ಮೈಸೂರು: ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಮತ್ತು ವ್ಯಕ್ತಿ ಮೇಲೆ ಅಪರಿಚಿತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಲ್ಲಿ ನಡೆದಿದೆ.
ಮೈಸೂರಿನ ರಾಮಾನುಜ ರಸ್ತೆಯ 12 ಕ್ರಾಸ್ ಬಳಿ ಕಾರಿನಲ್ಲಿ ಬಂದ ಅಪರಿಚಿತರು ಮಾರಕಾಸ್ತ್ರಗಳಿಂದ ಆಟೋದಲ್ಲಿದ್ದ ಮಹಿಳೆಯರು ಹಾಗೂ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಚಲಿಸುತ್ತಿದ್ದ ಆಟೋವನ್ನು ಕಾರಿನಲ್ಲಿ ಬಂದು ದುಷ್ಕರ್ಮಿಗಳು ಅಡ್ಡ ಹಾಕಿದ್ದಾರೆ. ನಂತರ ಕಾರಿನಿಂದ ಇಳಿದು ಏಕಾಏಕಿ ಲಾಂಗ್ ತೆಗೆದು ಆಟೋದಲ್ಲಿದ್ದವರ ಮೇಲೆ ಅಟ್ಯಾಕ್ ಮಾಡಿದ್ದಾರೆ. ಸುತ್ತಮುತ್ತ ಜನರು ಭಯಭೀತರಾಗಿ ಘಟನೆ ನೋಡುತ್ತಿರುವ ದೃಶ್ಯ ಸೆರೆಯಾಗಿದೆ. ಕೆ.ಆರ್. ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.