ಭೋಪಾಲ್: ಮಧ್ಯಪ್ರದೇಶದ (Madhya Pradesh) ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (Kuno National Park) ಗಾಯಗೊಂಡಿದ್ದ 8 ವರ್ಷದ ಹೆಣ್ಣು ಚೀತಾವೊಂದು (female cheetah) ಸಾವನ್ನಪ್ಪಿದೆ.
8 ವರ್ಷದ ನಮೀಬಿಯಾದ ಹೆಣ್ಣು ಚೀತಾ ನಭಾ ಶನಿವಾರ ಸಾವನ್ನಪ್ಪಿದೆ. ಒಂದು ವಾರದ ಹಿಂದೆ ಬೇಟೆಯಾಡುವ ವೇಳೆ ಚೀತಾ ತೀವ್ರವಾಗಿ ಗಾಯಗೊಂಡಿತ್ತು. ಈ ವೇಳೆ ಎಡಭಾಗದ ಮೂಳೆ ಮುರಿತವಾಗಿತ್ತು. ಅಲ್ಲದೇ ಇತರ ಗಾಯಗಳಿದ್ದವು. ಚೀತಾಯನ್ನು ಚಿಕಿತ್ಸೆಗೊಳಪಡಿಸಲಾಗಿತ್ತು. ಆದರೆ ತೀವ್ರ ಗಾಯಗಳಾಗಿದ್ದರಿಂದ ಇಂದು ಸಾವನ್ನಪ್ಪಿದೆ. ಇದನ್ನೂ ಓದಿ: 5 ಹುಲಿಗಳ ಸಾವು ಪ್ರಕರಣ – ಕಾರ್ಬೋಫುರಾನ್ ಕೀಟನಾಶಕ ಬಳಕೆ: ಸಿಸಿಎಫ್ ಹೀರಾಲಾಲ್
ನಭಾ ಚೀತಾದ ಸಾವಿನ ನಂತರ, ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಈಗ 26 ಚೀತಾಗಳಿವೆ. ಇದರಲ್ಲಿ ಒಂಬತ್ತು ವಯಸ್ಕ ಚೀತಾಗಳು ಅಂದರೆ 6 ಹೆಣ್ಣು ಮತ್ತು 3 ಗಂಡು ಚೀತಾಗಳಿವೆ. ಅಲ್ಲದೇ ಕಾಂಚನ್ ಜುಂಗಾ ರಾಷ್ಟ್ರೀಯ ಉದ್ಯಾನದಲ್ಲಿ ಜನಿಸಿದ 17 ಮರಿಗಳು ಸೇರಿವೆ. ಇವುಗಳಲ್ಲಿ 26 ಚೀತಾಗಳಲ್ಲಿ 16 ಚೀತಾಗಳು ಕಾಡಿನಲ್ಲಿವೆ ಎಂದು ಮಾಹಿತಿ ನೀಡಿದ್ದಾರೆ.