವೀನ್

Last updated: July 7, 2025 1:08 pm
By
Share
2 Min Read

ಕ್ವೀನ್ಸ್ ಪ್ರೀಮಿಯರ್ ಲೀಗ್ (QPL) ಇದರ ಬಹುನಿರೀಕ್ಷಿತ ದ್ವಿತೀಯ ಆವೃತ್ತಿಯ ‘ಕ್ರೀಡೋತ್ಸವ’ ಲೋಗೋವನ್ನು ಬೆಂಗಳೂರಿನಲ್ಲಿ (Bengaluru) ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಕಳೆದ ವರ್ಷ ಯಶಸ್ವಿಯಾಗಿ ನಡೆದ ಮೊದಲ ಆವೃತ್ತಿಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆ ನಂತರ, ಈ ಸಲದ ಆವೃತ್ತಿಯಲ್ಲಿ 12 ಹೊಸ ಕ್ರೀಡೆಗಳನ್ನು ಸೇರಿಸಿಕೊಳ್ಳಲಾಗಿದ್ದು, ಇದು ಕೇವಲ ಕ್ರೀಡೆ (Sports) ಮಾತ್ರವಲ್ಲ, ಒಂದು ಮನರಂಜನೆಯ ಹಬ್ಬವಾಗುತ್ತಿದೆ.

25 ಮಿಲಿಯನ್ ಡಿಜಿಟಲ್ ವೀಕ್ಷಣೆಗಳು ಮತ್ತು 5000+ ಪ್ರೇಕ್ಷಕರು ಎಂಬ ಮೊದಲ ಆವೃತ್ತಿಯ ಭರ್ಜರಿ ಯಶಸ್ಸಿನ ಬಳಿಕ, QPL 2.0 ಭಾರತವ್ಯಾಪಿ ಚಳುವಳಿಯಾಗಿ ರೂಪುಗೊಳ್ಳಲು ಸಜ್ಜಾಗಿದೆ.

ಕಾರ್ಯಕ್ರಮದಲ್ಲಿ QPL ಸ್ಥಾಪಕ ಮಹೇಶ್ ಗೌಡ, ಜನಪ್ರಿಯ ನಟಿ ಹಾಗೂ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ(Ramya) ಹಾಗೂ ಪ್ರಸಿದ್ಧ ನಟ ಮತ್ತು QPL ಸಮಿತಿಯ ಸದಸ್ಯ ಪ್ರಮೋದ್ ಶೆಟ್ಟಿ (Pramod Shetty) ಉಪಸ್ಥಿತರಿದ್ದರು. ಜೊತೆಗೆ ಬಾಲಿವುಡ್ ನಟಿ ಎಲಿ ಎವ್ರಾಮ್ ಕೂಡ ತಮ್ಮ ಬೆಂಬಲವನ್ನು ಸೂಚಿಸಲು ಆಗಮಿಸಿದ್ದರು. ಬೆಂಗಳೂರಿನ ಕ್ರೀಡೆ, ಫ್ಯಾಷನ್ ಮತ್ತು ಚಲನಚಿತ್ರ ಲೋಕದ ಗಣ್ಯರು ಈ ವೇಳೆ ಹಾಜರಿದ್ದರು.  ಇದನ್ನೂ ಓದಿ: ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ; ಇಬ್ಬರು ಮಹಿಳೆಯರು ಸೇರಿ 6 ಜನ ವಶಕ್ಕೆ

More Read

Video | ಬೆಂಗಳೂರಿನಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿ
ಬೆಂಗಳೂರಲ್ಲಿ ಭಾರೀ ಮಳೆಗೆ ಹಲವೆಡೆ ಜಲಾವೃತ – ಗುಂಡಿಬಿದ್ದ ರಸ್ತೆಗಳಲ್ಲಿ ನಿಂತ ನೀರು, ಕೆಟ್ಟು ನಿಂತ ವಾಹನಗಳು
ಹನಿಮೂನ್‌ಗೆ ಫಿಕ್ಸ್‌ ಮಾಡೋದನ್ನೂ ಕಾಯ್ತಿದ್ದೀನಿ – ಮದ್ವೆ ವದಂತಿಗೆ ತೆರೆ ಎಳೆದ ನಟಿ ತ್ರಿಶಾ
ನಾವು ಅಧಿಕಾರಕ್ಕೆ ಬಂದ್ರೆ ಜಿಬಿಎ ರದ್ದು ಮಾಡ್ತೀವಿ: ಆರ್.ಅಶೋಕ್

QPL 2.0 ಮೂಲಕ ನಾವು ಕೇವಲ ಮುಂದಿನ ಹಂತಕ್ಕೆ ಹೋಗುತ್ತಿಲ್ಲ. ನಾವು ಮಹಿಳೆಯರಿಗಾಗಿ ಕ್ರೀಡೆ ಮತ್ತು ಮನರಂಜನೆ ಕ್ಷೇತ್ರವನ್ನು ಪೂರ್ತಿಯಾಗಿ ಬದಲಾಯಿಸುತ್ತಿದ್ದೇವೆ ಎಂದು ಮಹೇಶ್ ಗೌಡ ಹೇಳಿದರು.

ಈ ಸೀಸನ್ನಲ್ಲಿ ನಾವು 50 ಮಿಲಿಯನ್ ಡಿಜಿಟಲ್ ವೀಕ್ಷಣೆಗಳ ಗುರಿ ಹೊಂದಿದ್ದೇವೆ, ಭಾರತದೆಲ್ಲೆಡೆ ವಿಸ್ತರಿಸಲು ತಯಾರಾಗಿದ್ದೇವೆ. ಇಂದು ಯುವಕರು ಮೊಬೈಲ್ ಗೇಮಿಂಗ್ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚು ನಿಲುಕುತ್ತಿರುವುದನ್ನು ನೋಡಿ ಚಿಂತೆಗೊಳಗಾಗಬೇಕಾಗಿದೆ. ಸಿನಿ ತಾರೆಗಳು ತಾವು ಫಿಟ್ ಆಗಿ ಉಳಿಯಲು ಸಮಯ ಒದಗಿಸುತ್ತಿರುವುದೇ ಯುವ ಜನತೆಗೆ ಪ್ರೇರಣೆಯಾಗಿದೆ. ನಿಜವಾದ ಸಬಲೀಕರಣ ನಿಜವಾದ ಭಾಗವಹಿಸುವಿಕೆಯಿಂದ ಶುರುವಾಗುತ್ತದೆ ಎಂದರು. ಇದನ್ನೂ ಓದಿ: ʻಕಿಲ್ಲರ್‌ʼ ಚಿತ್ರಕ್ಕೆ ರೆಹಮಾನ್‌ ಮ್ಯೂಸಿಕ್‌ – ಗನ್‌ ಮಾದರಿಯ ಗಿಟಾರ್‌ ಹಿಡಿದು ಪೋಸ್‌ ಕೊಟ್ಟ ಸಂಗೀತ ದಿಗ್ಗಜ!

ರಮ್ಯಾ ಮಾತನಾಡಿ, ಕ್ಯೂಪಿಎಲ್ ಮಹಿಳಾ ಕಲಾವಿದರ ಬೆಂಬಲಿಸಿ, ಅವರನ್ನು ಉತ್ತೇಜಿಸುತ್ತಿರುವ ರೀತಿ ನನಗೆ ತುಂಬಾ ಇಷ್ಟವಾಗಿದೆ. ಈ ವೇದಿಕೆಯ ಮೂಲಕ ಮಹಿಳೆಯರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ಜೊತೆಗೆ ಮಹಿಳೆಯರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿತರಾಗಬೇಕು. ಇದು ನಮಗೆ ದೈಹಿಕವಾಗಿ ಆರೋಗ್ಯಕರವಾಗಿರುವುದಕ್ಕೆ ಸಹಾಯ ಮಾಡುತ್ತದೆ ಮತ್ತು ಆನ್ಲೈನ್ ಗೇಮಿಂಗ್ ಹಾಗೂ ಸೋಷಲ್ ಮೀಡಿಯಾದಿಂದ ದೂರವಿರಲು ನೆರವಾಗುತ್ತದೆ. ಕ್ಯೂಪಿಎಲ್ನೊಂದಿಗೆ ನನ್ನ ಸಹಯೋಗ ಇರುವುದಕ್ಕೆ ನನಗೆ ಸಂತೋಷವಾಗಿದೆ ಎಂದು ಹೇಳಿದರು.

ಪ್ರಮೋದ್ ಶೆಟ್ಟಿ ಮಾತನಾಡಿ, QPL ಎಂದರೆ ಕ್ರೀಡೆ ಒಂದೇ ಇಲ್ಲ, ಇದು ಗುರಿಯನ್ನು ಹೊಂದಿರೋ ಮನರಂಜನೆ. ಇದು ಚಲನಚಿತ್ರ ಕ್ಷೇತ್ರ ಮತ್ತು ಕಾರ್ಪೊರೇಟ್ ಜಗತ್ತನ್ನು ಒಂದು ವೇದಿಕೆಯಲ್ಲಿ ತಂದುಕೊಂಡು, ಫಿಟ್ನೆಸ್, ಮಹಿಳಾ ಸಬಲೀಕರಣ ಮತ್ತು ಚೈತನ್ಯಮಯ ಒಗ್ಗಟ್ಟು ಒದಗಿಸುತ್ತದೆ. ಇದು ಯುವಜನತೆಯಲ್ಲಿನ ಅಜಾಗರೂಕ ತಂತ್ರಜ್ಞಾನ ಬಳಕೆಗೆ ಸಮರ್ಪಕವಾಗಿ ಪೂರಕವಾಗಿದೆ ಎಂದು ತಿಳಿಸಿದರು.

Share This Article
Facebook Whatsapp Whatsapp Telegram
Previous Article ʻಕಿಲ್ಲರ್‌ʼ ಚಿತ್ರಕ್ಕೆ ರೆಹಮಾನ್‌ ಮ್ಯೂಸಿಕ್‌ – ಗನ್‌ ಮಾದರಿಯ ಗಿಟಾರ್‌ ಹಿಡಿದು ಪೋಸ್‌ ಕೊಟ್ಟ ಸಂಗೀತ ದಿಗ್ಗಜ!
Next Article ರಶ್ಮಿಕಾ ಹೇಳಿದ್ರೆ ಅದು ನಿಜ ಆಗೋಲ್ಲ – ನಿಧಿ ಸುಬ್ಬಯ್ಯ ಕೌಂಟರ್

Popular News

ಮರ್ಯಾದೆಗೇಡು ಹತ್ಯೆಗೈದ ಇಬ್ಬರು ಸಹೋದರರಿಗೆ ಮರಣದಂಡನೆ, ಐವರಿಗೆ ಜೀವಾವಧಿ ಶಿಕ್ಷೆ
ದೆಹಲಿ ಎನ್‌ಸಿಆರ್ ಪ್ರದೇಶದಲ್ಲಿ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡುವಂತೆ ಸುಪ್ರೀಂಗೆ ಮನವಿ