ಮಂಗಳೂರು: ಡಿವೈಎಸ್‌ಪಿ ವಿಜಯಕ್ರಾಂತಿ ವರ್ಗಾವಣೆಯಲ್ಲಿ ಬದಲಾವಣೆಯಾಗಿದೆ. ಯಾದಗಿರಿ ಬದಲಿಗೆ ಮಂಗಳೂರು ದಕ್ಷಿಣಕ್ಕೆ ವರ್ಗಾವಣೆ ಮಾಡಲಾಗಿದೆ.
ಯಾದಗಿರಿ ಉಪವಿಭಾಗದ ಬದಲು ಮಂಗಳೂರು ದಕ್ಷಿಣಕ್ಕೆ ವಿಜಯಕ್ರಾಂತಿ ಅವರನ್ನು ಟ್ರಾನ್ಸ್‌ಫರ್ ಮಾಡಲಾಗಿದೆ. ಮಂಗಳೂರು ದಕ್ಷಿಣ ಡಿವೈಎಸ್‌ಪಿ ಪ್ರಕಾಶ್ ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ತಮ್ಮರಾಯ ಪಾಟೀಲ್ ಕಲಬುರುಗಿ ಆಳಂದ ಉಪವಿಭಾಗ ಡಿವೈಎಸ್‌ಪಿಯಾಗಿ ವರ್ಗಾಯಿಸಲಾಗಿದೆ.
ಯಾದಗಿರಿ ಕಾಂಗ್ರೆಸ್ ಶಾಸಕ ಚೆನ್ನಾರೆಡ್ಡಿ ಪಾಟೀಲ್ ವಿರುದ್ಧ ಮಾಜಿ ಶಾಸಕ ರಾಜ್‌ಕುಮಾರ್ ತೇಲ್ಕೂರ್ ಲಂಚದ ಬಾಂಬ್ ಸಿಡಿಸಿದ್ದರು. ಯಾದಗಿರಿ ಡಿವೈಎಸ್‌ಪಿ ವಿಜಯಕ್ರಾಂತಿಗೆ ಪೋಸ್ಟಿಂಗ್ ಆದರೂ ಕೆಲಸಕ್ಕೆ ಹಾಜರಾಗಲು ಶಾಸಕ ಚೆನ್ನಾರೆಡ್ಡಿ ಪಾಟೀಲ್, ಅವರ ಮಗ ಪಂಪನಗೌಡ ಪಾಟೀಲ್ 50 ಲಕ್ಷ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ ಅಂತ ತೇಲ್ಕೂರ್ ಆರೋಪಿಸಿದ್ದರು. ಪೋಸ್ಟಿಂಗ್ ಆಗಿ 15 ದಿನಗಳಾದ್ರೂ ಡಿವೈಎಸ್‌ಪಿ ವಿಜಯಕ್ರಾಂತಿಗೆ ಕೆಲಸಕ್ಕೆ ಬರದಂತೆ ಅಡ್ಡಿಪಡಿಸಿರೋದಾಗಿ ಸಿಎಸ್ ಶಾಲಿನಿ ರಜನೀಶ್, ಡಿಜಿಪಿ ಸಲೀಂ ಅಹಮದ್‌ಗೆ ದೂರು ನೀಡಿದ್ದರು.
ರಾಜಕುಮಾರ್ ತೇಲ್ಕೂರ್ ಆರೋಪವನ್ನ ಶಾಸಕ ಚೆನ್ನಾರೆಡ್ಡಿ ತಳ್ಳಿಹಾಕಿದ್ದಾರೆ. ಎಡಿಜಿಪಿ, ಡಿಐಜಿ ಲೆವೆಲ್‌ನಲ್ಲಿ ಡಿವೈಎಸ್‌ಪಿ ವರ್ಗಾವಣೆ ಆಗುತ್ತೆ.. ವಿನಾಕಾರಣ ನನ್ನ ತೇಜೋವಧೆ ಸರಿಯಲ್ಲ. ಡಿವೈಎಸ್‌ಪಿ ಏನಾದ್ರೂ ಕಂಪ್ಲೆಂಟ್ ಕೊಟ್ಟಿದ್ದಾರಾ..? ಅಂತ ಪ್ರಶ್ನಿಸಿದ್ದಾರೆ. ಈ ಹೊತ್ತಲ್ಲೇ ವಿಜಯಕ್ರಾಂತಿ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ.