ದೆಹಲಿಯಲ್ಲಿ ಭೂಕಂಪನ ಅನುಭವ – ಬೆಚ್ಚಿಬಿದ್ದ ಜನ

Public TV
1 Min Read

ನವದೆಹಲಿ: ಹರಿಯಾಣದಲ್ಲಿ (Haryana) ಇಂದು ಸಂಜೆ 3.7 ತೀವ್ರತೆಯ ಭೂಕಂಪ ಸಂಭವಿಸಿದ ಬೆನ್ನಲ್ಲೇ ದೆಹಲಿಯಲ್ಲಿ (Delhi Earthquake) ಭೂಕಂಪನದ ಅನುಭವವಾಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ.

ಭೂಕಂಪದ ಕೇಂದ್ರಬಿಂದು ಜಜ್ಜರ್‌ನಲ್ಲಿತ್ತು. ಎರಡು ದಿನಗಳಲ್ಲಿ ಹರಿಯಾಣದಲ್ಲಿ ಸಂಭವಿಸಿದ ಎರಡನೇ ಭೂಕಂಪ ಇದಾಗಿದ್ದು, ದೆಹಲಿ ಮತ್ತು ಅದರ ನೆರೆಯ ಪ್ರದೇಶಗಳಲ್ಲಿ ಕಂಪನ ಉಂಟಾಗಿದೆ. ಇದನ್ನೂ ಓದಿ: ಮೋದಿ ನಿವೃತ್ತಿಗೆ‌ ಮೋಹನ್ ಭಾಗವತ್ ಸೂಚನೆ? – ವಿಪಕ್ಷಗಳಿಂದ ಬಿಜೆಪಿಗೆ ಪ್ರಶ್ನೆಗಳ ಸುರಿಮಳೆ

ಸಂಜೆ 7:49 ಕ್ಕೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಹರಿಯಾಣದ ರೋಹ್ಟಕ್ ಮತ್ತು ಬಹದ್ದೂರ್‌ಗಢ ಜಿಲ್ಲೆಗಳಲ್ಲಿಯೂ ಕಂಪನದ ಅನುಭವವಾಗಿದೆ.

ನಿನ್ನೆ ಬೆಳಗ್ಗೆ, ಜಜ್ಜರ್ ಬಳಿ 4.4 ತೀವ್ರತೆಯ ಭೂಕಂಪ ಸಂಭವಿಸಿದ್ದು, ದೆಹಲಿ-ಎನ್‌ಸಿಆರ್ ಪ್ರದೇಶದಾದ್ಯಂತ ಕಂಪನ ಉಂಟಾಗಿದೆ. ರಾಷ್ಟ್ರ ರಾಜಧಾನಿ ಭೂಕಂಪ ವಲಯ IV ರಲ್ಲಿರುವುದರಿಂದ ಭೂಕಂಪಗಳಿಗೆ ಗುರಿಯಾಗುತ್ತದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಈ ವಲಯವು ಸಾಕಷ್ಟು ಹೆಚ್ಚಿನ ಭೂಕಂಪನವನ್ನು ಹೊಂದಿದ್ದು, ಸಾಮಾನ್ಯವಾಗಿ 5-6 ತೀವ್ರತೆಯ ವ್ಯಾಪ್ತಿಯಲ್ಲಿ ಸಂಭವಿಸುತ್ತವೆ. ಕೆಲವೊಮ್ಮೆ 7-8 ರ ವ್ಯಾಪ್ತಿಯಲ್ಲಿಯೂ ಸಹ ಸಂಭವಿಸುತ್ತವೆ. ಇದನ್ನೂ ಓದಿ: ತೆಲಂಗಾಣ ಫೈರ್ ಬ್ರಾಂಡ್ ಟಿ.ರಾಜಾ ಸಿಂಗ್ ರಾಜೀನಾಮೆ ಅಂಗೀಕರಿಸಿದ ಬಿಜೆಪಿ

Share This Article