ಚಿಕ್ಕಬಳ್ಳಾಪುರ | ಆನ್‌ಲೈನ್‌ ಜೂಜಿಗೆ ದಾಸನಾಗಿದ್ದ ಹೆಡ್ ಕಾನ್‌ಸ್ಟೆಬಲ್ ನೇಣು ಬಿಗಿದುಕೊಂಡು ಆತ್ಮಹತ್ಯೆ

Public TV
1 Min Read

ಚಿಕ್ಕಬಳ್ಳಾಪುರ: ಹೆಡ್‌ ಕಾನ್ಸ್‌ಟೇಬಲ್‌ (Head Constable) ಒಬ್ಬರು ಪೊಲೀಸ್‌ ಠಾಣೆ ಆವರಣದಲ್ಲೇ ಇರುವ ಕ್ವಾಟ್ರಸ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.

ಮಂಚೇನಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್‌ ರಾಜಶೇಖರ್ (45) ಆತ್ಯಹತ್ಯೆ ಮಾಡಿಕೊಂಡವರು. ಠಾಣಾ ಆವರಣದಲ್ಲಿದ್ದ ಕ್ವಾಟ್ರಸ್‌ನಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ನಿರ್ಧಾರವನ್ನು ನಾನು, ಡಿಕೆಶಿ ಇಬ್ಬರೂ ಪಾಲಿಸುತ್ತೇವೆ – ಮತ್ತೆ ಸಿಎಂ ಸ್ಪಷ್ಟನೆ

ಕಾರಣ ಏನು?
ಮೊಬೈಲ್ ಆನ್‌ಲೈನ್ ಜೂಜಾಟಗಳಿಗೆ (Online gambling) ದಾಸನಾಗಿದ್ದ ಕಾನ್ಸ್‌ಟೇಬಲ್‌ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಹಲವರ ಬಳಿ ಬಡ್ಡಿಗೆ ಕೈಸಾಲ ಮಾಡಿಕೊಂಡಿದ್ದರು. ಈ ಬಗ್ಗೆ ತನ್ನ ಪೋಷಕರ ಬಳಿ ಕಷ್ಟ ಹೇಳಿಕೊಂಡಿದ್ದರು. ಜೊತೆಗೆ ಪತ್ನಿಯ ಚಿನ್ನಾಭರಣವನ್ನ ಸಾಲ ತೀರಿಸಲು ಅಡವಿಟ್ಟಿದ್ದರು ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ. ಇದನ್ನೂ ಓದಿ: ಮುಜರಾಯಿ ಇಲಾಖೆ ಸುಪರ್ದಿಗೆ ಗಾಳಿ ಆಂಜನೇಯ ದೇವಸ್ಥಾನ – ಹೈಕೋರ್ಟ್‌ನಲ್ಲಿ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

Share This Article