ಚಾ.ನಗರ| ರೈತರ ಜಮೀನಿಗೆ ನುಗ್ಗಿದ ಕಾಡಾನೆಗಳು- ಲಕ್ಷಾಂತರ ಮೌಲ್ಯದ ಬೆಳೆ ನಾಶ

Public TV
0 Min Read

ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಸುತ್ತಮುತ್ತ ಕಾಡಾನೆಗಳ ಉಪಟಳ ಮುಂದುವರಿದಿದೆ.

ಗ್ರಾಮದ ಮಹದೇವಪ್ಪ ಹಾಗೂ ಬಸವರಾಜಪ್ಪ ಎಂಬ ರೈತರ ಜಮೀನುಗಳಿಗೆ ನುಗ್ಗಿದ ಕಾಡಾನೆಗಳು ಸೋಲಾರ್ ತಂತಿಬೇಲಿಗಳನ್ನು ದ್ವಂಸ ಮಾಡಿ ಜಮೀನಿನಲ್ಲಿ ಬೆಳೆದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ತರಕಾರಿ ಬೆಳೆಗಳನ್ನು ತಿಂದು ತುಳಿದು ಹಾನಿ ಮಾಡಿವೆ.

ಕಾಡಾನೆಗಳ ಹಾವಳಿ ತಪ್ಪಿಸಬೇಕು ಹಾಗೂ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

Share This Article