ಆಟೋ ಚಾಲಕರೇ ಗಮನಿಸಿ, ಹಿಂದೆ ಜಾಹೀರಾತು ಹಾಕ್ತೀರಾ? ಹಣದಾಸೆಗೆ ಪೋಸ್ಟರ್ ಹಾಕಿದ್ರೆ ಬೀಳುತ್ತೆ ಭಾರೀ ದಂಡ!

Public TV
1 Min Read

ಬೆಂಗಳೂರು: ನಗರದಲ್ಲಿ ಅನೇಕ ಆಟೋಗಳ (Auto) ಹಿಂದೆ ಕಲರ್ ಕಲರ್ ಜಾಹೀರಾತು (Advertisement) ಹಾಕಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಆರ್‌ಟಿಓ ಬಿಸಿ ಮುಟ್ಟಿಸಿದೆ. 500 ಹಾಗೂ ಸಾವಿರದಾಸೆಗೆ ಪೋಸ್ಟರ್ ಅಂಟಿಸಿ ಅಧಿಕಾರಿಗಳಿಗೆ ತಗ್ಲಾಕೊಂಡು ಸಾವಿರಾರು ರೂ. ಫೈನ್ ಕಟ್ಟುವಂತಾಗಿದೆ.

ಆಟೋಗಳ ಮೇಲೆ ಪೋಸ್ಟರ್ ಅಂಟಿಸಿದವರಿಗೆ ಆರ್‌ಟಿಓ (RTO) ಫೈನ್ ಅಸ್ತ್ರ ಪ್ರಯೋಗ ಮಾಡಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ 5,000 ರೂ. ದಂಡ ಪ್ರಯೋಗ ಮಾಡಿರುವುದು ಆಟೋ ಚಾಲಕರ ಪಾಲಿಗೆ ಬಿಗ್ ಶಾಕ್ ಆಗಿದೆ. ಇದನ್ನೂ ಓದಿ: 2019 ರಲ್ಲಿ ಶಂಕು, ಇಂದು ಲೋಕಾರ್ಪಣೆ – ಸಿಗಂದೂರು ಸೇತುವೆಯನ್ನು ಉದ್ಘಾಟಿಸಲಿದ್ದಾರೆ ಗಡ್ಕರಿ

ಸಾರಿಗೆ ಇಲಾಖೆಯ ನಿಯಮದ ಪ್ರಕಾರ ಆಟೋಗಳಲ್ಲಿ ಜಾಹೀರಾತು ಪ್ರದರ್ಶನ ಮಾಡುವುದಕ್ಕೆ ವಾರ್ಷಿಕವಾಗಿ ಅನುಮತಿ ಪಡೆದಿರಬೇಕು. ಏನೇ ಜಾಹೀರಾತು ಅಳವಡಿಕೆ ಮಾಡಿದರೂ ವರ್ಷಕ್ಕೆ 5,000 ರೂ. ಕಟ್ಟಬೇಕು. ಹಾಗೊಮ್ಮೆ ಅನುಮತಿ ಪಡೆದಿದ್ದರೆ, ವರ್ಷವಿಡೀ ಜಾಹೀರಾತು ಅಳವಡಿಕೆಗೆ ಅವಕಾಶ ಇದೆ. ಆದರೆ ಈ ನಿಯಮದ ಬಗ್ಗೆ ನಗರದ ಬಹುತೇಕ ಆಟೋ ಚಾಲಕರಿಗೆ ಅರಿವೇ ಇಲ್ಲ. ಅನುಮತಿ ಪಡೆಯದೇ ಹಾಗೂ ಹಣದ ಆಸೆಗೆ ಆಟೋ ಹಿಂದೆ ಜಾಹೀರಾತು ಪೋಸ್ಟರ್ ಹಾಕಿಸಿ ಆರ್‌ಟಿಓ ಫೈನ್ ಸುಳಿಯಲ್ಲಿ ಚಾಲಕರು ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಮೊಳಕಾಲ್ಮೂರಲ್ಲಿ ಬೀದಿಗೆ ಬಂದ ‘ಕೈ’ ನಾಯಕರ ಶೀತಲ ಸಮರ – ಪ.ಪಂ. ಕಚೇರಿ ಬಳಿ ಯೋಗೀಶ್ ಬಾಬು ಧರಣಿ

ಬೈಕ್ ಟ್ಯಾಕ್ಸಿ ಬ್ಯಾನ್ ಬೆನ್ನಲ್ಲೇ ಸಾರಿಗೆ ಸಚಿವರ ಸೂಚನೆ ಮೇರೆಗೆ ಆಟೋ ಚಾಲಕರ ಎಫ್‌ಸಿ, ಪರ್ಮಿಟ್, ಮೀಟರ್ ಅಳವಡಿಕೆಯನ್ನ ಆರ್‌ಟಿಓ ವ್ಯಾಪ್ತಿಯಲ್ಲಿ ಪರಿಶೀಲನೆ ಮಾಡಲಾಗುತ್ತಿತ್ತು. ಈ ವೇಳೆ ಕೆಲವೊಂದು ಪೋಸ್ಟರ್ ಆಟೋ ಹಿಂದೆ ಹಾಕಿದ್ದಕ್ಕೆ ನಗರದ ಸಾವಿರಾರು ಆಟೋಗಳಿಗೆ ದಂಡದ ಬಿಸಿ ತಟ್ಟಿದೆ. ಇದನ್ನೂ ಓದಿ: ಡಿವೋರ್ಸ್‌ ಘೋಷಿಸಿದ ಸೈನಾ ನೆಹ್ವಾಲ್‌-ಪರುಪಳ್ಳಿ ಕಶ್ಯಪ್ ದಂಪತಿ

Share This Article