ಕಾರವಾರ: ಭಾರೀ ಮಳೆ ಹಿನ್ನೆಲೆಯಲ್ಲಿ ಯಾಣ (Yana) ಪ್ರವಾಸಿ ಸ್ಥಳಕ್ಕೆ ನಿರ್ಬಂಧದ ನಡುವೆಯೂ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ.
ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಯಾಣದಲ್ಲಿ ಹೆಚ್ಚಿನ ಮಳೆ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಜೂ.19 ರಂದು ನಿರ್ಬಂಧ ವಿಧಿಸಲಾಗಿತ್ತು. ಕತಗಾಲ್ ಅರಣ್ಯ ಇಲಾಖೆ ಯಾಣ ಚಾರಣಕ್ಕೆ ಪ್ರವಾಸಿಗರಿಗೆ ನಿರ್ಬಂಧ ಹೇರಿತ್ತು. ಇದನ್ನೂ ಓದಿ: ಎಐಸಿಸಿ ಒಬಿಸಿ ಸಲಹಾ ಮಂಡಳಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ನೇಮಕ – ರಾಷ್ಟ್ರ ರಾಜಕಾರಣಕ್ಕೆ ಹೋಗ್ತಾರಾ ಸಿಎಂ?
ಕಳೆದ ವರ್ಷ ಯಾಣ ಭಾಗದಲ್ಲಿ ಗುಡ್ಡ ಕುಸಿತ ಸಂಭವಿಸಿತ್ತು. ಇದಲ್ಲದೇ ನಿರಂತರ ಮಳೆಯಾದ ದೇವಿಮನೆ ಘಟ್ಟ ಭಾಗದಲ್ಲಿ ಸಹ ಗುಡ್ಡ ಕುಸಿತವಾಗಿದೆ. ಹೀಗಾಗಿ, ಪ್ರವಾಸಿಗರಿಗೆ ಚಾರಣಕ್ಕೆ ಮತ್ತು ಯಾಣ ಕ್ಲೇವ್ ವೀಕ್ಷಣೆಗೆ ನಿಷೇಧ ಹೇರಿದೆ.
ಆದರೆ, ವೀಕೆಂಡ್ ಆದ್ದರಿಂದ ಪ್ರವಾಸಿಗರು ಯಾಣದತ್ತ ಬರುತಿದ್ದು, ಯಾಣ ವೀಕ್ಷಣೆಗೆ ನಿಯಮ ಮೀರಿ ಅವಕಾಶ ಮಾಡಿಕೊಡಲಾಗಿದೆ. ಪಾರ್ಕಿಂಗ್ ಶುಲ್ಕ ಸೇರಿದಂತೆ ಸ್ಥಳೀಯ ಶುಲ್ಕವನ್ನು ಸಮಿತಿಯವರು ವಿಧಿಸುತ್ತಿದ್ದು, ಯಾಣಕ್ಕೆ ಹೋಗುವ ದಾರಿಯ ಗೇಟ್ ಸಹ ತೆರೆಯಲಾಗಿದೆ. ಇದನ್ನೂ ಓದಿ: ಹೈಟೆಕ್ ಆಗಲಿದೆ ಮೆಜೆಸ್ಟಿಕ್ ಬಸ್ ನಿಲ್ದಾಣ – 40 ಎಕರೆ ಜಾಗದಲ್ಲಿ ಬಹುಮಾದರಿ ಟ್ರಾನ್ಸ್ಪೋರ್ಟ್ ಹಬ್!
ಸದ್ಯ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ನಿರ್ಬಂಧ ವಿಧಿಸಿದರೂ ವಾಣಿಜ್ಯ ಉದ್ದೇಶಕ್ಕೆ ಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಒಂದು ವೇಳೆ ಈ ಭಾಗದಲ್ಲಿ ಗುಡ್ಡ ಕುಸಿದರೆ ಪ್ರವಾಸಿಗರ ಗತಿ ಏನು ಎಂಬ ಪ್ರಶ್ನೆ ಏಳುವಂತೆ ಮಾಡಿದೆ.