ಉದಯಪುರದಲ್ಲಿ ಭರ್ಜರಿ ಡೆವಿಲ್ ಮೇಕಿಂಗ್!

By
1 Min Read

ಚಾಲೆಂಜಿಂಗ್‌ಸ್ಟಾರ್ ದರ್ಶನ್ (Darshan) ಅಭಿನಯದ ಬಹು ನಿರೀಕ್ಷಿತ ಸಿನಿಮಾ ಡೆವಿಲ್ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತಿದೆ. ಮಾತಿನ ಭಾಗದ ಶೂಟಿಂಗ್ ಬಹುತೇಕ ಮುಗಿದಿದ್ದು, ಡ್ಯಾನ್ಸ್ ಹಾಗೂ ಫೈಟಿಂಗ್ ಸೀಕ್ವೆನ್ಸ್ ಮಾತ್ರ ಬಾಕಿ ಉಳಿದಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ (Renukaswamy Murder Case) ದರ್ಶನ್ ಜೈಲು ಸೇರಿದ್ಮೇಲೆ ಅರ್ಧಕ್ಕೆ ನಿಂತಿದ್ದ ಸಿನಿಮಾದ ಶೂಟಿಂಗ್ ಮುಕ್ತಾಯ ಹಂತಕ್ಕೆ ಬಂದು ನಿಂತಿದೆ.


ಇದೇ ಹೊತ್ತಿನಲ್ಲೇ ಡೆವಿಲ್ ಸಿನಿಮಾದ ಮೇಕಿಂಗ್ ವಿಡಿಯೋವೊಂದನ್ನ ಬಿಡುಗಡೆ ಮಾಡಿದೆ ಚಿತ್ರತಂಡ. ಈ ಮೊದಲು ಟೀಸರ್ ಹಾಗೂ ಹುಟ್ಟುಹಬ್ಬ ಗ್ಲಿಂಪ್ಸ್ ಬಿಡುಗಡೆ ಮಾಡಿದ್ದ ಡೆವಿಲ್ ಚಿತ್ರತಂಡ, ಉದಯಪುರದಲ್ಲಿ (Udayapura) ಚಿತ್ರೀಕರಿಸಿದ ಸಾಹಸ ಸನ್ನಿವೇಶ ಸೇರಿದಂತೆ ಕೆಲ ದೃಶ್ಯಗಳನ್ನು ರಿವೀಲ್ ಮಾಡಿದೆ ಡೆವಿಲ್ ಚಿತ್ರತಂಡ. ಇದನ್ನೂ ಓದಿ: ಇಂಡಸ್ಟ್ರಿಯಲ್ಲಿ ನನಗೆ ಯಾರೂ ಫ್ರೆಂಡ್ಸ್ ಇಲ್ಲಹೀಗ್ಯಾಕಂದ್ರು ನಯನತಾರ..?

ರಾಜಸ್ತಾನದ ಉದಯಪುರದಲ್ಲಿ ಚಿತ್ರೀಕರಣದ ವೇಳೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಕೂಡಾ ಭಾಗಿಯಾಗಿದ್ದರು. ಅಲ್ಲದೇ ಈ ಭಾಗದ ಚಿತ್ರೀಕರಣದಲ್ಲಿ ನಟ ಅಚ್ಯುತ್‌ಕುಮಾರ್, ಶರ್ಮಿಳಾ ಮಾಂಡ್ರೆ, ನಾಯಕಿ ರಚನಾ ರೈ ಕೂಡಾ ಭಾಗಿಯಾಗಿದ್ದಾರೆ. ಆ ದೃಶ್ಯವಿರುವ ವಿಡಿಯೋವನ್ನ ರಿಲೀಸ್ ಮಾಡಿದೆ ಡೆವಿ ಚಿತ್ರತಂಡ. ವಿಡಿಯೋ ನೋಡಿ ದರ್ಶನ್ ಫ್ಯಾನ್ಸ್ ಖುಷಿಯಿಂದ ಕುಣಿದಾಡಿದ್ದಾರೆ. ಇದನ್ನೂ ಓದಿ: ಮೋಹನ್‌ಲಾಲ್ ಮಗಳು ವಿಸ್ಮಯ ಚಿತ್ರರಂಗಕ್ಕೆ ಎಂಟ್ರಿ!

ಸಾಂಗ್ ಹಾಗೂ ಕೆಲ ಸಾಹಸ ದೃಶ್ಯಗಳ ಚಿತ್ರೀಕರಣಕ್ಕಾಗಿ ಚಿತ್ರತಂಡ ವಿದೇಶಕ್ಕೆ ಹೋಗಲು ಪ್ಲ್ಯಾನ್‌ ಕೂಡಾ ಮಾಡಿಕೊಂಡಿದೆ. ಅಲ್ಲದೇ ಕೋರ್ಟ್‌ನಿಂದ ದರ್ಶನ್ ಅನುಮತಿ ಪಡೆದುಕೊಂಡಿದ್ದು, ಸದ್ಯದಲ್ಲಿಯೇ ವಿದೇಶಕ್ಕೆ ಹಾರಲಿದೆ ಡೆವಿಲ್ ಟೀಂ. ದುಬೈ ಹಾಗೂ ಯುರೋಪ್‌ನ ಕೆಲ ಭಾಗದಲ್ಲಿ ಚಿತ್ರೀಕರಣ ಮಾಡಲು ಡೆವಿಲ್ ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Share This Article