ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್ ಆರೋಪ ಹೊತ್ತಿರುವ ನಟ ದರ್ಶನ್, ಇದೇ ವಾರ ವಿದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಜು.1 ರಿಂದ ಜು.28ರ ವರೆಗೂ ವಿದೇಶಕ್ಕೆ ಹಾರಲು ದರ್ಶನ್ (Darshan) ಕೋರ್ಟ್‌ನಿಂದ ಅನುಮತಿ ಪಡೆದಿದ್ದರು. ಆದರೆ, ಚಿತ್ರೀಕರಣದ ವೇಳಾಪಟ್ಟಿಯಲ್ಲಿ ಅದಲು ಬದಲಾದ ಕಾರಣದಿಂದಾಗಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.
ರೇಣುಕಾಸ್ವಾಮಿ ಕೊಲೆ ಕೇಸ್ ಕುರಿತಂತೆ ಜು.10 ರಂದು ದರ್ಶನ್ ಮತ್ತು ಗ್ಯಾಂಗ್ ಕೋರ್ಟ್‌ಗೆ ಹಾಜರಾಗಬೇಕಿದೆ. ಹಾಗಾಗಿ, ಗುರುವಾರ ಎಲ್ಲರೂ ಕೋರ್ಟಿಗೆ ಹಾಜರಾಗಲಿದ್ದಾರೆ. ಕೋರ್ಟಿಗೆ ಹಾಜರಾದ ನಂತರ ದರ್ಶನ್ ಚಿತ್ರೀಕರಣಕ್ಕಾಗಿ ಥೈಲ್ಯಾಂಡ್‌ಗೆ ಪ್ರಯಾಣ ಬೆಳೆಸಲಿದ್ದಾರೆ. ಇದನ್ನೂ ಓದಿ: ಹೊಸ ಗೆಟಪ್‌ನಲ್ಲಿ ಶಿವಣ್ಣನ ಫಸ್ಟ್ ಲುಕ್ ರಿಲೀಸ್
ಡೆವಿಲ್ ಸಿನಿಮಾದ ಚಿತ್ರೀಕರಣ, ಥೈಲ್ಯಾಂಡ್‌ನಲ್ಲಿ ನಡೆಯಲಿದೆ. ಹಾಡು ಮತ್ತು ಒಂದು ಸಾಹಸ ಸನ್ನಿವೇಶವನ್ನು ಆ ದೇಶದಲ್ಲಿ ಸೆರೆ ಹಿಡಿಯಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಇದೇ ವಾರದಲ್ಲೇ ದರ್ಶನ್ ಆ್ಯಂಡ್ ಟೀಮ್ ವಿದೇಶಕ್ಕೆ ಪ್ರಯಾಣ ಬೆಳೆಸಲಿದೆ. ಅದಕ್ಕಾಗಿ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ.
ಥೈಲ್ಯಾಂಡ್ ಶೂಟಿಂಗ್ ಮುಗೀತಾ ಇದ್ದಂತೆ, ಡೆವಿಲ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯಲಿದೆಯಂತೆ. ಈಗಾಗಲೇ ಡಬ್ಬಿಂಗ್ ಕೆಲಸವನ್ನೂ ದರ್ಶನ್ ಮುಗಿಸಿದ್ದಾರೆ. ಸಣ್ಣಪುಟ್ಟ ಚಿತ್ರೀಕರಣ ಬಿಟ್ಟರೆ ಉಳಿದಂತ ಸಿನಿಮಾ ರೆಡಿಯಾಗಿದೆ ಅನ್ನೋದು ಚಿತ್ರತಂಡದಿಂದ ಬಂದಿರುವ ಮಾಹಿತಿ. ಇದನ್ನೂ ಓದಿ: ವೇಷತೊಟ್ಟು ಜೋಗತಿಯಾದ ನಟ ಶ್ರೀನಗರ ಕಿಟ್ಟಿ